ಆಟೋರಿಕ್ಷಾ: ಅಗತ್ಯ ಕ್ರಮಕ್ಕೆ ಸೂಚನೆ

 ಆಟೋರಿಕ್ಷಾ: ಅಗತ್ಯ ಕ್ರಮಕ್ಕೆ ಸೂಚನೆ
Share this post

ಮಂಗಳೂರು,ಫೆ. 5, 2023: ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ 2022ರ ಅಕ್ಟೋಬರ್ 27ರಂದು ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ವಿವಿಧ ಆಟೋರಿಕ್ಷಾಗಳಿಗೆ ಅಂದರೆ ಎಲೆಕ್ಟ್ರಿಕಲ್ (ಇ-ಆಟೋರಿಕ್ಷಾಗಳು), ಮೆಥನಾಲ್ ಮತ್ತು ಇಥನಾಲ್ ಇಂಧನ ಬಳಸಿ ಸಂಚರಿಸುವ ಆಟೋರಿಕ್ಷಾಗಳು ಈ ಕೆಳಕಂಡ ಅಗತ್ಯ ಕ್ರಮವಹಿಸಲು ತಿಳಿಸಲಾಗಿದೆ.

ಅದರಂತೆ ವಲಯ-1: ಎಲ್ಲಾ ವಿಧದ ಆಟೋರಿಕ್ಷಾಗಳಿಗೆ ಅಂದರೆ ಎಲೆಕ್ಟ್ರಿಕಲ್ ವೆಹಿಕಲ್ಸ್ (ಇ-ಆಟೋರಿಕ್ಷಾಗಳು) ಮೆಥನಾಲ್ ಮತ್ತು ಇಥನಾಲ್ ಇಂಧನ ಬಳಸಿ ಸಂಚರಿಸುವ ಆಟೋರಿಕ್ಷಾಗಳು ಒಳಗೊಂಡಂತೆ ವಲಯ ಸಂಖ್ಯೆ(1) ಕ್ಕೆ ಚಾಕಾಕೃತಿ ಆಕಾರದಲ್ಲಿ ಸೂಕ್ತ ರೀತಿಯ, ಎಲ್ಲರಿಗೂ ಗುರುತು ಸಿಗುವಂತಹ ಬಣ್ಣದ ಸ್ಟಿಕ್ಕರ್/ ಗುರುತಿನ ಸಂಖ್ಯೆಗಳನ್ನು ಪೊಲೀಸ್ ಇಲಾಖೆಯಿಂದ ಪಡೆದು ಅಂಟಿಸಿಕೊಳ್ಳುವುದು.

ವಲಯ-2: ಎಲ್ಲಾ ವಿಧದ ಆಟೋರಿಕ್ಷಾಗಳಿಗೆ ಅಂದರೆ ಎಲೆಕ್ಟ್ರಿಕಲ್ ವೆಹಿಕಲ್ಸ್ (ಇ-ಆಟೋರಿಕ್ಷಾಗಳು)ಮೆಥನಾಲ್ ಹಾಗೂ ಇಥನಾಲ್ ಇಂಧನ ಬಳಸಿ ಸಂಚರಿಸುವ ಆಟೋರಿಕ್ಷಾಗಳು ಒಳಗೊಂಡಂತೆ ಆಟೋರಿಕ್ಷಾದ ವಲಯ ಸಂಖ್ಯೆ(2)ಕ್ಕೆ ವೃತ್ತಾಕಾರದಲ್ಲಿ ಸೂಕ್ತ ರೀತಿಯ ಎಲ್ಲರಿಗೂ ಗುರುತು ಸಿಗುವಂತಹ ಬಣ್ಣದ ಸ್ಟಿಕ್ಕರ್/ ಗುರುತಿನ ಸಂಖ್ಯೆಗಳನ್ನು ಪೊಲೀಸ್ ಇಲಾಖೆಯಿಂದ ಪಡೆದು ಅಂಟಿಸಿಕೊಳ್ಳಬೇಕು.

2022ರ ನವೆಂಬರ್ 25ರಿಂದ ಯಾವುದೇ ಇ-ಆಟೋರಿಕ್ಷಾ, ಮೆಥನಾಲ್ ಹಾಗೂ ಇಥನಾಲ್ ಇಂಧನ ಬಳಸಿ ವಾಹನ ನೋಂದಣಿಯಾಗಿದ್ದರೂ ಅಂತಹ ವಾಹನಗಳು ವಲಯ(2)ರಲ್ಲಿ ಸಂಚರಿಸಬೇಕು. ಹಾಗೂ ವಲಯ (2)ರ ಸ್ಟಿಕ್ಕರ್ ಅಂಟಿಸಿರಬೇಕು.

ಈ ಅಧಿಸೂಚನೆ 2023ರ ಜನವರಿ 24ರಿಂದ ಮುಂದಿನ ಆದೇಶದವರೆಗೂ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾದಂಡಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಅವರು ತಿಳಿಸಿದ್ದಾರೆ. 

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!