ದ.ಕ ಸ್ಥಳೀಯ ಪ್ರಾಧಿಕಾರ ಚುನಾವಣಾ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ದ್ವೈವಾರ್ಷಿಕ ಚುನಾವಣೆ: ಶೇ.99.55 ರಷ್ಟು ಮತದಾನ

 ದ.ಕ ಸ್ಥಳೀಯ ಪ್ರಾಧಿಕಾರ ಚುನಾವಣಾ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ದ್ವೈವಾರ್ಷಿಕ ಚುನಾವಣೆ: ಶೇ.99.55 ರಷ್ಟು ಮತದಾನ
Share this post

ಮಂಗಳೂರು ಡಿ.10, 2021: ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಚುನಾವಣಾ ಕ್ಷೇತ್ರದಿಂದ ರಾಜ್ಯ ವಿಧಾನ ಪರಿಷತ್ತಿಗೆ ದ್ವೈವಾರ್ಷಿಕ ಚುನಾವಣೆಗೆ ಡಿ.10ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆ ಮತದಾನ ನಡೆದಿದ್ದು, ಒಟ್ಟಾರೆ ಶೇ.99.55 ಮತದಾನವಾಗಿದೆ.

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಒಟ್ಟು 14 ತಾಲೂಕುಗಳಲ್ಲಿನ 6,040 ಮತದಾರರ ಪೈಕಿ 6,013 ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ. 2,915 ಪುರುಷ ಮತದಾರರಲ್ಲಿ  2,902 ಮಂದಿ ಮತದಾರರು ಹಾಗೂ 3,125 ಮಹಿಳಾ ಮತದಾರರಲ್ಲಿ 3,111 ಮಹಿಳೆಯರು ಮತ ಚಲಾಯಿಸಿದ್ದಾರೆ.

ಉಡುಪಿ ಜಿಲ್ಲೆಯ ಬೈಂದೂರು, ಹೆಬ್ರಿ, ದಕ್ಷಿಣ ಕನ್ನಡ ಜಿಲೆಯ ಮೂಡುಬಿದರೆ, ಬಂಟ್ವಾಳ ಹಾಗೂ ಕಡಬ ಸೇರಿದಂತೆ ಒಟ್ಟು 5 ತಾಲೂಕುಗಳಲ್ಲಿ ಶೇ.100 ರಷ್ಟು ಮತದಾನವಾಗಿದೆ.

ವಿವಿಧ ತಾಲೂಕುಗಳಲ್ಲಿ ಮತಚಲಾವಣೆಯಾದ ಮತಗಳ ವಿವರ ಇಂತಿದೆ:

ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿ ಒಟ್ಟು 258 ಮತದಾರರಲ್ಲಿ 123 ಪುರುಷ ಹಾಗೂ 135 ಮಹಿಳಾ ಮತದಾರರಿದ್ದು ಅಲ್ಲಿ ಶೇ. 100 ರಷ್ಟು ಮತದಾನವಾಗಿದೆ.

ಕುಂದಾಪುರದಲ್ಲಿ ಒಟ್ಟು 614 ಮತದಾರರಿದ್ದು, 296 ಪುರುಷ ಹಾಗೂ 318 ಮಹಿಳಾ ಮತದಾರರಾಗಿದ್ದಾರೆ. ಅವರಲ್ಲಿ 295 ಪುರುಷರು ಹಾಗೂ 314 ಮಹಿಳೆಯರು ಸೇರಿದಂತೆ ಒಟ್ಟು 609 ಮಂದಿ ಮತ ಚಲಾಯಿಸಿದ್ದು, ಶೇ. 99.19 ರಷ್ಟು ಮತದಾನವಾಗಿದೆ.

ಬ್ರಹ್ಮಾವರದಲ್ಲಿ ಒಟ್ಟು 427 ಮತದಾರರಲ್ಲಿ 210 ಪುರುಷ ಹಾಗೂ 217 ಮಹಿಳಾ ಮತದಾರರಾಗಿದ್ದಾರೆ. ಅವರಲ್ಲಿ 208 ಪುರುಷ ಹಾಗೂ 217 ಮಹಿಳೆಯರು ಸೇರಿದಂತೆ 425 ಮಂದಿ ಮತ ಚಲಾಯಿಸಿದ್ದು, ಶೇ. 99.53 ರಷ್ಟು ಮತದಾನವಾಗಿದೆ.

