ಜೂ.18 ರಂದು ಜಿಲ್ಲೆಯಲ್ಲಿ ಮೊದಲ ವಿದ್ಯುತ್ ಅದಾಲತ್
ಮಂಗಳೂರು, ಜೂ.16, 2022: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಮೊದಲ ವಿದ್ಯುತ್ ಅದಾಲತ್ ಜೂ.18, ಶನಿವಾರ, ಹಮ್ಮಿಕೊಳ್ಳಲಾಗಿದೆ.
ತಾಲೂಕುಗಳ ಗ್ರಾಮಪಂಚಾಯತ್ ಕಚೇರಿಯಲ್ಲಿ ವಿದ್ಯುತ್ ಅದಾಲತ್ಗೆ ನಡೆಸಲು ಸಿದ್ದತೆ ಮಾಡಲಾಗಿದ್ದು, ಮೆಸ್ಕಾಂನ ಹಿರಿಯ ಅಧಿಕಾರಿಗಳು ಅಂದು ಪ್ರತಿ ಹಳ್ಳಿಗಳಿಗೂ ಭೇಟಿ ನೀಡಲಿದ್ದಾರೆ. ಅದಾಲತ್ ಮೂಲಕ ಗ್ರಾಹಕರು ಸಮಸ್ಯೆಗಳನ್ನ ಪರಿಹರಿಸಿಕೊಳ್ಳಬಹುದಾಗಿದೆ.
ಅದಾಲತ್ ನಡೆಯುವ ಗ್ರಾ.ಪಂ. ಕಚೇರಿಗಳಿವು:
- ಮಂಗಳೂರು ತಾಲೂಕು: ಬೊಂಡಂತಿಲ, ಪಾವೂರು, ಪಡುಪೆರಾರ, ಜೋಕಟ್ಟೆ, ದೇಲಂತಬೆಟ್ಟು, ಏಳಿಂಜೆ, ಕಿಲೆಂಜಾರು ಹಾಗೂ ದರೆಗುಡ್ಡೆ ಗ್ರಾಮ ಪಂಚಾಯತ್ ಕಚೇರಿ.
- ಬಂಟ್ವಾಳ ತಾಲೂಕು: ಕರಿಯಂಗಳ, ಇರ್ವತ್ತೂರು, ಬಂದಾರು, ಕೊಕ್ಕಡ, ಮಂಚಿ ಪಂಚಾಯತ್ ಕಚೇರಿಗಳು.
- ಪುತ್ತೂರು ತಾಲೂಕು: ಗೋಳಿತಟ್ಟು, ದೋಳ್ಳಾಡಿ, ಅಲಂಕಾರು, ಕೊಡಿಯಾ, ಕೊಲ್ಲಮೊಗ್ರ, ಗ್ರಾಮ ಪಂಚಾಯತ್ ಕಚೇರಿಗಳಲ್ಲಿ ವಿದ್ಯುತ್ ಅದಾಲತ್ ನಡೆಯಲಿದೆ.
ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.