ತೈಲ ಬೆಲೆಯೇರಿಕೆ ಖಂಡಿಸಿ ಎಸ್. ಡಿ. ಪಿ. ಐ ವಿನೂತನ ಪ್ರತಿಭಟನೆ

 ತೈಲ ಬೆಲೆಯೇರಿಕೆ ಖಂಡಿಸಿ ಎಸ್. ಡಿ. ಪಿ. ಐ ವಿನೂತನ ಪ್ರತಿಭಟನೆ
Share this post

ಮಂಗಳೂರು ಜೂ 16, 2021: ಕೇಂದ್ರ ಸರಕಾರವು ಲಾಕ್ಡೌನ್ ನಂತಹ ಸಂಕಷ್ಟದ ದಿನಗಳಲ್ಲಿ ತೈಲ ಬೆಲೆಯನ್ನು ಅನಿಯಂತ್ರಿತ ವಾಗಿ ಏರಿಸುವ ಮೂಲಕ ಪೆಟ್ರೋಲ್ ಬೆಲೆಯು ನೂರು ರುಪಾಯಿಯ ಗಡಿ ದಾಟಿದೆ . ಇಂತಹ ಅವೈಜ್ಞಾನಿಕ ಬೆಲೆಯೇರಿಕೆ ಯನ್ನು ವಿರೋದಿಸಿ ಎಸ್. ಡಿ. ಪಿ. ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯು ಇಂದು ಜಿಲ್ಲಾದ್ಯಂತ ವಿನೂತನ ರೀತಿಯ ಪ್ರತಿಭಟನೆಗಳನ್ನು ಆಯೋಜಿಸಿತ್ತು.

ಇಂದು ಬೆಳಿಗ್ಗೆ 6 ರಿಂದ 9 ಗಂಟೆ ವರೆಗೆ ನಡೆದ ಪ್ರತಿಭಟನೆಯು ಮಂಗಳೂರು, ಬಜಪೆ ,ಫರಂಗಿಪೇಟೆ , ಜೋಕಟ್ಟೆ, ಬಿಸಿ ರೋಡ್, ವಿಟ್ಲ , ಕಲ್ಲಡ್ಕ , ಪುತ್ತೂರು , ಬೆಳ್ಳಾರೆ , ಸುಳ್ಯ, ಕಡಬ ನೆಲ್ಯಾಡಿ , ಬೆಳ್ತಂಗಡಿ, ಪುಂಜಾಲಕಟ್ಟೆ , ಸುರತ್ಕಲ್, ಉಳ್ಳಾಲ ಸೇರಿದಂತೆ ಒಟ್ಟು 64 ಕಡೆಗಳಲ್ಲಿ ನಡೆಯಿತು.

ವಾಹನಗಳನ್ನು ಹಗ್ಗ ಕಟ್ಟಿ ಎಳೆದುಕೊಂಡು, ಬೈಕುಗಳನ್ನು ತಳ್ಳಿಕೊಂಡು ಹಾಗೂ ಹೊತ್ತುಕೊಂಡು ಹೋಗುವ ಮೂಲಕ ಮತ್ತು ಕೇಂದ್ರ ಸರಕಾರದ ಒಡೆತನದ ಪೆಟ್ರೋಲ್ ಪಂಪುಗಳ ಮುಂದೆ ಶತಕ ದಾಖಲಿಸುವ ಅಣಕು ಪ್ರದರ್ಶನ ಮತ್ತು ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗುವ ಮೂಲಕ ಜಿಲ್ಲಾದ್ಯಂತ ವಿನೂತನ ರೀತಿಯ ಪ್ರತಿಭಟನೆ ನಡೆಯಿತು.

ಈ ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷರಾದ ಅಥಾವುಲ್ಲಾ ಜೋಕಟ್ಟೆ, ರಾಷ್ಟ್ರೀಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ರಿಯಾಝ್ ಫರಂಗಿಪೇಟೆ , ರಾಜ್ಯ ನಾಯಕರಾದ ಅಶ್ರಫ್ ಮಾಚಾರ್, ಇಕ್ಬಾಲ್ ಬೆಳ್ಳಾರೆ, ಜಿಲ್ಲಾ ಪ್ರದಾನ ಕಾರ್ಯದರ್ಶಿ ಶಾಹುಲ್ ಹಮೀದ್ , ಜಿಲ್ಲಾ ಕಾರ್ಯದರ್ಶಿ ಗಳಾದ ಅನ್ವರ್ ಸಾದತ್ ಬಜತ್ತೂರು, ಜಮಾಲ್ ಜೋಕಟ್ಟೆ , ಇತರ ಮುಖಂಡರಾದ ವಿಕ್ಟರ್ ಮಾರ್ಟಿಸ್ ಕಡಬ ,ಶುಹೈಲ್ ಖಾನ್ ಪಳ್ನೀರ್ ,ಮುನೀಶ್ ಆಲಿ ಬಂಟ್ವಾಳ, ಸಿದ್ದೀಕ್ ಪುತ್ತೂರು, ಖಲಂದರ್ ಪರ್ತಿಪ್ಪಾಡಿ , ಝಾಕಿರ್ ಉಳ್ಳಾಲ ಹಾಗೂ ಪಕ್ಷದ ಚುನಾಯಿತ ಪ್ರತಿನಿಧಿಗಳು , ಸ್ಥಳೀಯ ನಾಯಕರು ಕಾರ್ಯಕರ್ತರು ಬಾಗವಹಿಸಿದ್ದಾರೆ.

Subscribe to our newsletter!

Other related posts

error: Content is protected !!