ಇಂಧನ ಸಚಿವ ಪ್ರವಾಸ ಕಾರ್ಯಕ್ರಮ

ಉಡುಪಿ, ಸೆ 09, 2021: ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್, ಸೆಪ್ಟಂಬರ್ 9 ರಿಂದ 11 ರ ವರೆಗೆ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ಸೆಪ್ಟಂಬರ್ 9 ರಂದು 12 ಗಂಟೆಗೆ ನಗರದ ರಜತಾದ್ರಿಯ ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆಯಲಿರುವ ಅಮೃತ್ ಯೋಜನೆಯ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 2.30 ಕ್ಕೆ ಕಾರ್ಕಳ ಪುರಸಭೆಗೆ ಭೇಟಿ ನೀಡಲಿದ್ದಾರೆ. 3.45 ಕ್ಕೆ ಕಾರ್ಕಳದ ವಿಕಾಸ ಕಛೇರಿಯಲ್ಲಿ ಪುಸ್ತಕ ಪ್ರದರ್ಶನ ಮತ್ತು ಗ್ರಂಥಾಲಯಗಳಿಗೆ ಪುಸ್ತಕ ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಹಾಗೂ ನಾಮಫಲಕ ಅಳವಡಿಕೆ ಅಭಿಯಾನದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಸೆಪ್ಟಂಬರ್ 10ರಂದು 7.30 ಕ್ಕೆ ಬೂತ್ ಅದ್ಯಕ್ಷರ ಮನೆಯಲ್ಲಿ ನಾಮ ಫಲಕ ಅಳವಡಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಬೆ. ೮ ರಿಂದ ಕಾರ್ಕಳ ವಿಧಾನ ಸಭಾ ವ್ಯಾಪ್ತಿಯ ವಿವಿಧ ಕಡೆ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಸೆಪ್ಟಂಬರ್ 11 ರಂದು 8 ಗಂಟೆಗೆ ಹೆಬ್ರಿಯ ಲೋಕೋಪಯೋಗಿ ಇಲಾಖೆಯ ನೂತನ ಪ್ರವಾಸಿ ಮಂದಿರ ನಿರ್ಮಾಣದ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಲಿದ್ದಾರೆ. ಬೆ. ೮:೩೦ಕ್ಕೆ ಬೂತ್ ಅದ್ಯಕ್ಷರ ಮನೆಯಲ್ಲಿ ನಾಮ ಫಲಕ ಅಳವಡಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನಂತರ ಶಿವಮೊಗ್ಗ ಜಿಲ್ಲೆಗೆ ಪ್ರಯಾಣ ಬೆಳೆಸಲಿದ್ದಾರೆ.