ಪಿ.ಎಂ ಕಿಸಾನ್ ಪ್ರೋತ್ಸಾಹಧನಕ್ಕೆ ಇಕೆವೈಸಿ ಅಗತ್ಯ
ಚಿಕ್ಕಮಗಳೂರು, ಜ.13, 2022: ಪಿಎಂ ಕಿಸಾನ್ ಯೋಜನೆಯಡಿ ಜಿಲ್ಲೆಯ ರೈತರಿಗೆ ಈಗಾಗಲೇ ನೇರ ಆರ್ಥಿಕ ನೆರವು ವರ್ಗಾವಣೆಯು ಚಾಲ್ತಿಯಲ್ಲಿದ್ದು, ಸದರಿ ಯೋಜನೆಯ ನೆರವು ನೈಜ ಫಲಾನುಭವಿಗಳಿಗೆ ದೊರಕುತ್ತಿರುವುದನ್ನು ಖಾತ್ರಿ ಪಡಿಸಿಕೊಳ್ಳಲು ಇ-ಕೆವೈಸಿ ಮಾಡುವುದು ಅವಶ್ಯಕಕವಾಗಿದೆ.
ರೈತರು https://pmkisan.gov.in/ ಪೋರ್ಟಲ್‌ನ ಫಾರ್ಮರ್‍ಸ್ ಕಾರ್ನರ್‌ನ ಇ-ಕೆವೈಸಿ ಅವಕಾಶದಡಿ ಈಗಾಗಲೇ ಪಿ.ಎಂ.ಕಿಸಾನ್ ಯೋಜನೆಯಡಿ ಫಲಾನುಭವಿಯಾಗಿರುವ ಪ್ರತಿಯೊಬ್ಬ ರೈತನ ಆಧಾರ್ ಸಂಖ್ಯೆಯನ್ನು ನಂತರ ಆಧಾರ್ ಸಂಖ್ಯೆಯೊಂದಿಗೆ ನೋಂದಣಿಯಾಗಿರುವ ಮೊಬೈಲ್ ಸಂಖ್ಯೆಯನ್ನು ದಾಖಲಿಸಬೇಕು.
ನಂತರ ಮೊಬೈಲ್ ಗೆ ಒಟಿಪಿಯು ರವಾನೆಯಾಗುತ್ತದೆ. ಹೀಗೆ ಸ್ವೀಕರಿಸಿದ ಓಟಿಪಿ ಯನ್ನು ಪೋರ್ಟಲ್‌ನಲ್ಲಿ ದಾಖಲಿಸಿ submit for auth ಎಂಬ ಬಟನ್ ಒತ್ತಬೇಕು, ಆಗ ತಂತ್ರಾಂಶ ಆಧಾರಿತ ಪರಿಶೀಲನೆ ನಡೆದ ಇ.ಕೆವೈಸಿ successfully submitted ಎಂಬ ಚೆಕ್ ಬಾಕ್ಸ್ ಗೋಚರಿಸುತ್ತದೆ. ಹೀಗೆ ಮೊಬೈಲ್ ಓಟಿಪಿ ಆಧಾರಿತವಾಗಿ ಫಲಾನುಭವಿಯು ಖುದ್ದಾಗಿ ಇಕೆವೈಸಿ ಮಾಡಬಹುದಾಗಿದೆ. ಈಗಾಗಲೇ ಇಕೆವೈಸಿ ಆಗಿದ್ದರೆ ಇಕೆವೈಸಿ already done ಎಂಬ ಮಾಹಿತಿಯು ಗೋಚರಿಸುತ್ತದೆ.
ಫಲಾನುಭವಿಯ ಮೊಬೈಲ್ ಸಂಖ್ಯೆ ಆಧಾರ್ ಸಂಖ್ಯೆಯೊಂದಿಗೆ ಜೋಡಣೆಯಾಗಿರುವುದಿಲ್ಲವೋ ಅಥವಾ ಯಾವ ಮೊಬೈಲ್ ಸಂಖ್ಯೆಗೆ ಇಕೆವೈಸಿ ಗಾಗಿ ಕಳುಹಿಸಿದ ಓಟಿಪಿಯು ಸ್ವೀಕೃತವಾಗಿರುವುದಿಲ್ಲವೋ ಅವರು ಸಿಎಸ್‌ಸಿ (ನಾಗರೀಕಾ ಸೇವಾ ಕೇಂದ್ರ)ಗೆ ತೆರಳಿ, ಅಲ್ಲಿ ಬಯೋಮೆಟ್ರಿಕ್ ಆಧಾರಿತವಾಗಿ ಕೈ ಬೆರಳಿನ ಗುರುತು ಆಧಾರದ ಮೇಲೆ ಇಕೆವೈಸಿ ಮಾಡಬಹುದಾಗಿರುತ್ತದೆ.
ಇಕೆವೈಸಿ ಯೋಜನೆಯ ಪ್ರತಿ ಫಲಾನುಭವಿ ರೈತನು ಕೇಂದ್ರ ಸರ್ಕಾರವು ಮುಂದಿನ ಚಾತುರ್ಮಾಸಿಕದಲ್ಲಿ (ಏಪ್ರಿಲ್ 22 ರಿಂದ ಜುಲೈ 22 ರವರೆಗೆ) ನೀಡುವ ಆರ್ಥಿಕ ನೆರವು ಪಡೆಯಲು ಮಾರ್ಚ್ ೩೧ ರೊಳಗೆ ಇಕೆವೈಸಿಒ ಮಾಡಿಸುವುದು ಕಡ್ಡಾಯವಾಗಿರುತ್ತದೆ ಹಾಗೂ ಪಿಎಂಕಿಸಾನ್ ಸಮ್ಮಾನ್ ನಿಧಿ ಯೋಜನೆಯ 10 ನೇ ಕಂತಿನ ಪ್ರೋತ್ಸಾಹಧನ ಫಲಾನುಭವಿಗಳ ದಾಖಲಾತಿಗಳ ಮರುಪರಿಶೀಲನೆಗೋಸ್ಕರ ಕೆಲವು ರೈತರಿಗೆ ಪಾವತಿಯನ್ನು ತಡೆಹಿಡಯಲಾಗಿದ್ದು, ತಡೆಹಿಡಿಯಲಾದ ಪ್ರೋತ್ಸಾಹ ಧನವನ್ನು ಫಲಾನುಭವಿಗಳಿಗೆ ಮರು ವರ್ಗಾವಣೆ ಮಾಡಲು ರೈತರು ತಮ್ಮ ಇತ್ತೀಚಿನ ಮಾಹೆಯ ಪಹಣಿ, ಆಧಾರ್ ಕಾರ್ಡ್ ದಾಖಲಾತಿಗಳೊಂದಿಗೆ ತಮ್ಮ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರ/ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಿಟಿಜನ್ ಸರ್ವೀಸ್ ಸೆಂಟರ್‍ಸ್ (ನಾಗರೀಕ ಸೇವಾ ಕೇಂದ್ರ) ಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.