ದ್ವಿತೀಯ ಪಿಯುಸಿ: ಸೂರಜ್ ಕಾಮತ್ ಶೇ.97 ಸಾಧನೆ
ಕಾರವಾರ, ಜು 23, 2021: ಅಂಕೋಲಾ ತಾಲೂಕು ಅವರ್ಸಾದ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಸೂರಜ ಸುಧೀರ ಕಾಮತ್ ಈ ಬಾರಿಯ ದ್ವಿತೀಯ ಪಿಯುಸಿಯಲ್ಲಿ ಶೇ.97 (600ಕ್ಕೆ 582 ಅಂಕ) ಸಾಧನೆ ಮಾಡುವ ಮೂಲಕ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾನೆ.
ಕನ್ನಡ, ಇಂಗ್ಲೀಷ್ ವಿಷಯಕ್ಕೆ 100, ಭೌತಶಾಸ್ತ್ರ 94, ರಸಾಯನಶಾಸ್ತ್ರ 95, ಮ್ಯಾಥಮೆಟಿಕ್ಸ್ 97, ಜೀವವಿಜ್ಞಾನಕ್ಕೆ 96 ಅಂಕಗಳಿಸಿ ಈ ಸಾಧನೆ ಮೆರೆದಿದ್ದಾನೆ. ಈತನ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರು, ಸಿಬ್ಬಂದಿ ವರ್ಗದವರು, ಪಾಲಕರು ಹಾಗೂ ಜನಶಕ್ತಿ ವೇದಿಕೆಯ ಎಲ್ಲ ಸದಸ್ಯರು ಅಭಿನಂದಿಸಿದ್ದಾರೆ ಎಂದು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ಬಿ ನಾಯಕ್ ತಿಳಿಸಿದ್ದಾರೆ.