ಉಡುಪಿ: ಆಕ್ಸಿಜಿನ್ ಕಾನ್ಸನ್ಟ್ರೇಟರ್ ನೀಡಲು ವಿನಂತಿ

 ಉಡುಪಿ: ಆಕ್ಸಿಜಿನ್ ಕಾನ್ಸನ್ಟ್ರೇಟರ್ ನೀಡಲು ವಿನಂತಿ
Share this post

ಉಡುಪಿ, ಮೇ 19, 2021: ಉಡುಪಿ ಜಿಲ್ಲೆಯಲ್ಲಿ ಪ್ರಸ್ತುತ ಕೋವಿಡ್ -19 ಸೋಂಕು ಹರಡುವಿಕೆಯ ಪ್ರಕರಣಗಳು ತೀವ್ರವಾಗಿ ಹೆಚ್ಚಳವಾಗುತ್ತಿದ್ದು,ಕೋವಿಡ್ 19 ಸೊಂಕಿಗೆ ಸಂಬಂಧಿಸಿದಂತೆ ಚಿಕಿತ್ಸೆ ನೀಡಲು ಆಸ್ಪತ್ರೆಗಳಲ್ಲಿ ವೈದ್ಯಕಿಯ ಆಮ್ಲಜನಕ ಬೇಡಿಕೆ ಬಹಳಷ್ಟು ಹೆಚ್ಚಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ 10 ಲೀಟರ್ ಅಥವಾ ಅದಕ್ಕಿಂತ ಜಾಸ್ತಿ ಸಾಮರ್ಥ್ಯದ ಆಕ್ಸಿಜಿನ್ ಕಾನ್ಸನ್ಟ್ರೇಟರ್ ಉಪಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಅವಶ್ಯಕತೆ ಇರುತ್ತದೆ.

ಕೋವಿಡ್ 19 ಸೊಂಕಿಗೆ ಸಂಬಂಧಿಸಿದಂತೆ ಚಿಕಿತ್ಸೆ ನೀಡಲು ಅವಶ್ಯವಿರುವ 10 ಲೀಟರ್ ಅಥವಾ ಅದಕ್ಕಿಂತ ಜಾಸ್ತಿ ಸಾಮರ್ಥ್ಯದ ಆಕ್ಸಿಜಿನ್ ಕಾನ್ಸನ್ಟ್ರೇಟರ್ ಉಪಕರಣಗಳನ್ನು ಒದಗಿಸಲು ಇಚ್ಚಿಸುವ ದಾನಿಗಳು/ಸಂಘ ಸಂಸ್ಥೆಗಳು ಕೆಳಕಂಡ ದೂರವಾಣಿ ಮೂಲಕ ಸಂಪರ್ಕಿಸಬಹುದು.

ಜಿಲ್ಲಾಡಳಿತದೊಂದಿಗೆ ಕೈಜೋಡಿಸಲು ಉತ್ಸುಕರಾಗಿರುವ ದಾನಿಗಳು , ಜಿಲ್ಲಾ ತುರ್ತು ಕಾರ್ಯಾಚರಣಾ ಕೇಂದ್ರ ದೂರವಾಣಿ ಸಂಖ್ಯೆ: 0820-2574360 , ಮೊಬೈಲ್: 9880831516 ಗೆ ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ವಿನಂತಿಸಿದ್ದಾರೆ.

Subscribe to our newsletter!

Other related posts

error: Content is protected !!