ದೇಶದ ನಾಗರೀಕರನ್ನು ಆರ್ಥಿಕವಾಗಿ ಸ್ವಾವಲಂಭಿಗಳನ್ನಾಗಿಸಲು ಸರಕಾರದಿಂದ ಹಲವು ಯೋಜನೆ ಜಾರಿ: ಭಗವಂತ ಖೂಬಾ

 ದೇಶದ ನಾಗರೀಕರನ್ನು ಆರ್ಥಿಕವಾಗಿ ಸ್ವಾವಲಂಭಿಗಳನ್ನಾಗಿಸಲು ಸರಕಾರದಿಂದ ಹಲವು ಯೋಜನೆ ಜಾರಿ: ಭಗವಂತ ಖೂಬಾ
Share this post

ಮಂಗಳೂರು, ಅ.30, 2021: ಜನಸಾಮಾನ್ಯರ ಕಲ್ಯಾಣಕ್ಕಾಗಿ ಕೇಂದ್ರ ಸರಕಾರವು ಜಾರಿಗೊಳಿಸಿದ ಜನಪರ ಯೋಜನೆಗಳಿಂದಾಗಿ ದೇಶವು ಪ್ರಗತಿ ಪಥದತ್ತ ಸಾಗುತ್ತಿದೆ,  ನಾಗರೀಕರು ಆರ್ಥಿಕವಾಗಿ ಸ್ವಾವಲಂಬಿಗಳಾಗುತ್ತಾ ಆತ್ಮನಿರ್ಭರರಾಗುತ್ತಿದ್ದಾರೆ ಎಂದು ಕೇಂದ್ರದ ನವೀನ, ನವೀಕರಿಸಬಹುದಾದ ಇಂಧನ, ರಸಾಯನಿಕ ಹಾಗೂ ರಸಗೊಬ್ಬರಗಳ ರಾಜ್ಯ ಖಾತೆಯ ಸಚಿವರಾದ ಭಗವಂತ ಖೂಬಾ ಅವರು ಅಭಿಪ್ರಾಯಪಟ್ಟರು.

ಅವರು ಶನಿವಾರ ಬಂಟವಾಳದ ಬಂಟರ ಭವನದಲ್ಲಿ ಜಿಲ್ಲೆಯ ರಾಷ್ಟ್ರೀಕೃತ, ಖಾಸಗಿ, ಸ್ಥಳೀಯ ಬ್ಯಾಂಕ್‍ಗಳು, ನಬಾರ್ಡ್ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾಲ ಸಂಪರ್ಕ ಹಾಗೂ ವಿವಿಧ ಯೋಜನೆಗಳ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ದೇಶದ 75ನೇ ಸ್ವಾತಂತ್ರೋತ್ಸವದ ಹಿನ್ನಲೆಯಲ್ಲಿ ಜನ ಸಾಮಾನ್ಯರ ಏಳಿಗೆಗಾಗಿ ಈ ರೀತಿಯ ಜನಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ, ವಿವಿಧ ಯೋಜನೆಗಳಿಂದ ವಂಚಿತರಾದವರಿಗೆ ದೇಶದ ಪ್ರಧಾನಿಗಳು ನೆರವು ನೀಡುತ್ತಿದ್ದಾರೆ, ರಾಷ್ಟ್ರದಲ್ಲಿ 12 ಕೋಟಿಗೂ ಹೆಚ್ಚಿನ ಮನೆಗಳಿಗೆ ಶೌಚಾಲಯಗಳನ್ನು ನಿರ್ಮಿಸಿ ಕೊಡಲಾಗಿದೆ,   16 ಕೋಟಿ ರೈತರು ವಿವಿಧ ಯೋಜನೆಗಳ ಲಾಭ ಪಡೆದಿದ್ದಾರೆ ಎಂದು ಹೇಳಿದರು.

ಜಿಲ್ಲೆಯಲ್ಲಿ 1,95,606 ಮಂದಿ ಮುದ್ರಾಯೋಜನೆ ಲಾಭ ಪಡೆದಿದ್ದಾರೆ. ಬೀದಿ ವ್ಯಾಪಾರಿಗಳ ಸಹಿತ ಹಲವರಿಗೆ ಸಾಲ, ಸೌಲಭ್ಯಗಳು ದೊರಕಿವೆ. ಇದು ಸಂಸದ ನಳಿನ್ ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ದ.ಕ. ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಶ್ರಮದಿಂದ ಸಾಧ್ಯವಾಗಿದೆ ಎಂದರು.

ಸಂಸದರಾದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಸಾಲಮೇಳ ಮೂಲಕ ಈ ಜಿಲ್ಲೆಯ ಜನರು ಬ್ಯಾಂಕಿಗೆ ಹೋಗಿ ಸಾಲ ಪಡೆಬಹುದೆಂದು ಈ ಹಿಂದೆಯೆ ಸಾಬೀತು ಪಡಿಸಲಾಗಿದೆ, ಡಿಜಿಟಲ್ ಇಂಡಿಯಾ, ಜನಧನ್ ಅಕೌಂಟ್ ಮೂಲಕ ನೇರವಾಗಿ ಫಲಾನುಭವಿಗೆ ಸಾಲ ಸೌಲಭ್ಯಗಳು ದೊರಕುವಂತೆ ಪ್ರಧಾನಿ ನರೇಂದ್ರ ಮೋದಿ ಮಾಡಿದರು ಎಂದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 4 ಲಕ್ಷ ಜನರು ಜನ್ ಧನ್ ಖಾತೆ ಮಾಡಿಸಿಕೊಂಡಿದ್ದಾರೆ,  ಮುಖ್ಯವಾಗಿ ಬ್ಯಾಂಕಿಂಗ್ ಪರೀಕ್ಷೆಯನ್ನು ಕನ್ನಡದಲ್ಲೂ ಮಾಡಲಾಗುತ್ತಿದೆ. ಸ್ಥಳೀಯ ಭಾμÉ ಬಲ್ಲವರು ಪ್ರತಿಯೊಂದು ಬ್ರಾಂಚ್‍ನಲ್ಲಿ ಇರಬೇಕು, ಆ ಮೂಲಕ ಬ್ಯಾಂಕುಗಳ ಮಾಹಿತಿಗಳು ಸಾರ್ವಜನಿಕರಿಗೆ ಉತ್ತಮ ರೀತಿಯಲ್ಲಿ ತಲುಪುತ್ತವೆ ಎಂದು ಹೇಳಿದರು.

ನವೆಂಬರ್ ತಿಂಗಳಾಂತ್ಯದೊಳಗೆ ಕೇಂದ್ರದ ಭೂಸಾರಿಗೆ ಸಚಿವರಾದ ನಿತೀನ್ ಗಡ್ಕರಿ ಅವರು ಜಿಲ್ಲೆಗೆ ಆಗಮಿಸಿ ವಿವಿಧ ಕಾಮಗಾರಿಗಳ ಮರು ಚಾಲನೆ ನೀಡುವರು. ಬಿ.ಸಿ.ರೋಡ್ ಅಡ್ಡಹೊಳೆ ರಸ್ತೆ ಕಾಮಗಾರಿಯ ಆರಂಭ, ಕೆಪಿಟಿ ಫೈಓವರ್ ನಿರ್ಮಾಣ, ಬಿ.ಸಿ.ರೋಡ್ ಪೆÇಳಲಿ ಕಟೀಲು ಮೂಲ್ಕಿ ಚತುಷ್ಪಥ ನಿರ್ಮಾಣ ಪ್ರಸ್ತಾಪ, ಪುಂಜಾಲಕಟ್ಟೆ ಚಾರ್ಮಾಡಿವರೆಗೆ ರಸ್ತೆ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ಜಿಲ್ಲೆಯ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ, ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಪಾರ್ಕ್ ನಿರ್ಮಾಣ, ಕೋಸ್ಟ್ ಗಾರ್ಡ್ ಟ್ರೈನಿಂಗ್ ಸೆಂಟರ್ ಮಾರ್ಚ್ ಒಳಗೆ ಆರಂಭವಾಗುವ ನಿರೀಕ್ಷೆ ಇದೆ ಎಂದರು.

ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಪ್ರಾಸ್ತಾವಿಕವಾಗಿ ಮಾತನಾಡಿ ಜಿಲ್ಲೆಯಲ್ಲಿ 582 ಕೋಟಿ ರೂ ಸಾಲ ವಿತರಿಸಲಾಗಿದೆ ಎಂದರು.

ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲ ಸಾರಿಗೆ ಸಚಿವರಾದ ಎಸ್.ಅಂಗಾರ, ಹಿಂದುಳಿದ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹಾಗೂ ಸ್ಥಳೀಯ ಶಾಸಕ ರಾಜೇಶ್ ನಾಯ್ಕ ಮಾತನಾಡಿದರು.

ಇದೇ ಸಂದರ್ಭದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ ಅವರನ್ನು ಸನ್ಮಾನಿಸಲಾಯಿತು. ವಿವಿಧ ಫಲಾನುಭವಿಗಳಿಗೆ ಸಾಲ ಸೌಲಭ್ಯ ವಿತರಿಸಲಾಯಿತು. ಐರಿನ್ ರೆಬೆಲ್ಲೊ ಮತ್ತು ಡಾ.ಶಿವಪ್ರಕಾಶ್ ಕಾರ್ಯಕ್ರಮ ನಿರ್ವಹಿಸಿದರು. ಲೀಡ್ ಬ್ಯಾಂಕ್ ಮ್ಯಾನೇಜರ್ ಪ್ರವೀಣ್ ಸ್ವಾಗತಿಸಿದರು.

ಕಾರ್ಯಾಗಾರದಲ್ಲಿ ಪ್ರದರ್ಶನ ಮಳಿಗೆಗಳು ಸೇರಿದಂತೆ 30 ವಿವಿಧ ಮಳಿಗೆಗಳು ಮಾಹಿತಿ ನೀಡಿದವು.

Subscribe to our newsletter!

Other related posts

error: Content is protected !!