ಅಭಿವೃದ್ದಿ ನೆಪದಲ್ಲಿ ಮುಸ್ಲಿಮ್ ಬಾಹುಳ್ಯ ಲಕ್ಷ ದ್ವೀಪವನ್ನು ನಾಶಪಡಿಸಲು ಹೊರಟ ಕೇಂದ್ರ ಸರಕಾರ:ಕೆ.ಅಶ್ರಫ್

 ಅಭಿವೃದ್ದಿ ನೆಪದಲ್ಲಿ ಮುಸ್ಲಿಮ್ ಬಾಹುಳ್ಯ ಲಕ್ಷ ದ್ವೀಪವನ್ನು ನಾಶಪಡಿಸಲು ಹೊರಟ ಕೇಂದ್ರ ಸರಕಾರ:ಕೆ.ಅಶ್ರಫ್
Share this post

ಅರಬ್ಬಿ ಸಮುದ್ರದ ನಡುವೆ ನೈಸರ್ಗಿಕ ಸೌಂದರ್ಯ ದ್ವೀಪವೆಂದೇ ಪ್ರಖ್ಯಾತಿ ಪಡೆದ, 99% ಮುಸ್ಲಿಮ್ ಜನಸಂಖ್ಯೆ ಇರುವ, ಮತ್ಸೋದ್ಯಮ, ಹೈನುಗಾರಿಕೆ, ಕೃಷಿಯನ್ನು ಮಾತ್ರವೇ ಅವಲಂಬಿಸಿರುವ, ಕನಿಷ್ಟ ಅಪರಾಧ ಇರುವ, ಸಾಮರಸ್ಯ ಹೊಂದಿರುವ, ಮಲಯಾಳ ಭಾಷಿತ ದ್ವೀಪ ಸಮೂಹ- ಲಕ್ಷ ದ್ವೀಪ.

K Ashraf

ಈ ನಿಸರ್ಗ ರಮಣೀಯ ದ್ವೀಪವನ್ನು ಕೇಂದ್ರ ಸರಕಾರ ಇಂದು ಅಭಿವೃದ್ದಿ ಹೆಸರಲ್ಲಿ ನಾಶ ಪಡಿಸಲು ಹೊರಟಿದೆ. ದ್ವೀಪದ ಕಿನಾರೆಗಳ ಮತ್ಸ್ಯಗಾರಿಕೆ ರಚನೆಗಳನ್ನು ನಾಶ ಪಡಿಸಿದೆ. ಜಮೀನುಗಳನ್ನು ಗುಜರಾತ್ ಮೂಲದ ಉದ್ಯಮಿಗಳಿಗೆ ಪ್ರವಾಸಿ ತಾಣ ವಾಗಿಸಲು ಹೊರಟಿದೆ. ಜನರ ಆಹಾರವಾದ ಬೀಫ್ ಅನ್ನು ನಿಷೇಧಿಸಿದೆ. ಹೈನುಗಾರಿಕೆಯನ್ನು ನಿಷೇಧಿಸಿ, ಹಾಲು ಉತ್ಪನ್ನಗಳನ್ನು ಸ್ಥಗಿಸಗೊಳಿಸಿ, ದೂರದ ಗುಜರಾತ್ ಮೂಲದ ಅಮುಲ್ ಗೆ ಮಾರ್ಕೆಟ್ ಸೃಷ್ಟಿಸಿ ಅಮುಲ್ ಉತ್ಪನ್ನವನ್ನು ಬಲವಂತವಾಗಿ ಜನರ ಮೇಲೆ ಪ್ರಯೋಗಿಸಿದೆ.

ಮದ್ಯಪಾನ ರಹಿತ ನಾಡಿನಲ್ಲಿ ಲಿಕ್ಕರ್ ಲೈಸೆನ್ಸ್ ಜಾರಿ ಮಾಡಲಾಗಿದೆ . ಖಾಲಿ ಇರುವ ಜೈಲು ,ಪ್ರಕರಣ ರಹಿತ ಪೊಲೀಸು ಸ್ಟೇಶನ್, ಟ್ರಯಲ್ ರಹಿತ ನ್ಯಾಯಾಲಯ ಇರುವ ನಾಡಿನಲ್ಲಿ ಗೂಂಡಾ ಕಾಯ್ದೆ ಜಾರಿಗೆ ತಂದಿದೆ. ಬೈಸಿಕಲ್, ಕಾರು, ಜೀಪು, ಮಿನಿ ಬಸ್ ಮಿತವಾಗಿ ಇರುವ ನಾಡಿನಲ್ಲಿ 15 ಮೀಟರ್ ಅಗಲದ ರಾಷ್ಟ್ರೀಯ ಹೆದ್ದಾರಿ ಸೃಷ್ಟಿಸಿ ಜನರ ಭೂಮಿಯನ್ನು ಅನ್ಯಾಯವಾಗಿ ಕಬಳಿಸಲು ಹೊರಟಿದೆ. ಇಬ್ಬರು ಮಕ್ಕಳು ಇದ್ದ ಅಭ್ಯರ್ಥಿಯು ಸ್ಥಳೀಯ ಆಡಳಿತ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನಿರಾಕರಿಸಿದೆ. ಗೋಡೆ ರಹಿತ ಮನೆ ನಿವಾಸ ಇರುವ ನಾಡಿನಲ್ಲಿ ಕಟ್ಟಡ ರಚನೆ ಕಾನೂನು ಜಾರಿಗೆ ತಂದು ನೂರಾರು ವಾಸ ಯೋಗ್ಯ ಕುಟೀರಗಳನ್ನೂ ದ್ವಂಸ ಮಾಡಲು ಹೊರಟಿದೆ.