ಉಡುಪಿ ತಾಲೂಕಿನಲ್ಲಿ ಒಟ್ಟು 369 ಮತದಾರರಲ್ಲಿ 181 ಪುರುಷ ಹಾಗೂ 188 ಮಹಿಳಾ ಮತದಾರರಾಗಿದ್ದಾರೆ. ಅವರಲ್ಲಿ 181 ಪುರುಷ ಹಾಗೂ 187 ಮಹಿಳೆಯರು ಸೇರಿದಂತೆ 368 ಮಂದಿ ಮತ ಚಲಾಯಿಸಿದ್ದು, ಶೇ. 99.73 ರಷ್ಟು ಮತದಾನವಾಗಿದೆ.

ಕಾಪು ತಾಲೂಕಿನಲ್ಲಿ ಒಟ್ಟು 288 ಮತದಾರರಲ್ಲಿ 134 ಪುರುಷ ಹಾಗೂ 154 ಮಹಿಳಾ ಮತದಾರರಾಗಿದ್ದಾರೆ. ಅವರಲ್ಲಿ 133 ಪುರುಷ ಹಾಗೂ 152 ಮಹಿಳೆಯರು ಸೇರಿದಂತೆ 285 ಮಂದಿ ಮತ ಚಲಾಯಿಸಿದ್ದು, ಶೇ. 98.96 ರಷ್ಟು ಮತದಾನವಾಗಿದೆ.

ಹೆಬ್ರಿ ತಾಲೂಕಿನಲ್ಲಿ ಒಟ್ಟು 122 ಮತದಾರರಲ್ಲಿ 57 ಪುರುಷ ಹಾಗೂ 65 ಮಹಿಳಾ ಮತದಾರರಾಗಿದ್ದಾರೆ. ಅವರಲ್ಲಿ 57 ಪುರುಷ ಹಾಗೂ 65 ಮಹಿಳೆಯರು ಸೇರಿದಂತೆ 122 ಮಂದಿ ಮತ ಚಲಾಯಿಸಿದ್ದು, ಶೇ. 100 ರಷ್ಟು ಮತದಾನವಾಗಿದೆ.

ಕಾರ್ಕಳ ತಾಲೂಕಿನಲ್ಲಿ ಒಟ್ಟು 427 ಮತದಾರರಲ್ಲಿ 207 ಪುರುಷ ಹಾಗೂ 220 ಮಹಿಳಾ ಮತದಾರರಾಗಿದ್ದಾರೆ. ಅವರಲ್ಲಿ 206 ಪುರುಷ ಹಾಗೂ 219 ಮಹಿಳೆಯರು ಸೇರಿದಂತೆ 425 ಮಂದಿ ಮತ ಚಲಾಯಿಸಿದ್ದು, ಶೇ. 99.53 ರಷ್ಟು ಮತದಾನವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ತಾಲೂಕಿನಲ್ಲಿ  ಒಟ್ಟು 222 ಮತದಾರರಲ್ಲಿ 110 ಪುರುಷ ಹಾಗೂ 112 ಮಹಿಳಾ ಮತದಾರರಾಗಿದ್ದಾರೆ. ಅವರಲ್ಲಿ 110 ಪುರುಷ ಹಾಗೂ 112 ಮಹಿಳೆಯರು ಸೇರಿದಂತೆ 222 ಮಂದಿ ಮತ ಚಲಾಯಿಸಿದ್ದು, ಶೇ. 100 ರಷ್ಟು ಮತದಾನವಾಗಿದೆ.

ಮಂಗಳೂರು ತಾಲೂಕಿನಲ್ಲಿ ಒಟ್ಟು 769 ಮತದಾರರಲ್ಲಿ 375 ಪುರುಷ ಹಾಗೂ 394 ಮಹಿಳಾ ಮತದಾರರಾಗಿದ್ದಾರೆ. ಅವರಲ್ಲಿ 371 ಪುರುಷ ಹಾಗೂ 392 ಮಹಿಳೆಯರು ಸೇರಿದಂತೆ 763  ಮಂದಿ ಮತ ಚಲಾಯಿಸಿದ್ದು, ಶೇ. 99.22 ರಷ್ಟು ಮತದಾನವಾಗಿದೆ.

