ಉತ್ತರ ಕನ್ನಡ: ಜಮೀನು ಖರಿದೀಸಲು ಪ್ರಸ್ತಾವನೆ ಆಹ್ವಾನ
ಕಾರವಾರ ಜ. 29, 2022: ಡಾ|| ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದ ಭೂ ಒಡೆತನ ಯೋಜನೆಯಡಿ ಜಮೀನು ಖರಿದೀಸಲು ಪ್ರಸ್ತಾವನೆಗಳನ್ನು ಆಹ್ವಾನಿಸಲಾಗಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಕ್ಕೆ ಸೇರದವರು ಮಾತ್ರ ಜಮೀನು ಮರಾಟ ಮಾಡಬಹುದಾಗಿದ್ದು, ತಮ್ಮ ಜಮೀನನ್ನು ನಿಗಮಕ್ಕೆ ಮಾರಾಟ ಮಡುವ ಬಗ್ಗೆ 100 ರೂಪಾಯಿ ಛಾಪಾ ಕಾಗದದಲ್ಲಿ ಒಪ್ಪಿಗೆ ಪತ್ರ, ಜಾತಿ ಪತ್ರ, ಪೋಟೊ, ಜಮೀನಿನ ದಾಖಲೆಗಳೊಂದಿಗೆ ಖಾತೆ ಉತಾರ, ಋಣಾಭಾರ ರಹಿತ ಪತ್ರ, ನಕ್ಷೆ, ಇವುಗಳನ್ನು ಜಿಲ್ಲಾ ವ್ಯವಸ್ಥಾಪಕರು ಡಾ|| ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮ ನಿಯಮಿತ ಕಾರವಾರ ಇವರಿಗೆ ಸಲ್ಲಿಸಬೇಕು.
ಜಮೀನಿನ ಮೇಲೆ ಕಂದಾಯ ಇಲಾಖೆ, ಎಲ್ಲಾ ಪಿಟಿಸಿಎಲ್ ದರಖಾಸ್ತು, ಭೂ ನ್ಯಾಯ ಮಂಡಳಿ, ಭೂ ಸುಧಾರಣೆ ಹೆಚ್ಚುವರಿ ಇನಾಂ, ಅರಣ್ಯ ಮತ್ತು ಇತರೆ ಕಾನೂನುಗಳಿಂದ ಮತ್ತು ತಂಟೆ ತಕರಾರುಗಳಿಂದ ಮುಕ್ತವಾಗಿರುವದರೊಂದಿಗೆ ಎಲ್ಲಾ ದಾಖಲಾತಿಗಳು ಭೂ ಮಾಲೀಕರ ಹೆಸರಿನಲ್ಲಿರಬೇಕು, ಹೆಚ್ಚಿನ ಮಾಹಿತಿಗಾಗಿ ನಿಗಮದ ಜಿಲ್ಲಾ ಕಚೇರಿ ದೂರವಾಣಿ ಸಂಖ್ಯೆ (08382-226903)ಗೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ವ್ಯವಸ್ಥಾಪಕಿ ನಿರ್ಮಲಾ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.