ಕೇಂದ್ರ ಸರ್ಕಾರ ಈ ಸರ್ವ ದುರಂತ ಬೆಳವಣಿಗೆ ಅಭಿವೃದ್ಧಿಗಳು ಸಾಧಿಸಲು ನೇಮಿಸಿದ ಆಡಳಿತಾಧಿಕಾರಿ ಪ್ರಫುಲ್ ಜಿ.ಪಾಟೀಲ್ , ಪ್ರಮುಖವೆಂದರೆ ಲಕ್ಷ ದ್ವೀಪದಂತಹ ಕೇಂದ್ರಾಡಳಿತ ಪ್ರದೇಶಕ್ಕೆ ಕೆ. ಎ.ಎಸ್ ಅರ್ಹತೆ ಹೊಂದಿದ ಅಧಿಕಾರಿ ಮಾತ್ರ ನೇಮಕ ವಾಗಬೇಕು. ಆದರೆ ನರೇಂದ್ರ ಮೋದಿಯವರು ಈ ಸ್ಥಾನಕ್ಕೆ ಪ್ರಫುಲ್ ಜಿ ಪಾಟೀಲ್ ರಂತಹ ತಮ್ಮ ಆಪ್ತ ಮತ್ತು ಪಕ್ಷದ ನೇತಾರನನ್ನು ನೇಮಿಸಿದೆ.

ಈ ನೇಮಕದಲ್ಲಿ ಲಕ್ಷ ದ್ವೀಪದ ಅಭಿವೃದ್ಧಿಗಿಂತ ಸ್ವಜನ ಪಕ್ಷಪಾತ ಎದ್ದು ಕಾಣುತ್ತಿದೆ. ಕೇಂದ್ರ ಸರಕಾರ ದ್ವೀಪದ ಸಂಪತ್ತನ್ನು ಕೊಳ್ಳೆ ಹೊಡೆಯಲು ತಮ್ಮ ಆಪ್ತರಾದ ಕಾರ್ಪೊರೇಟ್ ಮಾಲೀಕರಿಗೆ ಮಾರುವ ಮಾಡುವ ಉದ್ದೇಶ ಎದ್ದು ಕಾಣುತ್ತದೆ. ಟೂರಿಸಂ ಹೆಸರಲ್ಲಿ ದ್ವೀಪದ ಜಮೀನನ್ನು ಹೋಟೆಲ್ ಮಾಲೀಕರಿಗೆ ಹಸ್ತಾಂತರಿಸುವ ಸರ್ವ ಪ್ರಯತ್ನ ನಡೆದಿದೆ.

ಕೇಂದ್ರ ಸರಕಾರ ತಕ್ಷಣ ಪ್ರಫುಲ್ ಜಿ ಪಾಟೀಲ್ ರನ್ನು ಹಿಂದಕ್ಕೆ ಕರೆದು ದ್ವೀಪದಲ್ಲಿ ಜ್ಯಾರಿಗೊಳಿಸಿದ ಜನ ವಿರೋಧಿ ನಿರ್ದೇಶನಗಳನ್ನು ರದ್ದು ಪಡಿಸಬೇಕು. ಲಕ್ಷದ್ವೀಪ್ ಜನರ ಹಿತಾಸಕ್ತಿಯನ್ನು ಸಂರಕ್ಷಿಸುವ ಸರ್ವ ಹೋರಾಟಗಳೊಂದಿಗೆ ಜಿಲ್ಲೆಯ ಜನತೆ ಸಾಥ್ ನಿಲ್ಲಲಿದೆ.

ಕೆ.ಅಶ್ರಫ್ (ಮಾಜಿ ಮೇಯರ್)
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.

Subscribe to our newsletter!

Other related posts

error: Content is protected !!