ಮಂಗಳೂರು: ಮೇ 27 ರಿಂದ ಖಾಸಗಿ ಕಂಪೆನಿಗಳ ನೇರ ಸಂದರ್ಶನ

 ಮಂಗಳೂರು: ಮೇ 27 ರಿಂದ ಖಾಸಗಿ ಕಂಪೆನಿಗಳ ನೇರ ಸಂದರ್ಶನ
Share this post

ಮಂಗಳೂರು, ಮೇ 22, 2022: ನಗರದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಖಾಸಗಿ ಕಂಪೆನಿಗಳ ನೇರ ಸಂದರ್ಶನವನ್ನು ಮೇ.27ರ ಶುಕ್ರವಾರ ಬೆಳಿಗ್ಗೆ 10 ಗಂಟೆಯಿಂದ ಗಂಟೆಯಿಂದ ಆಯೋಜಿಸಲಾಗಿದೆ.

ಎಸ್.ಎಸ್.ಎಲ್.ಸಿ., ಪಿ.ಯು.ಸಿ, ಐ.ಟಿ.ಐ, ಡಿಪ್ಲೊಮಾ ಹಾಗೂ ಯಾವುದೇ ಪದವಿ ತೇರ್ಗಡೆಯಾದ (ಬಿ.ಇ ಮತ್ತು ಬಿ.ಸಿ.ಎ ಹೊರತುಪಡಿಸಿ) ಆಸಕ್ತ ಅಭ್ಯರ್ಥಿಗಳು ಸ್ವ ವಿವರವುಳ್ಳ ಬಯೋಡೇಟಾದೊಂದಿಗೆ ನಗರದ ಮಂಗಳೂರು ಮಹಾನಗರ ಪಾಲಿಕೆ ಕಟ್ಟಡದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಹಮ್ಮಿಕೊಂಡಿರುವ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು.

ವಿವರ:

ಕಾಂಚನ ಹುಂಡೈ, ಜಸ್ಟ್ ಡಯಲ್, ಕೋಸ್ಟಲ್ ಸೆಕ್ಯೂರಿಟೀಸ್, ಈಶ ಮೋಟಾರ್ಸ್, ಕೋಜೆಂಟ್ ಇ-ಸರ್ವೀಸಸ್ ಪ್ರೈವೇಟ್ ಲಿಮಿಡೆಟ್ ಕಂಪೆನಿಗಳು ಭಾಗವಹಿಸಲಿದೆ.

ಹೆಚ್ಚಿನ ಮಾಹಿತಿಗೆ ದೂ.ಸಂಖ್ಯೆ:0824-2457139 ಯನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಪ್ರಕಟಣೆ ತಿಳಿಸಿದೆ

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!