ಕಾರವಾರ: ಉಚಿತ ಆಪ್ತ ಸಮಾಲೋಚನೆ ಸೌಲಭ್ಯ

 ಕಾರವಾರ: ಉಚಿತ ಆಪ್ತ ಸಮಾಲೋಚನೆ ಸೌಲಭ್ಯ
Share this post

ಕಾರವಾರ, ಮೇ 24, 2021: ಕೋವಿಡ್-19 ತುರ್ತು ಸಂದರ್ಭದಲ್ಲಿ ಸೋಂಕಿತ ಅಥವಾ ಭಾದಿತ ಮಕ್ಕಳು ಹಾಗೂ ಮಕ್ಕಳ ಪೋಷಕರು 14499 ಸಂಖ್ಯೆಗೆ ಕರೆ ಮಾಡುವ ಮೂಲಕ ಉಚಿತ ಆಪ್ತ ಸಮಾಲೋಚನೆ ಸೌಲಭ್ಯ ಪಡೆಯಬಹುದಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸೋನಲ್ ಐಗಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ,

ಮನೆಯಲ್ಲಿ ಕುಟುಂಬದ ಸದಸ್ಯರಿಗೆ ಸೋಂಕು ತಗುಲಿದಾಗ ಅಥವಾ ತಂದೆ-ತಾಯಿಯನ್ನು ಕಳೆದುಕೊಂಡು ಮಕ್ಕಳು ಅನಾಥರಾಗಿದ್ದಲ್ಲಿ ಅಂತಹ ಮಕ್ಕಳನ್ನು ದತ್ತು ನೀಡುವುದಾಗಿ ಹೇಳಿ ಯಾರಾದರೂ ಮಗುವನ್ನು ಮಾರಾಟ ಮಾಡುವಂತಹ ಪ್ರಕರಣ ಕಂಡು ಬಂದಲ್ಲಿಆಯಾ ತಾಲೂಕಿನ ಶಿಶು ಅಭಿವೃದ್ಧಿಅಧಿಕಾರಿ ಅಥವಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಮಾಹಿತಿ ನೀಡಬೇಕು ಎಂದಿದ್ದಾರೆ.

ಏಕಪೋಷಕತ್ವ ಮಕ್ಕಳಿಗೆ ಪಾಲನೆ ಪೋಷಣೆ ಮತ್ತು ರಕ್ಷಣೆ ಅವಶ್ಯಕತೆ ಇದ್ದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಘಟಕ ದೂರವಾಣಿ ಸಂಖ್ಯೆ 08382-220182, ಮಕ್ಕಳ ಸಹಾಯವಾಣಿ 1098, ಮಕ್ಕಳ ಪೊಲೀಸ್‍ ಘಟಕ 08382-226893, ಹಿರಿಯ ಮಕ್ಕಳ ಪೊಲೀಸ್ ಕಲ್ಯಾಣಾಧಿಕಾರಿ 9480805220, ಮಕ್ಕಳ ಕಲ್ಯಾಣ ಸಮಿತಿ-1 08382-226501, ಮತ್ತು 08384-236520 ಸಂಪರ್ಕಿಸಬದುಹು ಎಂದು
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಾಹಿತಿ ನೀಡಿದ್ದಾರೆ.

Subscribe to our newsletter!

Other related posts

error: Content is protected !!