ಜೂ. 9 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ

 ಜೂ. 9 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ
Share this post

ಮಂಗಳೂರು,ಜೂ.08, 2022: 33/11 ಕೆ.ವಿ ನೆಹರೂ ಮೈದಾನ ಉಪಕೇಂದ್ರದಿಂದ ಹೊರಡುವ 11 ಕೆ.ಚಿ ಪಾಂಡೇಶ್ವರ ಫೀಡರ್‍ನಲ್ಲಿ ಹಾಗೂ 33/11 ಕೆ.ವಿ ಅತ್ತಾವರ ಉಪಕೇಂದ್ತದಿಂದ ಹೊರಡುವ 11ಕೆ.ವಿ ಮುನೀಶ್ವರ ಫೀಡರ್‍ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ.

ಆ ಪ್ರಯುಕ್ತ ಜೂ.9ರ ಬೆಳಿಗ್ಗೆ 10 ರಿಂದ 5 ಗಂಟೆಯ ವರೆಗೆ ಎ.ಬಿ ಶೆಟ್ಟಿ ಸರ್ಕಲ್, ಭಾರತೀಯ ವಿಶ್ವ ವಿಧ್ಯಾಭವನ, ಎಸ್.ಪಿ ಆಫೀಸ್, ಪಾಂಡೇಶ್ವರ ಕಟ್ಟೆ, ಪಾಂಡೇಶ್ವರ ನ್ಯೂ ರಸ್ತೆ, ಮಹಾಲಿಂಗೇಶ್ವರ ದೇವಸ್ಥಾನ, ಅಮೃತ ನಗರ, ರೋಸಾರಿಯೋ ಚರ್ಚ್ ರೋಡ್, ಪೊಲೀಸ್ ಲೇನ್, ಪಿ.ಡಬ್ಲ್ಯೂ.ಡಿ, ಕಮರ್ಷಿಯಲ್ ಟ್ಯಾಕ್ಸ್ ಕಚೇರಿ, ಕೇರಳ ಸಮಾಜ, ಎಮ್.ವಿ.ಶೆಟ್ಟಿ, ಓಲ್ಡ್ ಕೆಂಟ್ ರಸ್ತೆ, ದೂಮಪ್ಪ ಕಂಪೌಂಡ್ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.

ಕುಲಶೇಖರ:

110/33/11 ಕೆ.ವಿ ಕುಲಶೇಖರ ಉಪಕೇಂದ್ರದಿಂದ ಹೊರಡುವ 11ಕೆ.ವಿ ಪದವು ಫೀಡರ್ ನಲ್ಲಿ, 11ಕೆ.ವಿ ದತ್ತನಗರ ಫೀಡರ್ ಹಾಗೂ 11ಕೆ.ವಿ ಇಂಡಸ್ಟ್ರೀಯಲ್ ಫೀಡರ್‍ನಲ್ಲಿ ದುರಸ್ತಿ ಕಾಮಗಾರಿ ಕೈಗೊಳ್ಳಲಾಗಿದೆ.

ಆ ನಿಮಿತ್ತ ಜೂ.9ರ ಬೆಳಿಗ್ಗೆ 10ರಿಂದ ಸಂಜೆ 5ರ ತನಕ ಬಿಕರ್ನಕಟ್ಟೆ, ಜಯಶ್ರೀಗೇಟ್, ಕಲಾಯಿಕಂಡೆಟ್ಟು, ನಾಯ್ಗರಕೇನ್, ರಮಾಶಕ್ತಿ, ಕಾನಡ್ಕ, ಕಾರ್ಮಿಕ ಕಾಲೋನಿ, ದತ್ತನಗರ, ಮೇಕೆದ ಗುಡ್ಟೆ, ಕೋಡಂಗೆ, ಶ್ರೀನಿವಾಸ ಮಲ್ಯ ಲೇಔಟ್, ಈಡನ್ ಎನ್ ಕ್ಲೇವ್, ಗುಂಡಳಿಕೆ, ಮಲ್ಲಿ ಕಂಪೌಂಡ್, ಪದವು, ಶರಬತ್ ಕಟ್ಟೆ, ಎಸ್ಟೇಟ್ ಆಫಿಸ್, ಇಂಡಸ್ಟ್ರೀಯಲ್ ಏರಿಯಾ, ಯೆಯ್ಯಾಡಿ, ಬಜ್ಜೋಡಿ, ಮಾರಿಗುಡಿ, ಅಡುಮರೋಳಿ, ನಟ್ಟಿಮನೆ, ತಾರೆತೋಟ, ತಾತಾವು, ಬೋಟ್ ಹೌಸ್ ಹಾಗೂ ಸುತ್ತಮುತ್ತಲಿ ಪ್ರದೇಶದಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.

ತಡಂಬೈಲ್:

 11ಕೆ.ವಿ ತಡಂಬೈಲ್ ಫೀಡರ್‍ನಲ್ಲಿ ತುರ್ತು ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಂಡ ಕಾರಣ ಜೂ.9ರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮುಕ್ಕ, ಸಸಿಹಿತ್ಲು, ಶ್ರೀನಿವಾಸ್ ನಗರ, ದಾಂಡಿ, ಮೂಡುಕೊಪ್ಪಳ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!