ಕೈಗಾದಿಂದ ಜಿಲ್ಲಾ ಪಂಚಾಯತ್‍ಗೆ 15 ಲಕ್ಷ ವೆಚ್ಚದ ವೈದ್ಯಕೀಯ ಸಲಕರಣೆ ಹಸ್ತಾಂತರ

 ಕೈಗಾದಿಂದ ಜಿಲ್ಲಾ ಪಂಚಾಯತ್‍ಗೆ 15 ಲಕ್ಷ ವೆಚ್ಚದ ವೈದ್ಯಕೀಯ ಸಲಕರಣೆ ಹಸ್ತಾಂತರ
Share this post

ಕಾರವಾರ ಜೂನ್ 29, 2021: ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಜಿಲ್ಲಾಡಳಿತದ ಜೊತೆ ಕೈಜೋಡಿಸಿರುವ ಕೈಗಾ ವಿದ್ಯುತ್ ಉತ್ಪಾದನಾ ಕೇಂದ್ರ ತನ್ನ ಸಿಎಸ್‍ಆರ್ ಫಂಡ್‍ನಡಿ ಆಕ್ಸೋ ಮೀಟರ್ ಹಾಗೂ ಆಕ್ಸಿಜನ್ ಫ್ಲೋ ಮೀಟರ್‍ಗಳನ್ನು ಜಿಲ್ಲಾಡಳಿತಕ್ಕೆ ನೀಡಿದೆ.

ಜಿಲ್ಲಾ ಪಂಚಾಯತ್‍ಗೆ ಸಿಇಒ ಪ್ರಿಯಾಂಗ ಎಂ ಅವರ ಸಮ್ಮುಖದಲ್ಲಿ ಕೈಗಾ ಸೈಟ್ ಡೈರೆಕ್ಟರ್ ರಾಜೇಂದ್ರಕುಮಾರ ಗುಪ್ತಾ 15 ಲಕ್ಷ ವೆಚ್ಚದ ಆಕ್ಸೋ ಮೀಟರ್(ಆಕ್ಸಿಜನ್ ಕನೆಕ್ಟರ್) ಹಾಗೂ ಆಕ್ಸಿಜನ್ ಫ್ಲೋ ಮೀಟರ್‍ಗಳನ್ನು ಬುಧವಾರ ಹಸ್ತಾಂತರಿಸಿದರು.

“ಕೋವಿಡ್ ವಿರುದ್ಧದ ಹೋರಾಟದಲ್ಲಿ ಯಶಸ್ವಿಯಾಗಲು ವೈದ್ಯಕೀಯ ಸಲಹೆ, ಸಹಕಾರ ಅತ್ಯಂತ ಅವಶ್ಯಕ. ಕೈಗಾ ಸಂಸ್ಥೆ ಜಿಲ್ಲೆಯ ಜನರ ಸಹಾಯಕ್ಕೆ ಸ್ಪಂದಿಸಿದ್ದು, ಅನಾರೋಗ್ಯದಿಂದ ಬಳಲುವ ಹಾಗೂ ಕೋವಿಡ್ ಸೊಂಕಿತರಿಗೆ ನೆರವಾಗುವ ಸದುದ್ದೇಶದಿಂದ 15 ಲಕ್ಷ ವೆಚ್ಚದಲ್ಲಿ 10 ಆಕ್ಸೋ ಮೀಟರ್(ಆಕ್ಸಿಜನ್ ಕನೆಕ್ಟರ್) ಹಾಗೂ 50 ಆಕ್ಸಿಜನ್ ಫ್ಲೋ ಮೀಟರ್‍ಗಳನ್ನು ನೀಡಿದೆ. ಈ ವೈದ್ಯಕೀಯ ಸಲಕರಣೆಗಳನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಣಾಧಿಕಾರಿ ಅವರಿಗೆ ನೀಡಲಾಗುತ್ತಿದೆ. ನಂತರದಲ್ಲಿ ಸಲಕರಣೆಗಳು ಅಗತ್ಯವಿರುವ ಸರಕಾರಿ ಆಸ್ಪತ್ರೆಗಳಿಗೆ ವಿತರಿಸಲಾಗುತ್ತಿದ್ದು, ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡಲು ಸಹಕಾರಿಯಾಗಲಿದೆ,” ಎಂದು ಪ್ರಿಯಾಂಗ ಎಂ ಹೇಳಿದರು.

ಕೈಗಾ ಸೈಟ್ ಡೈರೆಕ್ಟರ್ ರಾಜೇಂದ್ರಕುಮಾರ ಗುಪ್ತಾ ಮಾತನಾಡಿ, ಪ್ರತೀವರ್ಷ ಸಿಎಸ್‍ಆರ್ ಫಂಡ್‍ನಡಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. 2020-21ರಲ್ಲಿ ಕೈಗಾದಿಂದ 13.5 ಕೋಟಿ ರೂ ವೆಚ್ಚ ಮಾಡಲಾಗಿದೆ. ಕೋವಿಡ್-19 ಎರಡನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತಕ್ಕೆ ಪೂರಕವಾಗಿ ಸಿಎಸ್‍ಆರ್ ಫಂಡ್‍ನಡಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, 15 ಲಕ್ಷ ವೆಚ್ಚದಲ್ಲಿ 10 ಆಕ್ಸೋ ಮೀಟರ್(ಆಕ್ಸಿಜನ್ ಕನೆಕ್ಟರ್) ಹಾಗೂ 50 ಆಕ್ಸಿಜನ್ ಫ್ಲೋ ಮೀಟರ್‍ಗಳನ್ನು ನೀಡಲಾಗಿದೆ. ಜನರಿಗೆ ಈ ವೈದ್ಯಕೀಯ ಸಲಕರಣೆಗಳು ತುಂಬಾ ಉಪಕಾರಿಯಾಗಲಿವೆ ಎಂದರು.

ಡಿಹೆಚ್‍ಒ ಡಾ. ಶರದ್ ನಾಯಕ, ಕೈಗಾದ ಸಿಎಸ್‍ಆರ್ ಫಂಡ್ ವಿಭಾದ ಚೇರ್ಮನ್ ಶಿವರಾಮ ಕೃಷ್ಣಾ, ಹೆಚ್‍ಆರ್ ವಿಭಾಗದ ಮುಖ್ಯಸ್ಥ ಅಶೋಕ ಶಿಂಧೆ, ಕೈಗಾ ನೌಕರರ ಸಂಘದ ಸದಸ್ಯ ಶ್ರೀನಿವಾಸ ಕಿನ್ನರ್ಕರ್, ಕೈಗಾ ಸಿಎಸ್‍ಆರ್ ಫಂಡ್ ವಿಭಾದ ಸದಸ್ಯ ಕಾರ್ಯದರ್ಶಿ ಜಗನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Subscribe to our newsletter!

Other related posts

error: Content is protected !!