ರಾಜ್ಯ ಸರ್ಕಾರಿ ನೌಕರರಿಗೆ ಜುಲೈ ನಲ್ಲಿ 7ನೇ ವೇತನ ಆಯೋಗ ಜಾರಿ: ಸುಬ್ರಹ್ಮಣ್ಯ ಶೇರಿಗಾರ್

 ರಾಜ್ಯ ಸರ್ಕಾರಿ ನೌಕರರಿಗೆ ಜುಲೈ ನಲ್ಲಿ 7ನೇ ವೇತನ ಆಯೋಗ ಜಾರಿ: ಸುಬ್ರಹ್ಮಣ್ಯ ಶೇರಿಗಾರ್
Share this post

ಉಡುಪಿ, ಡಿ 26, 2021: ಕೇಂದ್ರ ಮತ್ತು ರಾಜ್ಯ ಸರ್ಕಾರಿ ವೇತನದಲ್ಲಿನ ವ್ಯತ್ಯಾಸಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಿ ನೌಕರರ ಬಹು ಬೇಡಿಕೆಯ 7 ನೇ ವೇತನ ಆಯೋಗವು 2022 ರ ಜುಲೈನಲ್ಲಿ ಜಾರಿಯಾಗಲಿದ್ದು , ಈ ಬಗ್ಗೆ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಸಕಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಉಡುಪಿ ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್ ಹೇಳಿದರು.

ಅವರು ಭಾನುವಾರ, ಹೋಟೆಲ್ ಮಣಿಪಾಲ ಇನ್ ನಲ್ಲಿ ನಡೆದ ಜಿಲ್ಲಾ ಸರಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆಯ ಆಧ್ಯಕ್ಷತೆ ವಹಿಸಿ ಮಾತನಾಡಿದರು.

ಸರ್ಕಾರಿ ನೌಕರರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆ ಯೋಜನೆಯು ಶೀಘ್ರದಲ್ಲಿ ಜಾರಿಗೊಳ್ಳಲಿದ್ದು, 7 ನೇ ವೇತನ ಆಯೋಗ ರಚನೆ ಕುರಿತಂತೆ ಜನವರಿಯಿಂದ ವಿವಿಧ ರೀತಿಯ ಪ್ರಯತ್ನಗಳನ್ನು ಸಂಘ ಮಾಡಲಿದ್ದು, ಈ ಸಂದರ್ಭದಲ್ಲಿ ಎಲ್ಲಾ ನೌಕರರು ಸಂಘ ನೀಡುವ ಸೂಚನೆಗಳನ್ನು ಪಾಲಿಸುವುದರ ಮೂಲಕ ,ಕೇಂದ್ರ ಸರ್ಕಾರಿ ನೌಕರರಿಗೆ ಸಮಾನವಾದ ವೇತನವನ್ನು ರಾಜ್ಯ ಸರ್ಕಾರಿ ನೌಕರರು ಪಡೆಯಲು ಸಂಘಟಿತರಾಗಿ ಹೋರಾಡಬೇಕಿದೆ , 7 ವೇತನ ಆಯೋಗ ಜಾರಿ ನಂತರ ಎನ್.ಪಿಎಸ್ ರದ್ದುಗೊಳಿಸುವ ಕುರಿತಂತೆ ಸಂಘ ಕಾಯೋನ್ಮುಖವಾಗಲಿದ್ದು, ಸರ್ಕಾರಿ ನೌಕರರ ಯಾವುದೇ ಸಮಸ್ಯೆಗಳನ್ನು ಬಗೆಹರಿಸಲು ಸಂಘವು ಸದಾ ಬದ್ದವಾಗಿದೆ ಎಂದರು.

ಎಸ್.ಎಸ್.ಎಲ್ , ಪಿಯುಸಿ ಯಲ್ಲಿ ಹೆಚ್ಚು ಅಂಕ ಗಳಿಸಿದ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಜಿಲ್ಲಾ ಸರಕಾರಿ ನೌಕರರ ಮಕ್ಕಳನ್ನು ಹಾಗೂ ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು.

ಉಡುಪಿ ಜಿಲ್ಲಾ ಕಾರಾಗೃಹದ ಅಧೀಕ್ಷಕ ಶ್ರೀನಿವಾಸ್, ಹೋಟೆಲ್ ಮಣಿಪಾಲ ಇನ್ ನ ವ್ಯವಸ್ಥಾಪಕ ನಿರ್ದೇಶಕ ಇಬ್ರಾಹಿಂ ಸಾಹೇಬ್, ಜಿಲ್ಲಾ ಸರಕಾರಿ ನೌಕರರ ಸಂಘದ ಖಜಾಂಚಿ ಶರೀಫ್ ಮ ರೋಣ , ಉಪಾಧ್ಯಕ್ಷರಾದ ದೇವರಾಜ ಪಾಣ,ಸುಭಾಶ್ಚಂದ್ರ ಹೆಗ್ಡೆ,ಪ್ರಶಾಂತ್ ಶೆಟ್ಟಿ , ಕುಂದಾಪುರ ತಾ.ಸ.ನೌ.ಸಂ.ಅಧ್ಯಕ್ಷ ದಿನಕರ ಶೆಟ್ಟಿ, ಕಾರ್ಕಳ ತಾ.ಸ.ನೌ.ಸಂ.ಅಧ್ಯಕ್ಷ ಜೋಕಿಂ ಪಿಂಟೋ, ಹೆಬ್ರಿ ತಾ.ಸ.ನೌ.ಸಂ.ಅಧ್ಯಕ್ಷ ಹರೀಶ್ ಪೂಜಾರಿ, ಕಾಪು ತಾ.ಸ.ನೌ.ಸಂ.ಅಧ್ಯಕ್ಷ ನಾಗೇಶ್ ಬಿಲ್ಲವ ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲಾ ಸರಕಾರಿ ನೌಕರರ ಸಂಘದ ಕಾರ್ಯದರ್ಶಿ ಉದಯ ಕುಮಾರ್ ಶೆಟ್ಟಿ ಸ್ವಾಗತಿಸಿದರು, ರಾಜ್ಯ ಪರಿಷತ್ ಸದಸ್ಯ ಕಿರಣ್ ಹೆಗ್ಡೆ ವಂದಿಸಿದರು. ದಯಾನಂದ ಮತ್ತು ಮಂಜುಳಾ ಜಯಕರ್ ನಿರೂಪಿಸಿದರು.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!