ಆ. 28 ರಿಂದ ಸಚಿವ ಎಸ್. ಅಂಗಾರ ಜಿಲ್ಲಾ ಪ್ರವಾಸ

 ಆ. 28 ರಿಂದ ಸಚಿವ ಎಸ್. ಅಂಗಾರ ಜಿಲ್ಲಾ ಪ್ರವಾಸ
Share this post

ಮಂಗಳೂರು ಆ.25, 2021: ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರ ಅವರು ಆಗಸ್ಟ್ 28 ರಿಂದ ಜಿಲ್ಲೆಯ ಪ್ರವಾಸ ನಡೆಸಲಿದ್ದಾರೆ.

ಪ್ರವಾಸ ಕಾರ್ಯಕ್ರಮದ ವಿವರ
ಆಗಸ್ಟ್ 28 ಬೆಳಿಗ್ಗೆ 9 ಗಂಟೆಗೆ ಸುಳ್ಯದ ತಮ್ಮ ಮನೆಯಿಂದ ಹೊರಟು, 10.30ಕ್ಕೆ ಮಂಗಳೂರಿಗೆ ಆಗಮಿಸಿ ಸಕ್ಯೂರ್ಟ್ ಹೌಸ್‍ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಶಾಸಕರುಗಳೊಂದಿಗೆ ಜಿಲ್ಲಾ ಅಭಿವೃದ್ಧಿ ಬಗ್ಗೆ ಚರ್ಚಿಸಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಜಿಲ್ಲೆಯ ಹಿರಿಯ ಮುಖಂಡರೊಂದಿಗೆ ಜಿಲ್ಲಾ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಲಿದ್ದಾರೆ. ಸಂಜೆ 5 ಗಂಟೆಗೆ ಮಂಗಳೂರಿನಿಂದ ಸುಳ್ಯಕ್ಕೆ ಪ್ರಯಾಣಿಸಲಿದ್ದಾರೆ.

ಆ.29ರ ಬೆಳಿಗ್ಗೆ 8.30ಕ್ಕೆ ಸುಳ್ಯದ ಅವರ ನಿವಾಸದಿಂದ ಹೊರಟು ಬೆಳಿಗ್ಗೆ 9 ಗಂಟೆಗೆ ಅಜ್ಜಾವರ ಗ್ರಾಮದ ಮೇದಿನಕಡ್ಕ ಅಂಗನವಾಡಿ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು. ಬೆಳಿಗ್ಗೆ 10 ಗಂಟೆಗೆ ಸುಳ್ಯದಲ್ಲಿ ಗೃಹರಕ್ಷಕ ಕಚೇರಿಯನ್ನು ಉದ್ಘಾಟಿಸುವರು. ಮಧ್ಯಾಹ್ನ 12 ಗಂಟೆಗೆ ಬೆಳ್ಳಾರೆಯಲ್ಲಿ ನೇತ್ರದಾನ ಶಿಬಿರದಲ್ಲಿ ಭಾಗವಹಿಸುವರು, ಸಂಜೆ 4.30ಕ್ಕೆ ಕಾಸರಗೋಡು ಎಡನೀರು ಮಠಕ್ಕೆ ಭೇಟಿ ನೀಡುವರು. ರಾತ್ರಿ 7 ಗಂಟೆಗೆ ಸಚಿವರು ತಮ್ಮ ಗೃಹಕ್ಕೆ ಪ್ರಯಾಣಿಸಿ, ವಾಸ್ತವ್ಯ ಮಾಡುವರು ಎಂದು ಸಚಿವರ ವಿಶೇಷ ಕರ್ತವ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!