ಕೋವಿಡ್ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳ ಮಾಹಿತಿ ಒದಗಿಸಲು ಮನವಿ
ಮಂಗಳೂರು, ನ 26, 2021: 2020ರ ಮಾರ್ಚ್ 1 ರಿಂದ ಇದೂವರಗೂ ಕೋವಿಡ್-19 ಸೋಂಕಿನಿಂದಾಗಿ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡ ಅಥವಾ ಒಬ್ಬ ಹೆತ್ತವರು ಕೋವಿಡ್ನಿಂದ ಹಾಗೂ ಇನ್ನೊಬ್ಬರನ್ನು ಇತರೆ ಕಾರಣದಿಂದ ಕಳೆದುಕೊಂಡ ಮಕ್ಕಳಿಗೆ “ಮುಖ್ಯಮಂತ್ರಿ ಬಾಲಸೇವಾ ಯೋಜನೆ” ಮತು ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ (“PM Cares for
Children”) ಯೋಜನೆಯಡಿ 23 ವರ್ಷಗಳು ತುಂಬುವವರೆಗೆ ಸೌಲಭ್ಯಗಳನ್ನು ಒದಗಿಸಬೇಕಿರುತ್ತದೆ.
ಆದ್ದರಿಂದ ಇಂತಹ ಮಕ್ಕಳ ಮಾಹಿತಿ ದೊರೆತಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ದೂ. ಸಂ: 0824-2440004, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ದೂ. ಸಂ: 0824-2451254 ಹಾಗೂ ಚೈಲ್ಡ್ ಲೈನ್-1098 (ದಕ್ಷಿಣಕನ್ನಡ ಜಿಲ್ಲೆ) ಗೆ ಸಂಪರ್ಕಿಸುವಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.