ಜೂನ್ 21 ರಂದು ಎಸ್‌.ಡಿ.ಪಿ.ಐ 13ನೇ ಸಂಸ್ಥಾಪನಾ ದಿನಾಚರಣೆ

 ಜೂನ್ 21 ರಂದು ಎಸ್‌.ಡಿ.ಪಿ.ಐ 13ನೇ ಸಂಸ್ಥಾಪನಾ ದಿನಾಚರಣೆ
Share this post
sdpi

ಮಂಗಳೂರು ಜೂ 20, 2022: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌.ಡಿ.ಪಿ.ಐ) ದ 13 ನೇ ಸಂಸ್ಥಾಪನಾ ದಿನಾಚರಣೆಯು ಜೂನ್ 21 ರಂದು ನಡೆಯಲಿದೆ.

ಸ್ವಾಭಿಮಾನಿ ರಾಜಕೀಯದ ಹದಿಮೂರು ವರ್ಷಗಳು ಎಂಬ ಘೋಷಣೆಯೊಂದಿಗೆ ಸ್ವತಂತ್ರ ರಾಜಕಾರಣದತ್ತ ಮುನ್ನಡೆಯೋಣ ಎಂಬ ಸಂಕಲ್ಪದೊಂದಿಗೆ ಈ ದಿನವನ್ನು ರಾಷ್ಟ್ರಾದ್ಯಂತ ಆಚರಿಸಲಾಗುವುದು.

ಅದರ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೂತ್ ಮಟ್ಟದಿಂದ ಜಿಲ್ಲಾ ಸಮಿತಿಯ ವರೆಗಿನ ಎಲ್ಲಾ ಸ್ಥರಗಳಲ್ಲೂ ಪಕ್ಷದ ಧ್ವಜಾರೋಹಣ, ಸಿಹಿತಿಂಡಿ ವಿತರಣೆ, ಸಾರ್ಜಿಜನಿಕ ರಸ್ತೆ, ಚರಂಡಿ, ಶಾಲಾ ವಠಾರ, ಆಸ್ಪತ್ರೆ ವಠಾರ ಸ್ವಚ್ಚತೆ, ಸಾರ್ವಜನಿಕ ಸ್ಥಳಗಳಲ್ಲಿ ಸಸಿ ನೆಡುವುದು, ಆರೋಗ್ಯ ಶಿಬಿರ, ಬಡವರಿಗೆ ಆಹಾರ ಕಿಟ್ ವಿತರಣೆಯಂತಹ ಸಾಮಾಜಿಕ ಕೆಲಸ ಕಾರ್ಯಗಳನ್ನು ಹಮ್ಮಿಕೊಳ್ಳುವುದರೊಂದಿಗೆ ಪಕ್ಷದ ಸಂಸ್ಥಾಪನ ದಿನಾಚರಣೆಯನ್ನು ಆಚರಿಸಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!