ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾದೇವ್ ವೇಳಿಪ್ ರವರಿಗೆ ನುಡಿನಮನ
ಕಾರವಾರ, ಫೆ 12, 2022: ಕ.ಸಾ.ಪ ತಾಲ್ಲೂಕ ಘಟಕ ಹಾಗೂ ಕಲಾವಿದರ ವೇದಿಕೆ ಕಾರವಾರ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಜನಪದ ಕಲಾವಿದ, ಪರಿಸರ ಹೋರಾಟಗಾರ, ಜೋಯಿಡಾ ತಾಲೂಕಿನ ಕಾರ್ಟೊಳ್ಳಿ ಗ್ರಾಮದ ಮಾದೇವ್ ವೇಳಿಫವರಿಗೆ ನುಡಿನಮನ ಅರ್ಪಿಸಲಾಯಿತು.
ಕಾರ್ಯಕ್ರಮದಲ್ಲಿ ಮಾದೇವ ವೇಳಿಫ್ ವರ ಸರಳವ್ಯಕ್ತಿತ್ವ ಹಾಗೂ ಸಾಧನೆಗಳನ್ನು ಜನಶಕ್ತಿ ವೇದಿಕೆಯ ಅಧ್ಯಕ್ಷ, ಕಸಾಪ ಸದಸ್ಯ ಮಾಧವ ನಾಯಕ ಸ್ಮರಿಸಿದರು.
ಕ.ಸಾ.ಪ ಸದಸ್ಯ ಜಿ.ಡಿ.ಮನೋಜೆ, ವೇಳಿಫ್ ಅವರ ಕಲೆ,ಹೋರಾಟ,ಪ್ರಶಸ್ತಿಗಳ ಮಾಹಿತಿಯನ್ನೊಳಗೊಂಡ ಪುಸ್ತಕವನ್ನು ಕ.ಸಾ.ಪದಿಂದ ಹೊರತರಲು ಶ್ರಮಿಸೋಣವೆಂದು ಆಶಿಸಿದರು.
ತಾಲೂಕ ಕಸಾಪ ಅಧ್ಯಕ್ಷ ರಾಮ ನಾಯ್ಕ ಮಾದೇವ ವೇಳಿಫ್ ರವರ ಬದುಕು ಮತ್ತು ಬರಹಗಳು ಪುಸ್ತಕರೂಪದಲ್ಲಿ ಬರಲೇಬೇಕು ಅವರ ಸರಳ ವ್ಯಕ್ತಿತ್ವ ನಮಗೆ ಮಾದರಿ ಎಂದು ಆಶಿಸಿ ನುಡಿನಮನ ಸಮರ್ಪಿಸಿದರು.
ಕಾರ್ಯಕ್ರಮದಲ್ಲಿ ಕಸಾಪ ಕಾರವಾರ ಘಟಕದ ಎ.ಜಿ.ಕೇರಳಿಕರ ,ಜಿ.ಡಿ.ಪಾಲಕರ.ಮಾರುತಿ ಬಾಡಕರ ವಿದ್ಯಾ ರಾಮಾ ನಾಯ್ಕ. ಖೈರುನ್ನಿಸಾ ಶೇಖ. ಕಲಾವಿದರ ವೇದಿಕೆಯ ನಾಗೇಂದ್ರ ಅಂಚೇಕರ.ಅಭಿಷೇಕ ಕಳಸ. ರಾಜೇಶ ನಾಯ್ಕ, ಸುರೇಶ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.
ನುಡಿನಮನ ಮೊದಲು ಪುಷ್ಪಾರ್ಚನೆ ಮೂಲಕ ಶ್ರದ್ಧಾಂಜಲಿ ಸಮರ್ಪಿಸಲಾಯಿತು.
ಕ.ಸಾ.ಪ ಕಾರವಾರ ಘಟಕದ ಗಣೇಶ ಬಿಷ್ಠಣ್ಣನವರ ಸ್ವಾಗತಿಸಿ ನಿರೂಪಿಸಿದರು. ಕಲಾವಿದರ ವೇದಿಕೆಯ ಅಧ್ಯಕ್ಷರಾದ ಬಾಬು ಶೇಖ ವಂದಿಸಿದರು.