ಕಾರವಾರ: ದ್ವಿತಿಯ ಪಿ.ಯು.ಸಿ ಪರೀಕ್ಷೆ ಮಾರ್ಗಸೂಚಿ

 ಕಾರವಾರ: ದ್ವಿತಿಯ ಪಿ.ಯು.ಸಿ ಪರೀಕ್ಷೆ ಮಾರ್ಗಸೂಚಿ
Share this post

ಕಾರವಾರ ಏ. 19, 2022: ಜಿಲ್ಲೆಯ 31 ಪರೀಕ್ಷಾ ಕೇಂದ್ರಗಳಲ್ಲಿ ದ್ವಿತಿಯ ಪಿ.ಯು.ಸಿ ಪರೀಕ್ಷೆಯು ಏ.22 ರಿಂದ ಮೇ 18 ಬೆಳಿಗ್ಗೆ 10.15 ರಿಂದ ಮಧ್ಯಾಹ್ನ 1.30 ರ ವರೆಗೆ ನಡೆಸಲಾಗುತ್ತಿದೆ.

ಅಪರ ಜಿಲ್ಲಾಧಿಕಾರಿ ಅಧ್ಯಕತೆಯಲ್ಲಿ ಏ. 12 ರಂದು ಜರುಗಿದ ಸಭೆಯಲ್ಲಿ ಕೆಳಕಂಡ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದರು.

ಕಲಾ ವಿಭಾಗ 4788, ವಾಣಿಜ್ಯ ವಿಭಾಗ 6502, ವಿಜ್ಞಾನ ವಿಭಾಗ 4037 ಒಟ್ಟು 15327 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಜಿಲ್ಲೆಯ ಗೌಪ್ಯ ವಸ್ತುಗಳನ್ನು ಠೇವಣಿಸುವಂತ ಕಾರವಾರ ಮತ್ತು ಶಿರಸಿ ಖಜಾನೆಗಳಿಗೆ ಕಡ್ಡಾಯವಾಗಿ 24*7 ಪೋಲೀಸ್ ಬಂದೋಬಸ್ತ್ ಒದಗಿಸುವಂತೆ ನೋಡಿಕೊಳ್ಳಬೇಕು, ಖಜಾನೆಗಳಲ್ಲಿ ಗೌಪ್ಯ ವಸ್ತುಗಳನ್ನು ಠೇವಣಿಸಲು ಮತ್ತು ಕೇಂದ್ರಗಳಿಗೆ ವಿತರಣಿ ಮಾಡುವಂತ ಮಾರ್ಗಾಧಿಕಾರಿಗಳಿಗೆ ವಿತರಿಸಲು ತ್ರಿಸದಸ್ಯ ಸಮಿತಿಯನ್ನು ರಚಿಸಲಾಗಿದೆ.

ಜಿಲ್ಲೆಯಲ್ಲಿ ಒಟ್ಟು 14 ಮಾರ್ಗಾಧಿಕಾರಿಗಳ ತಂಡ ರಚಸಿದ್ದು, ತಂಡದಲ್ಲಿ 1 ತಹಶೀಲ್ದಾರರು, 2 ಜನ ಕ್ಷೇತ್ರ ಶಿಕ್ಷಣಾಧಿಕಾರಿಗಳು, 3 ಜನ ಹಿರಿಯ ಪ್ರಾಂಶುಪಾಲರು ಪ.ಪೂ.ಕಾಲೇಜಿನ ಒಳಗೊಂಡಿರುತ್ತಾರೆ, ಕೇಂದ್ರಗಳಲ್ಲಿ ಪ್ರಶ್ನೆ ಪತ್ರಿಕೆ ಬಂಡಲ್‍ನ್ನು ಸಿಸಿಟಿವಿ ಅಡಿಯಲ್ಲಿ ತೆರೆಯುವುದು ಮತ್ತು ಉತ್ತರ ಪತ್ರಿಕೆಗಳನ್ನು ಸ್ವೀಕರಿಸಿ ಬಂಡಲ್ ಮಾಡುವ ಕಾರ್ಯಗಳನ್ನು ನಿರ್ವಹಿಸುವುದು.

ಪರೀಕ್ಷಾ ದಿನದಂದು ಮಾಧ್ಯಮದವರಿಗೆ ಕೇಂದ್ರಗಳಿಗೆ ವಿದ್ಯಾರ್ಥಿಗಳು ಆಗಮಿಸುವ ಸಮಯ ಮತ್ತು ಹೊರಹೋಗುವ ಸಮಯ ಚಿತ್ರೀಕರಿಸಲು ಮಾತ್ರ ಅವಕಾಶವಿದ್ದು, ಗೌಪ್ಯತೆಯ ದೃಷ್ಟಿಯಿಂದ ಪರೀಕ್ಷಾ ಕೊಠಡಿಗಳ ಒಳಗಡೆ ಚಿತ್ರೀಕರಣ ನಿಷೇಧಿಸಲಾಗಿದೆ ಎಂದರು, ಪರೀಕ್ಷಾ ಕೇಂದ್ರಗಳಿಗೆ ಸಂಚಾರಿ ಜಾಗೃತ ದಳ, ಸ್ಥಾನಿಕ ಜಾಗೃತ ದಳ ನೇಮಕ ಮಾಡಲಾಗಿದೆ.

ವಿದ್ಯಾರ್ಥಿಗಳು ಆಯಾ ಕಾಲೇಜುಗಳ ಸಮವಸ್ತ್ರವನ್ನು ಕಡ್ಡಾಯವಾಗಿ ಧರಿಸಲು ಕ್ರಮ ವಹಿಸುವುದು. ಹಾಗೂ ಈ ಕುರಿತು ಸರಕಾರದ ಆದೇಶದಂತೆ ಕ್ರಮಕೈಗೊಳ್ಳವುದು. ಪರೀಕ್ಷೆಗಳು ಶಾಂತಿ-ಸುವ್ಯವಸ್ಥೆ ಕಾಪಾಡಲು ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಪೋಲೀಸರನ್ನು ನಿಯೋಜಿಸಲು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳಿಗೆ ತಿಳಿಸಿದರು. ಪರೀಕ್ಷಾ ಕೇಂದ್ರದ ಸುತ್ತಲು 200 ಮೀ. ವ್ಯಾಪ್ತಿಯಲ್ಲಿ ಪರೀಕ್ಷಾ ದಿನದಂದು ನಿಷೇದಾಜ್ಞೆ ಜಾರಿ (ಕಲಂ 144) ಮಾಡಲಾಗಿದೆ.

ಪರೀಕ್ಷಾ ಕೇಂದ್ರಗಳ ಸಮೀಪದಲ್ಲಿರುವ ಜರಾಕ್ಸ್ ಅಂಗಡಿಗಳನ್ನು ಪರೀಕ್ಷಾ ಸಮಯದಲ್ಲಿ ಮುಚ್ಚಿಸಬೇಕು, ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಎಲ್ಲಾ ಪರೀಕ್ಷೆ ಕೇಂದ್ರಗಳಿಗೆ ಒಬ್ಬರಂತೆ ನರ್ಸ್ ಗಳನ್ನು ನಿಯೋಜಿಸುವಂತೆ ಮತ್ತು ಕೋವಿಡ್-19 ಸಾಂಕ್ರಾಮಿಕ ರೋಗ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾ ಪ.ಪೂ.ಶಿ.ಇಲಾಖೆ ಉಪನಿರ್ದೇಶಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!