ಶುಶ್ರೂಷಕಿ ಮತ್ತು ಗ್ರೂಪ್ ಡಿ ಹುದ್ದೆಗಳ ತಾತ್ಕಾಲಿಕ ಆಯ್ಕೆ: ನೇರ ಸಂದರ್ಶನ

 ಶುಶ್ರೂಷಕಿ ಮತ್ತು ಗ್ರೂಪ್ ಡಿ ಹುದ್ದೆಗಳ ತಾತ್ಕಾಲಿಕ ಆಯ್ಕೆ: ನೇರ ಸಂದರ್ಶನ
Share this post

ಮಂಗಳೂರು, ಮೇ 04, 2021: ಜಿಲ್ಲೆಯಾದ್ಯಂತ ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ DCH (Dedicated Covid
Hospital) ಆಗಿ ಕಾರ್ಯ ನಿರ್ವಹಿಸುತ್ತಿರುವ ವೆನ್‍ಲಾಕ್ ಜಿಲ್ಲಾ ಆಸ್ಪತ್ರೆಗೆ ಹಾಗೂ DCHC (Dedicated Covid Health Centre) ಆಗಿ ಕಾರ್ಯ ನಿರ್ವಹಿಸುತ್ತಿರುವ ತಾಲೂಕು ಆಸ್ಪತ್ರೆಗಳಿಗೆ ಶುಶ್ರೂಷಕಿ ಮತ್ತು ಗ್ರೂಪ್ ಡಿ ಹುದ್ದೆಗಳನ್ನು ಸೆಪ್ಟೆಂಬರ್  30ರ ವರೆಗೆ ಗುತ್ತಿಗೆ ಆಧಾರದಲ್ಲಿ ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲು ಮೇ 6 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯವರ ಕಚೇರಿಯಲ್ಲಿ ನೇರ ಸಂದರ್ಶನ ಕರೆಯಲಾಗಿದೆ.

ಇದನ್ನೂ ಓದಿ: ವೈದ್ಯಾಧಿಕಾರಿ ಹಾಗೂ ಶುಶ್ರೂಷಾಧಿಕಾರಿ ಹುದ್ದೆಗೆ ನೇರ ಸಂದರ್ಶನ

ತಾತ್ಕಾಲಿಕ ಹುದ್ದೆಗಳ ವಿವರ:

  • ಶುಶ್ರೂಷಕಿ ಡಿ.ಸಿ.ಹೆಚ್ ಹುದ್ದೆಗಳ ಸಂಖ್ಯೆ-19 ಡಿಪ್ಲೋಮ ಇನ್ ನರ್ಸಿಂಗ್ ಕೌನ್ಸಿಲ್‍ನಲ್ಲಿ ನೊಂದಣಿಯಾಗಿರಬೇಕು.  
  • ಗ್ರೂಪ್ ‘ಡಿ’ ಡಿ.ಸಿ.ಹೆಚ್ ಹುದ್ದೆಗಳ ಸಂಖ್ಯೆ-46, ಎಸ್.ಎಸ್.ಎಲ್.ಸಿ ತೇರ್ಗಡೆಯಾಗಿರಬೇಕು.
  • ಶುಶ್ರೂಷಕಿ ಡಿ.ಸಿ.ಹೆಚ್.ಸಿ ಹುದ್ದೆಗಳ ಸಂಖ್ಯೆ-5, ಡಿಪ್ಲೋಮ ಇನ್ ನರ್ಸಿಂಗ್ ಕೌನ್ಸಿಲ್‍ನಲ್ಲಿ ನೊಂದಣಿಯಾಗಿರಬೇಕು.
  • ಗ್ರೂಪ್ ‘ಡಿ’ ಡಿ.ಸಿ.ಹೆಚ್.ಸಿ ಹುದ್ದೆಗಳ ಸಂಖ್ಯೆ -4, ಎಸ್.ಎಸ್.ಎಲ್.ಸಿ ತೇರ್ಗಡೆಯಾಗಿರಬೇಕು.

ಅಭ್ಯರ್ಥಿಗಳು ವಿದ್ಯಾರ್ಹತೆಗೆ ಸಂಬಂಧಿಸಿದ ಎಲ್ಲಾ ಅಂಕಪಟ್ಟಿಗಳ ಮೂಲ ಪ್ರತಿ ಹಾಗೂ ಅವುಗಳ ಸ್ವಯಂ ದೃಡೀಕೃತ ನಕಲು ಪ್ರತಿಗಳು, ಅನುಭವಕ್ಕೆ ಆದ್ಯತೆ ನೀಡಲಾಗುವುದು.

ಆದ್ದರಿಂದ ಅನುಭವ ಪ್ರಮಾಣ ಪತ್ರ ಹಾಗೂ ಇತ್ತೀಚಿನ ಭಾವಚಿತ್ರದೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು. (ಈಗಾಗಲೇ ಈ ಕಚೇರಿಗೆ ಅರ್ಜಿ ಸಲ್ಲಿಸಿದವರು ನೇರ ಸಂದರ್ಶನಕ್ಕೆ ಎಲ್ಲಾ ದಾಖಲಾತಿಗಳೊಂದಿಗೆ ಹಾಜರಾಗುವುದು.)

Also read: Udupi gets oxygen supply from Davangere

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯವರ ಕಚೇರಿ ದೂ.ಸಂ: 0824-2423672 ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also read: Chamarajanagar COVID deaths: Govt appoints Commission of Inquiry

Subscribe to our newsletter!

Other related posts

error: Content is protected !!