ಕಾರ್ಮಿಕರ ಕೊರತೆಯ ನಡುವೆಯೂ ಕಾಮಗಾರಿಗೆ ವೇಗ: ಶಾಸಕ ಕಾಮತ್

 ಕಾರ್ಮಿಕರ ಕೊರತೆಯ ನಡುವೆಯೂ ಕಾಮಗಾರಿಗೆ ವೇಗ: ಶಾಸಕ ಕಾಮತ್
Share this post

ಮಂಗಳೂರು, ಜೂನ್ 02, 2021: ಮಂಗಳೂರು ಮಹಾನಗರ ಪಾಲಿಕೆಯ ಕಂಬ್ಳ ವಾರ್ಡ್ ಹಾಗೂ ಡೊಂಗರಕೇರಿ ವಾರ್ಡ್ಗೆ ಸಂಬಂಧಪಟ್ಟ ಶಾರದಾ ವಿದ್ಯಾಲಯ ರಸ್ತೆಯ ಅಭಿವೃದ್ಧಿ ಕಾಮಗಾರಿಯನ್ನು ಶಾಸಕ ವೇದವ್ಯಾಸ್ ಕಾಮತ್ ಹಾಗೂ ಮೇಯರ್ ಪ್ರೇಮಾನಂದ ಶೆಟ್ಟಿ ಪರಿಶೀಲನೆ ನಡೆಸಿದರು.

ಬಳಿಕ ಮಾತನಾಡಿದ ‌ಕಾಮತ್, ಕೋವಿಡ್ ಕಾರಣದಿಂದ ಕಾರ್ಮಿಕರು ಊರಿಗೆ ತೆರಳಿದರೂ ಕಾಮಗಾರಿ ಸ್ಥಗಿತಗೊಳಿಸದಂತೆ ಎಚ್ಚರವಹಿಸಲಾಗಿದೆ. ಒಳಚರಂಡಿ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ ಹಾಗೂ ಮಳೆ ನೀರು ಹಾದು ಹೋಗುವ ಚರಂಡಿಯ ಕಾಮಗಾರಿ, ರಸ್ತೆ ಕಾಂಕ್ರೀಟೀಕರಣ ಕಾಮಗಾರಿ ಪ್ರಗತಿಯಲ್ಲಿದೆ. ಕಾರ್ಮಿಕರ ಕೊರತೆಯಿದ್ದರೂ ಕೂಡ ವೇಗವಾಗಿ ಕಾಮಗಾರಿ ನಡೆಯುತ್ತಿದೆ. ಆದಷ್ಟು ಬೇಗನೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಸಚೇತಕರಾದ ಸುಧೀರ್ ಶೆಟ್ಟಿ ಕಣ್ಣೂರು, ಸ್ಥಳೀಯ ಮನಪಾ ಸದಸ್ಯರೂ ಪಾಲಿಕೆ ಲೆಕ್ಕಪತ್ರ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಲೀಲಾವತಿ ಪ್ರಕಾಶ್, ಪಾಲಿಕೆ ಸದಸ್ಯರಾದ ಜಯಶ್ರೀ ಕುಡ್ವ, ಶಾರದಾ ವಿದ್ಯಾಲಯದ ಪ್ರಮುಖರಾದ ಎಂ. ಬಿ ಪುರಾಣಿಕ್, ಹಾಗೂ ಸಂಬಂಧಪಟ್ಟ ಅಧಿಕಾರಿಗಳು, ಪ್ರಮುಖರು ಉಪಸ್ಥಿತರಿದ್ದರು.

Subscribe to our newsletter!

Other related posts

error: Content is protected !!