ಮಾ.11 ರಂದು ವಿದ್ಯುತ್ ವ್ಯತ್ಯಯ
ಮಂಗಳೂರು,ಮಾ.10, 2022: ಮುಲ್ಕಿ ವಿದ್ಯುತ್ ಉಪಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿಗಳನ್ನು ಮಾ.11 ರಂದು ಹಮ್ಮಿಕೊಳ್ಳಲಾಗಿದೆ.
ಆದ ಕಾರಣ ಮಾ.11ರ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1.30ರ ವರೆಗೆ ಮುಲ್ಕಿ ನಗರ, ಕೆ.ಎಸ್. ರಾವ್ ನಗರ, ಕೊಲ್ನಾಡು ಇಂಡಸ್ಟ್ರಿಯಲ್ ಏರಿಯಾ, ಚಿತ್ರಾಪು, ಬಪ್ಪನಾಡು, ಕುಬೆವೂರು, ಶಿಮಂತೂರು, ಲಿಂಗಪ್ಪಯ್ಯ ಕಾಡು, ಕೊಳಕ್ಕಾಡಿ, ಅತಿಕಾರಿಬೆಟ್ಟು, ಕಿನ್ನಿಗೋಳಿ, ಮೂರುಕಾವೇರಿ, ಪುನರೂರು, ಐಕಳ, ಉಲ್ಲಂಜೆ, ಕವತ್ತಾರು, ಪಂಜಿನಡ್ಕ, ದಾಮಸ್ ಕಟ್ಟೆ, ಎಸ್ಕೋಡಿ, ಪಕ್ಷಿಕೆರೆ, ಹಳೆಯಂಗಡಿ, ಇಂದಿರಾನಗರ, 10ನೇ ತೋಕೂರು, ಪಾವಂಜೆ, ಚೇಳಾರು, ಬಳ್ಕುಂಜೆ ವಾಟರ್ ಸಪ್ಲೈ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುವುದು ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.