ದೃಶ್ಯ ಕಲಾ ಕಾಲೇಜು ಪ್ರವೇಶಾತಿ: ಅರ್ಜಿ ಸಲ್ಲಿಸಲು ಇಂದು ಕೊನೆಯ ದಿನ

 ದೃಶ್ಯ ಕಲಾ ಕಾಲೇಜು ಪ್ರವೇಶಾತಿ: ಅರ್ಜಿ ಸಲ್ಲಿಸಲು ಇಂದು ಕೊನೆಯ ದಿನ
Share this post

ಉಡುಪಿ, ಅ 16, 2021: ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು ಮೈಸೂರು ಇಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನ ಪ್ರಥಮ
ಬ್ಯಾಚುಲರ್ ಆಫ್ ವಿಜ್ಯುಯಲ್ ಆರ್ಟ್ಸ್ (ಬಿ.ವಿ.ಎ) 4 ವರ್ಷದ ತರಗತಿಗಳ ಪ್ರವೇಶಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಸದರಿ ಪದವಿಯಲ್ಲಿ ಚಿತ್ರಕಲೆ, ಶಿಲ್ಪಕಲೆ, ಗ್ರಾಫಿಕ್ಸ್ ಕಲೆ, ಅನ್ವಯಕಲೆ, ಕಲಾ ಇತಿಹಾಸ ಹಾಗೂ ಛಾಯಾಚಿತ್ರ ಹಾಗೂ ಛಾಯಾಚಿತ್ರ ಪತ್ರಿಕೋದ್ಯಮ ವಿಭಾಗಗಳಲ್ಲಿ ವಿಶೇಷ ಅಧ್ಯಯನದ ಪದವಿಯಾಗಿದ್ದು, ನಂತರ ಎರಡು ವರ್ಷದ ಸ್ನಾತಕೋತ್ತರ ಪದವಿ ಸಹ ಇರುತ್ತದೆ. ಅರ್ಜಿ ಸಲ್ಲಿಸಲು ಅಕ್ಟೋಬರ್ 16 ಕೊನೆಯ ದಿನವಾಗಿದ್ದು, ಅ. 18 ರಂದು ಬೆಳಗ್ಗೆ 11 ಗಂಟೆಗೆ ಅರ್ಹತಾ ಪರೀಕ್ಷೆ ಹಾಗೂ ಮಧ್ಯಾಹ್ನ 2 ಗಂಟೆಗೆ ವೈಯಕ್ತಿಕ ಸಂದರ್ಶನವಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ https://www.mysore.nic.in https://www.cavamysore.karnataka.gov.in ಅಥವಾ ದೂ.ಸಂ: 0821-2438931 ನ್ನು ಸಂಪರ್ಕಿಸುವಂತೆ ಚಾಮರಾಜೇಂದ್ರ ಕಾಲೇಜಿನ ಡೀನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!