ಅಂತಾರಾಷ್ಟ್ರೀಯ ಯೋಗ ದಿನಾಚರಣೆ

 ಅಂತಾರಾಷ್ಟ್ರೀಯ ಯೋಗ ದಿನಾಚರಣೆ
Share this post

ಉಡುಪಿ ಜೂನ್ 17, 2021: ಜೂನ್ 21 ರಂದು ಏಳನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು
ಆಚರಿಸಲಾಗುತ್ತಿದ್ದು, ಪ್ರಸ್ತುತ ಸಾಲಿನಲ್ಲಿ ಕೋವಿಡ್-19 ಕಾರಣದಿಂದ ಸಾರ್ವಜನಿಕ ಸಭೆ, ಸಮಾರಂಭ ಹಾಗೂ ಮತ್ತಿತರ
ಕಾರ್ಯಕ್ರಮಗಳನ್ನು ಆಯೋಜಿಸುವುದನ್ನು ನಿಷೇಧಿಸಿರುವುದರಿಂದ, ಮನೆಯಿಂದಲೇ ಯೋಗ ಕಾರ್ಯಕ್ರಮದಲ್ಲಿ ಸಕ್ರೀಯವಾಗಿ
ಭಾಗವಹಿಸಿ, ಯೋಗ ದಿನಾಚರಣೆಯನ್ನು ಆಚರಿಸಲು ಸರ್ಕಾರದ ಮಾರ್ಗಸೂಚಿಯಲ್ಲಿ ತಿಳಿಸಲಾಗಿರುತ್ತದೆ.

ಕೋವಿಡ್ ಸೋಂಕಿತರ ಚೇತರಿಕೆಗೆ ಅನುಕೂಲವಾಗುವ ಪ್ರಾಣಾಯಾಮ, ಉಸಿರಾಟ ಕ್ರಿಯೆಗಳ ವ್ಯಾಯಾಮ ಅಭ್ಯಾಸಗಳನ್ನು
ಕೋವಿಡ್ ಕೇರ್ ಸೆಂಟರ್ ಹಾಗೂ ಆಯ್ದ ಗ್ರಾಮಗಳ ಕೋವಿಡ್ ಸೋಂಕಿತರಿಗೆ ಮಾಡಿಸುವ ಮೂಲಕ ಅವರ ದೈಹಿಕ ಹಾಗೂ
ಮನೋಸ್ಥೆöÊರ್ಯವನ್ನು ವೃದ್ಧಿಸಬಹುದಾಗಿದ್ದು, ಈ ನಿಟ್ಟಿನಲ್ಲಿ ಆಯುಷ್ ಇಲಾಖೆಯ ಕಾರ್ಯಪ್ರವೃತ್ತವಾಗಿದೆ.

ಆಯುಷ್ ಇಲಾಖೆ ಹಾಗೂ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಸಹಯೋಗದಲ್ಲಿ ಆಯುಷ್ ಮಂತ್ರಾಲಯವು ನೀಡಿರುವ
ಮಾರ್ಗಸೂಚಿಯಂತೆ ಬಿ ವಿಥ್ ಯೋಗ, ಬಿ ಎಟ್ ಹೋಮ್ ಘೋಷವಾಕ್ಯದೊಂದಿಗೆ ಪ್ರಸಕ್ತ ಸಾಲಿನ ಯೋಗ ದಿನಾಚರಣೆ
ಕಾರ್ಯಕ್ರಮವನ್ನು ಆಚರಿಸಲಾಗುತ್ತಿದ್ದು, ಸಾರ್ವಜನಿಕರು, ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಗೂ
ಸಂಘ ಸಂಸ್ಥೆಯ ಪದಾಧಿಕಾರಿಗಳೂ ಸೇರಿದಂತೆ ಸಾರ್ವಜನಿಕರು ತಮ್ಮ ಮನೆಯಲ್ಲಿಯೇ ಯೋಗಾಸನಗಳನ್ನು ಮಾಡುವುದರೊಂದಿಗೆ ಈ ಕುರಿತ ಫೋಟೋಗಳನ್ನು ಜಿಲ್ಲಾ ಆಯುಷ್ ಕಚೇರಿಗೆ ಇ-ಮೇಲ್ [email protected] ಅಥವಾ ವಾಟ್ಸ್ಆಪ್ (8217095386) ಮಾಡಿದಲ್ಲಿ ಆಯ್ದ ಫೋಟೋಗಳನ್ನು ಸಂಬಂಧಿತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು.

ಯೋಗಾಸನಗಳ ಕುರಿತ ಹೆಚ್ಚಿನ ಮಾಹಿತಿಗಾಗಿ https://yoga.ayush.gov.in/public/assets/IDY_ebook.pdf ಅಥವಾ https://www.youtube.comwatch?v=k5W4sR7Ercs ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!