ಕ್ರೀಡಾ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ

 ಕ್ರೀಡಾ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ
Share this post

ಮಂಗಳೂರು,ಜೂ.16, 2022: 2022-23ನೇ ಸಾಲಿನಲ್ಲಿ ಕ್ರೀಡಾ ಪ್ರೋತ್ಸಾಹಧನ ನೀಡಲು ಅರ್ಹ ಕ್ರೀಡಾಪಟುಗಳಿಂದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅರ್ಜಿ ಆಹ್ವಾನಿಸಿದೆ.

ಜಿಲ್ಲಾ ಪಂಚಾಯತ್ ಅನುದಾನದಡಿ ನೀಡಲಾಗುವ ಪ್ರೋತ್ಸಾಹ ಧನಕ್ಕೆ ಜಿಲ್ಲೆಯ ಬಾಲಕ-ಬಾಲಕಿಯರು ಹಾಗೂ 30 ವರ್ಷದೊಳಗಿನ ಯುವಕ, ಯುವತಿಯರು ಅರ್ಜಿ ಸಲ್ಲಿಸಬಹುದು.

ಕ್ರೀಡಾಪಟುಗಳು 2021-22ನೇ ಸಾಲಿನಲ್ಲಿ (ದಿನಾಂಕ: 01-04-2021 ರಿಂದ 31-03-2022 ವರೆಗೆ) ಸರ್ಕಾರದಿಂದ, ಕ್ರೀಡಾ ಇಲಾಖೆಯಿಂದ, ಅಧಿಕೃತ ನೋಂದಾಯಿತ ಕ್ರೀಡಾ ಸಂಘ ಸಂಸ್ಥೆಗಳಿಂದ, ವಿಶ್ವವಿದ್ಯಾನಿಲಯಗಳಿಂದ, ಎಸ್‍ಜಿಎಫ್‍ಐನಿಂದ ಸಂಘಟಿತಗೊಂಡಿರುವ ಅಧಿಕೃತ ಕ್ರೀಡಾಕೂಟಗಳಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಿರಬೇಕು, ರಾಜ್ಯ, ರಾಷ್ಟ್ರಮಟ್ಟದಲ್ಲಿ ಪದಕ ವಿಜೇತರಾಗಿರಬೇಕು ಅಥವಾ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿರಬೇಕು. ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯಲ್ಲಿ ಅರ್ಜಿ ಪಡೆದು ಅಗತ್ಯ ದಾಖಲೆಗಳೊಂದಿಗೆ ಜೂ.30ರೊಳಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗೆ ಪ್ರದೀಪ್ ಡಿ’ಸೋಜ, ಉಪ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು, ದೂ.ಸಂಖ್ಯೆ: 0824-2451264 ಯನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!