ಆಗುಂಬೆ ಘಾಟಿ ಕಾಮಗಾರಿ: ವಾಹನ ಸಂಚಾರ ನಿರ್ಬಂಧ

 ಆಗುಂಬೆ ಘಾಟಿ ಕಾಮಗಾರಿ: ವಾಹನ ಸಂಚಾರ ನಿರ್ಬಂಧ
Share this post

ಉಡುಪಿ, ಮಾ 11, 2022: ಆಗುಂಬೆ ಘಾಟಿಯಲ್ಲಿ ವಾಹನ ಸಂಚಾರವನ್ನು ಮಾರ್ಚ್ 5 ರಿಂದ 15 ರವರೆಗೆ ನಿರ್ಬಂಧಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿ 169 ಎ ರ ಕಿ. ಮೀ. 33.00 ರಿಂದ 51.60 ವರೆಗೆ ನಿಯತಕಾಲಿಕ ದುರಸ್ಥಿ ಹಿನ್ನಲೆಯಲ್ಲಿ ರಸ್ತೆ ದುರಸ್ಥಿ ಕಾಮಗಾರಿಯನ್ನು ಆಗುಂಬೆ ಘಾಟಿಯಲ್ಲಿ ನಿರ್ವಹಿಸಬೇಕಾಗಿದೆ. ರಸ್ತೆ ಕಿರಿದಾಗಿದ್ದು ಡಾಂಬರೀಕರಣ ಸಮಯದಲ್ಲಿ ವಾಹನ ಸಂಚಾರ ಮಾಡಲು ಜಾಗವಿಲ್ಲದ ಹಿನ್ನಲೆ, ಮಾರ್ಚ್ 5 ರಿಂದ 15 ರವರೆಗೆ ಆಗುಂಬೆ ಘಾಟಿಯಲ್ಲಿ ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ವಾಹನ ಸಂಚಾರವನ್ನು ನಿರ್ಬಂಧಿಸಿ ಪರ್ಯಾಯ ಮಾರ್ಗದಲ್ಲಿ ವಾಹನ ಸಂಚಾರ ನಡೆಸುವಂತೆ ಜಿಲ್ಲಾಧಿಕಾರಿ ಕೂರ್ಮರಾವ್ ಆದೇಶ ಹೊರಡಿಸಿದ್ದಾರೆ. 

ಬದಲಿ ಮಾರ್ಗದ ವಿವರ :

ಲಘು ವಾಹನಗಳು: ಉಡುಪಿ-ಕಾರ್ಕಳ-ಮಾಳಾಘಾಟ್-ಶೃಂಗೇರಿ-ಕೊಪ್ಪ-ತೀರ್ಥಹಳ್ಳಿ (ರಾ.ಹೆ 169) ಮಾರ್ಗವಾಗಿ

ಭಾರೀ ವಾಹನಗಳು: ಉಡುಪಿ-ಕುಂದಾಪುರ-ಸಿದ್ಧಾಪುರು-ಹೊಸAಗಡಿ-ಮಾಸ್ತಿಕಟ್ಟೆ-ತೀರ್ಥಹಳ್ಳಿ (ರಾಜ್ಯ ಹೆದ್ದಾರಿ 52) ಮಾರ್ಗವಾಗಿ.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!