ಬಂಟ್ವಾಳ ತಾಲೂಕಿನಲ್ಲಿ ಒಟ್ಟು 903 ಮತದಾರರಲ್ಲಿ 437 ಪುರುಷ ಹಾಗೂ 466 ಮಹಿಳಾ ಮತದಾರರಾಗಿದ್ದಾರೆ. ಅವರಲ್ಲಿ 437 ಪುರುಷ ಹಾಗೂ 466 ಮಹಿಳೆಯರು ಸೇರಿದಂತೆ 903 ಮಂದಿ ಮತ ಚಲಾಯಿಸಿದ್ದು, ಶೇ. 100 ರಷ್ಟು ಮತದಾನವಾಗಿದೆ.

ಬೆಳ್ತಂಗಡಿ ತಾಲೂಕಿನಲ್ಲಿ ಒಟ್ಟು 678 ಮತದಾರರಲ್ಲಿ 324 ಪುರುಷ ಹಾಗೂ 354 ಮಹಿಳಾ ಮತದಾರರಾಗಿದ್ದಾರೆ. ಅವರಲ್ಲಿ 324 ಪುರುಷ ಹಾಗೂ 352 ಮಹಿಳೆಯರು ಸೇರಿದಂತೆ 676 ಮಂದಿ ಮತ ಚಲಾಯಿಸಿದ್ದು, ಶೇ. 99.71 ರಷ್ಟು ಮತದಾನವಾಗಿದೆ.

ಪುತ್ತೂರು ತಾಲೂಕಿನಲ್ಲಿ ಒಟ್ಟು 375 ಮತದಾರರಲ್ಲಿ 184 ಪುರುಷ ಹಾಗೂ 191 ಮಹಿಳಾ ಮತದಾರರಾಗಿದ್ದಾರೆ. ಅವರಲ್ಲಿ 181 ಪುರುಷ ಹಾಗೂ 191 ಮಹಿಳೆಯರು ಸೇರಿದಂತೆ 372 ಮಂದಿ ಮತ ಚಲಾಯಿಸಿದ್ದು, ಶೇ. 99.20 ರಷ್ಟು ಮತದಾನವಾಗಿದೆ.

ಸುಳ್ಯ ತಾಲೂಕಿನಲ್ಲಿ ಒಟ್ಟು 303 ಮತದಾರರಲ್ಲಿ 145 ಪುರುಷ ಹಾಗೂ 158 ಮಹಿಳಾ ಮತದಾರರಾಗಿದ್ದಾರೆ. ಅವರಲ್ಲಿ 144 ಪುರುಷ ಹಾಗೂ 156 ಮಹಿಳೆಯರು ಸೇರಿದಂತೆ 300 ಮಂದಿ ಮತ ಚಲಾಯಿಸಿದ್ದು, ಶೇ. 99.01 ರಷ್ಟು ಮತದಾನವಾಗಿದೆ.

ಕಡಬ ತಾಲೂಕಿನಲ್ಲಿ ಒಟ್ಟು 285 ಮತದಾರರಲ್ಲಿ 132 ಪುರುಷ ಹಾಗೂ 153 ಮಹಿಳಾ ಮತದಾರರಾಗಿದ್ದಾರೆ. ಅವರಲ್ಲಿ 132 ಪುರುಷ ಹಾಗೂ 153 ಮಹಿಳೆಯರು ಸೇರಿದಂತೆ 285 ಮಂದಿ ಮತ ಚಲಾಯಿಸಿದ್ದು, ಶೇ. 100 ರಷ್ಟು ಮತದಾನವಾಗಿದೆ ಎಂದು ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಚುನಾವಣಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳೂ ಆಗಿರುವ ಅಪರ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿ. 10 ರಂದು ನಡೆದ ಚುನಾವಣೆಯ ಮತದಾನದ ಮತ ಎಣಿಕೆಯನ್ನು ಡಿ.14 ರಂದು ಬೆಳಿಗ್ಗೆ 8 ಗಂಟೆಗೆ ನಗರದ ಪಾಂಡೇಶ್ವರದ ರೊಸಾರಿಯೊ ಪಿಯು-ಡಿಗ್ರಿ ಕಾಲೇಜಿನಲ್ಲಿ ನಡೆಸಲಾಗುವುದು. ಅದಕ್ಕಾಗಿ ಮೇಲ್ವಿಚಾರಕರು ಮತ್ತು ಸಹಾಯಕ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ ಎಂದು ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಚುನಾವಣಾ ಕ್ಷೇತ್ರದ ಚುನಾಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!