ಮಂಗಳೂರು: ಮುಂಗಾರು ಹಂಗಾಮಿಗೆ ಭತ್ತ ಬಿತ್ತನೆ ಬೀಜದ ಲಭ್ಯತೆ

 ಮಂಗಳೂರು: ಮುಂಗಾರು ಹಂಗಾಮಿಗೆ ಭತ್ತ ಬಿತ್ತನೆ ಬೀಜದ ಲಭ್ಯತೆ
Share this post

ಮಂಗಳೂರು, ಮೇ 19, 2021: ಪ್ರಸ್ತುತ ಸಾಲಿನ ಮುಂಗಾರು ಹಂಗಾಮಿಗೆ ಭತ್ತದ ಬಿತ್ತನೆಗಾಗಿ MO4 ತಳಿಯ ಬೀಜವನ್ನು ರೈತ ಸಂಪರ್ಕ ಕೇಂದ್ರದಲ್ಲಿ ದಾಸ್ತಾನೀಕರಿಸಲಾಗಿದೆ.

ಲಾಕ್‍ಡೌನ್ ಅವಧಿಯಲ್ಲಿ ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ರೈತಭಾಂದವರು ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಬಿತ್ತನೆ ಬೀಜ ಹಾಗೂ ಇತರೆ ಪರಿಕರಗಳಿಗೆ ಬೇಡಿಕೆಯನ್ನು ಸಲ್ಲಿಸಬಹುದಾಗಿದೆ.

ರೈತ ಸಂಪರ್ಕ ಕೇಂದ್ರದ ಹೆಸರು ಹಾಗೂ ದಾಸ್ತಾನು ವಿವರ:

  • ಮಂಗಳೂರು-ಬಿ ಹೋಬಳಿ ದಾಸ್ತಾನು 25 ಕ್ವಿಂಟಾಲ್, ದೂ. ಸಂಖ್ಯೆ: 0824-2423609
  • ಸುರತ್ಕಲ್ ಹೋಬಳಿ ದಾಸ್ತಾನು 25 ಕ್ವಿಂಟಾಲ್, ದೂ. ಸಂಖ್ಯೆ: 0824-2477914
  • ಮುಲ್ಕಿ ಹೋಬಳಿ ದಾಸ್ತಾನು 50ಕ್ವಿಂಟಾಲ್, ದೂ. ಸಂಖ್ಯೆ: 0824-2290837
  • ಗುರುಪುರ ಹೋಬಳಿ ದಾಸ್ತಾನು 25 ಕ್ವಿಂಟಾಲ್ ದೂ. ಸಂಖ್ಯೆ: 9448252523
  • ಮೂಡಬಿದ್ರೆ ಹೋಬಳಿ ದಾಸ್ತಾನು 25 ಕ್ವಿಂಟಾಲ್ ದೂ. ಸಂಖ್ಯೆ: 9448252523  

ಆಸಕ್ತ ರೈತರು  ಆರ್.ಟಿ.ಸಿ ಪ್ರತಿ, ಆಧಾರ್ ಸಂಖ್ಯೆ ಹಾಗೂ ಬ್ಯಾಂಕಿನ ಪಾಸ್ ಪುಸ್ತಕದ ವಿವರದೊಂದಿಗೆ ಫ್ರೂಟ್ಸ್ ಪೋರ್ಟಲ್‍ನಲ್ಲಿ ನೋಂದಾಯಿಸಿಕೊಂಡು ಬಿತ್ತನೆ ಬೀಜವನ್ನು ಪಡೆಯಬಹುದಾಗಿದೆ ಎಂದು ಮಂಗಳೂರು ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!