ಅಗತ್ಯ ವಾಹನಗಳ ಓಡಾಟಕ್ಕೆ ಅಡ್ಡಿಪಡಿಸದಂತೆ ಆಯುಕ್ತರಿಗೆ ಮಾಜಿ ಮೇಯರ್ ಅಶ್ರಫ್ ಮನವಿ

 ಅಗತ್ಯ ವಾಹನಗಳ ಓಡಾಟಕ್ಕೆ ಅಡ್ಡಿಪಡಿಸದಂತೆ ಆಯುಕ್ತರಿಗೆ ಮಾಜಿ ಮೇಯರ್ ಅಶ್ರಫ್ ಮನವಿ
Share this post

ಮಂಗಳೂರು, ಮೇ 09, 2021: ಲಾಕ್ ಡೌನ್ ಸಮಯದಲ್ಲಿ ಅಗತ್ಯ ಖರೀದಿಗೆ ವಾಹನ ಉಪಯೋಗಿಸುವುದನ್ನು ಅಡ್ಡಿಪಡಿಸಬಾರದು ಎಂದು ಮಾಜಿ ಮೇಯರ್ ಹಾಗೂ ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಅಧ್ಯಕ್ಷ ಕೆ ಅಶ್ರಫ್ ಹೇಳಿದ್ದಾರೆ.

ಮಂಗಳೂರು ನಗರ ಪೊಲೀಸು ಆಯುಕ್ತರು ಕೆಲವು ಕಟು ನಿಯಮಗಳನ್ನು ಆದೇಶಿಸಿದ್ದು, ಜನರ ದೈನಂದಿನ, ದಿನಸಿ, ಔಷಧ, ಇಂಧನ ಇತ್ಯಾದಿಗಳಿಗೆ ವಾಹನ ಬಳಕೆ ಮಾಡಬಾರದು ಎಂದು ಆದೇಶಿಸಿದ್ದಾರೆ. ವಾಹನಗಳನ್ನು ಮುಟ್ಟು ಗೋಲು ಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಈ ಆದೇಶಕ್ಕೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಕೋಟ ಶ್ರೀನಿವಾಸ ಪೂಜಾರಿ ಜವಾಬ್ದಾರರು ಕೂಡ. ಈ ಆದೇಶ ಅಪ್ರಾಯೋಗಿಕ,” ಎಂದು ಅಶ್ರಫ್ ತಿಳಿಸಿದ್ದಾರೆ.

“ಜನರು ದಿನಸಿ ವಸ್ತುಗಳಿಗೆ ತಮ್ಮ ತಮ್ಮ ಮೊಹಲ್ಲಾವನ್ನು ಮಾತ್ರ ಅವಲಂಬಿಸಲಿಲ್ಲ. ಅಗತ್ಯ ವಸ್ತುಗಳಾದ ಧಾನ್ಯ ಅಕ್ಕಿ,ಮೀನು, ಹಾಲು ,ಔಷದ ಇತ್ಯಾದಿ ವಸ್ತುಗಳು ಒಂದೇ ಮಾರುಕಟ್ಟೆಯನ್ನು ಲಭ್ಯವಾಗುವುದಿಲ್ಲ. ಆದುದರಿಂದ ಕಿಲೋಮೀಟರ್ ಗಟ್ಟಲೆ ಜನರು ನಡೆದುಕೊಂಡು ಹೋಗುವ ಪರಿಸ್ಥಿತಿ ಬರಬಾರದು. ಆಯುಕ್ತರು ತಕ್ಷಣ ಸೀಮಿತ ಅವಧಿಗೆ ವಾಹನ ಬಳಕೆಗೆ ರಿಯಾಯಿತಿ ಘೋಷಿಸಬೇಕು,” ಎಂದು ವಿನಂತಿಸಿದ್ದಾರೆ.

“ಪ್ರತಿಬಂಧಕ ಆಜ್ಞೆ ಜಾರಿಯಾದರೆ ಪ್ರಜೆಗಳಿಗೆ ಆಹಾರ,ಆರೋಗ್ಯ ಮತ್ತು ಭದ್ರತೆ ಒದಗಿಸುವುದು ಸರಕಾರದ ಪ್ರಥಮ ಕರ್ತವ್ಯ. ಈ ಸವಲತ್ತನ್ನು ಸಮಗ್ರವಾಗಿ ದ.ಕ. ಜಿಲ್ಲೆಯಲ್ಲಿ ಸರಕಾರದ ವತಿಯಿಂದ ನೀಡಲಿ. ಇತರ ರಾಜ್ಯ ಸರಕಾರ ಜನರಿಗೆ ನೀಡಿದ ರೀತಿಯಲ್ಲಿ ಪ್ರತೀ ಕುಟುಂಬಕ್ಕೆ ತಗಲುವ ಅಕ್ಕಿ, ಬೇಳೆ ಎಣ್ಣೆ,ಹಾಲು, ಗ್ಯಾಸ್ ಇತ್ಯಾದಿ ವಸ್ತುಗಳನ್ನು ಸರಕಾರ ಜನರಿಗೆ ತಕ್ಷಣ ಪೂರೈಸಬೇಕು.ಹಾಗಾದಲ್ಲಿ ಜನರು ಲಾಕ್ ಡೌನ್ ಸಂದರ್ಭದಲ್ಲಿ ಮನೆಯಿಂದ ಹೊರಗಡೆ ಬರಲಾರರು,” ಎಂದು ಹೇಳಿದ್ದಾರೆ.

Subscribe to our newsletter!

Other related posts

error: Content is protected !!