ಉಡುಪಿ ನಗರಸಭೆ: ಆನ್ ಲೈನ್ ಮೂಲಕ ಶುಲ್ಕ ಪಾವತಿಗೆ ಅವಕಾಶ

 ಉಡುಪಿ ನಗರಸಭೆ: ಆನ್ ಲೈನ್ ಮೂಲಕ  ಶುಲ್ಕ ಪಾವತಿಗೆ ಅವಕಾಶ
Share this post

ಉಡುಪಿ, ಮೇ 11, 2021: ನಗರ ಸ್ಥಳೀಯ ಸಂಸ್ಥೆಗಳು ನೀಡುವ ವಿವಿಧ ಸೇವೆಗಳ ಶುಲ್ಕಗಳನ್ನು ಪಾವತಿಸಲು ಇ-ಸ್ವೀಕೃತಿ ತಂತ್ರಾಂಶವನ್ನು ಅಭಿವೃದ್ಧಿ ಮಾಡಿ ಸಾರ್ವಜನಿಕರಿಗೆ ಆನ್‌ಲೈನ್ ಮುಖಾಂತರ ವಿವಿಧ ಸೇವೆಗಳ ಶುಲ್ಕಗಳನ್ನು ಪಾವತಿಸಲು ಅವಕಾಶ ಕಲ್ಪಿಸಲಾಗಿರುತ್ತದೆ.

ಪ್ರಸ್ತುತ ಕೋವಿಡ್ -19 ಸಾಂಕ್ರಾಮಿಕ ರೋಗದ 2ನೇ ಅಲೆಯು ವ್ಯಾಪಕವಾಗಿ ಹರಡುತ್ತಿರುವುದರಿಂದ ಹಾಗೂ ಈ ಬಗ್ಗೆ ನಿಷೇದಾಜ್ಞೆ ಜ್ಯಾರಿಯಲ್ಲಿರುವುದರಿಂದ, ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಈ ಕೆಳಕಂಡ 2 ಸೇವೆಗಳ ಶುಲ್ಕಗಳನ್ನು http://www.mrc.gov.in/epay/otherMultiServices.htm ಲಿಂಕನ್ನು ಬಳಸಿ ಆನ್‌ಲೈನ್ ಮುಖಾಂತರ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.

ಕುಡಿಯುವ ನೀರಿನ ಶುಲ್ಕ (ನೀರಿನ ಬಳಕೆದಾರರ ಬಿಲ್) ವನ್ನು ಪಾವತಿಸಲು: ಜಿಲ್ಲೆ ಮತ್ತು ನಗರ ಸ್ಥಳೀಯ ಸಂಸ್ಥೆಯ ಹೆಸರನ್ನು ಉಡುಪಿ ಎಂದು ಆಯ್ಕೆ ಮಾಡಿಕೊಂಡು ಸೇವೆಯ (Head of Account) “ ನೀರು ಸರಬರಾಜು ಮತ್ತು ಒಳಚರಂಡಿ ಬಳಕೆ ಶುಲ್ಕ ” ಆಯ್ಕೆ ಮಾಡಿಕೊಂಡು ಉಪಸೇವೆ (Sub Service) ಯನ್ನು ಪ್ರಸ್ತುತ ಆರ್ಥಿಕ ವರ್ಷ ಆಯ್ಕೆ ಮಾಡಿ, ಬಿಲ್‌ನಲ್ಲಿರುವ ಮೊತ್ತವನ್ನು ಹಾಗೂ ಕಡ್ಡಾಯವಾಗಿ ‘S’ ನಂಬರ್‌ನ್ನು ಮತ್ತು ಡೋರ್ ನಂಬರನ್ನು ನಮೂದಿಸಿ ಸ್ವಯಂ ಚಲನ್ ಸೃಜಿಸಿ Internet Banking ಮುಖಾಂತರ ಪಾವತಿಸಬಹುದು.  

ಸೆಸ್‌ಪೂಲ್ ವಾಹನದ ಶುಲ್ಕವನ್ನು ಪಾವತಿಸಲು : ಜಿಲ್ಲೆ ಮತ್ತು ನಗರ ಸ್ಥಳೀಯ ಸಂಸ್ಥೆಯ ಹೆಸರನ್ನು ಉಡುಪಿ ಎಂದು ಆಯ್ಕೆ ಮಾಡಿಕೊಂಡು ಸೇವೆಯ (Head of Account) “ ವಾಹನ ಬಾಡಿಗೆಗಳು (ನೀರು ಸರಬರಾಜು ಒಳಚರಂಡಿ ನಿಧಿ) ” ಆಯ್ಕೆ ಮಾಡಿಕೊಂಡು ಉಪಸೇವೆ (Sub Seಡಿviಛಿe) ಯಲ್ಲಿ “ಸೆಸ್‌ಪೂಲ್ ವಾಹನ ಬಾಡಿಗೆ ” ಎಂದು ಆಯ್ಕೆ ಮಾಡಿ, ದರ ನಮೂದಿಸಿ, ಕಡ್ಡಾಯವಾಗಿ ಮೊಬೈಲ್ ನಂಬ್ರ ಮತ್ತು ಸಂಪೂರ್ಣ ವಿಳಾಸ ನಮೂದಿಸಿ ಸ್ವಯಂ ಚಲನ್ ಸೃಜಿಸಿ Internet Banking ಮುಖಾಂತರ ಪಾವತಿಸಬಹುದು. 

ನೀರಿನ ಬಿಲ್ ಮತ್ತು ಸೆಸ್‌ಪೂಲ್ ವಾಹನದ ಶುಲ್ಕವನ್ನು  ಪಾವತಿಸಿದ ನಂತರ ಚಲನ್ ಪ್ರತಿಯನ್ನು E-MAIL : [email protected] ಗೆ ಕಳುಹಿಸಿ, ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸುವಂತೆ ಪ್ರಕಟಣೆ ಮೂಲಕ ಕೋರಲಾಗಿದೆ.

ತಾಂತ್ರಿಕ ಸಮಸ್ಯೆಗಳೇನಾದರೂ ಬಂದಲ್ಲಿ [email protected] ಗೆ ಹಾಗೂ [email protected] ಗೆ ಸಂಪರ್ಕಿಸಬಹುದಾಗಿದೆ ಎಂದು ಉಡುಪಿ ನಗರಸಭೆಯ ಪೌರಾಯುಕ್ತರ ಪ್ರಕಟನೆ ತಿಳಿಸಿದೆ.

Subscribe to our newsletter!

Other related posts

error: Content is protected !!