ಕಿನ್ನಿಗೋಳಿ ಪಟ್ಟಣ ಪಂಚಾಯತ್‍: ಕರುಡು ಅಧಿಸೂಚನೆ ಪ್ರಕಟ

 ಕಿನ್ನಿಗೋಳಿ ಪಟ್ಟಣ ಪಂಚಾಯತ್‍: ಕರುಡು ಅಧಿಸೂಚನೆ ಪ್ರಕಟ
Share this post

ಮಂಗಳೂರು, ಜ.27, 2022: ಕಿನ್ನಿಗೋಳಿ ಪಟ್ಟಣ ಪಂಚಾಯತ್‍ನ ನಿಗದಿ ಪಡಿಸಿದ 18 ವಾರ್ಡ್‍ಗಳಿಗೆ ಕ್ಷೇತ್ರ ವಿಂಗಡನೆಯ ಕರಡು ಅಧಿಸೂಚನೆಯನ್ನು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಪ್ರಕಟಿಸಿದ್ದಾರೆ.

ಅವರು ಕರ್ನಾಟಕ ಪುರಸಭೆ ಕಾಯ್ದೆ 1964 ಕಲಂ-13 ಮತ್ತು 252(2) ರಂತೆ ಈ ಅಧಿಸೂಚನೆ ಹೊರಡಿಸಿದ್ದಾರೆ.

ಕ್ಷೇತ್ರ ಎಂಗಡಣೆಯ ಕುರಿತು ಸಾರ್ವಜನಿಕರು ಅಕ್ಷೇಪಣೆ/ಸಲಹೆ ಸೂಚನೆಗಳಿದ್ದಲ್ಲೀ ಅವುಗಳನ್ನು ಲಿಖಿತವಾಗಿ, ನೇರವಾಗಿ ತಹಶೀಲ್ದಾರರ ಮುಖಾಂತರ ಈ ಕರಡು ಅಧಿಸೂಚನೆ ಪ್ರಕಟವಾದ 15 ದಿನದೊಳಗೆ ಈ ಕಚೇರಿಗೆ ಸಲ್ಲಿಸಬಹುದಾಗಿದೆ.

ಸ್ವೀಕೃತವಾದ ಎಲ್ಲಾ ಆಕ್ಷೇಪಣೆಗಳನ್ನು ಕರ್ನಾಟಕ ಪುರಸಭೆಗಳ ಕಾಯ್ದೆ 1964 ಮತ್ತು ಸರಕಾರಿ ಆದೇಶಗಳ ಮಾರ್ಗಸೂಚಿಯನ್ನು ಪರಿಶೀಲಿಸಿ ಅಂತಿಮ ಅಧಿಸೂಚನೆ ಹೊರಡಿಸಲಾಗುವುದು ಎಂದು ಪ್ರಕಟಣೆಯಲ್ಲಿ ಜಿಲ್ಲಾಧಿಕಾರಿಯವರು ತಿಳಿಸಿದ್ದಾರೆ.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!