ಉಡುಪಿ: ಮಕ್ಕಳಿಗೆ ಉಚಿತ ಟೆಲಿ ಕೌನ್ಸಿಲಿಂಗ್

 ಉಡುಪಿ: ಮಕ್ಕಳಿಗೆ ಉಚಿತ ಟೆಲಿ ಕೌನ್ಸಿಲಿಂಗ್
Share this post

ಉಡುಪಿ, ಮೇ 04, 2021: ಸಮಗ್ರ ಮಕ್ಕಳ ರಕ್ಷಣೆ ಯೋಜನೆಯಡಿ ಕರ್ನಾಟಕ ರಾಜ್ಯದಲ್ಲಿ ಆಪ್ತ ಸಮಾಲೋಚನೆಗೆ ಅಗತ್ಯವಿರುವ 0-18 ವರ್ಷದ ಎಲ್ಲಾ ಮಕ್ಕಳಿಗಾಗಿ ಉಚಿತ ಟೆಲಿ ಕೌನ್ಸಿಲಿಂಗ್ ಸೌಲಭ್ಯವನ್ನು ನೀಡಲು ಟೋಲ್ ಪ್ರೀ ಸಂಖ್ಯೆ 14499 ಸ್ಥಾಪಿಸಲಾಗಿದೆ.

ಇದು ಸಮಗ್ರ ಮಕ್ಕಳ ರಕ್ಷಣಾ ಯೋಜನೆಯಡಿ ನಿರ್ಲಕ್ಷತೆಗೆ ಒಳಗಾದ, ಪರಿತ್ಯಜಿಸಲ್ಪಟ್ಟ, ದೌರ್ಜನ್ಯಕ್ಕೊಳಗಾದ, ಶೋಷಣೆಗೆ ಒಳಗಾದ, ಕುಟುಂಬದಿಂದ ಬೇರ್ಪಟ್ಟ ಮಕ್ಕಳು , ದುರ್ಬಲ ಸ್ಥಿತಿಗೆ ತಲುಪದಿರುವಂತೆ ತಡೆಯಲು ಹಾಗೂ ಇಂತಹ ಪ್ರಕರಣಗಳನ್ನು ಕಡಿಮೆ ಮಾಡಲು ಮತ್ತು ಸಂಕಷ್ಟದಲ್ಲಿರುವ ಮಕ್ಕಳ ಪರಿಸ್ಥಿತಿಯನ್ನು ಉತ್ತಮ ಪಡಿಸುವ ಉದ್ದೇಶವನ್ನು ಹೊಂದಿರುವ ಕೇಂದ್ರ ಪುರಸ್ಕೃತ ಯೋಜನೆಯಾಗಿದೆ.

ಕೋವಿಡ್-19 ಎರಡನೇ ಅಲೆ ಅತೀ ಹೆಚ್ಚಾಗಿದ್ದು ಈ ಸಂದರ್ಭದಲ್ಲಿಆಪ್ತ ಸಮಾಲೋಚನೆ ಅಗತ್ಯವಿರುವ ಎಲ್ಲಾ ಮಕ್ಕಳಿಗಾಗಿ ಟೆಲಿಕೌನ್ಸಿಲಿಂಗ್ ಸೌಲಭ್ಯವನ್ನು ನೀಡಲಾಗುವುದು.

ಆಪ್ತ ಸಮಾಲೋಚನೆ ಬಯಸುವ ಉಡುಪಿ ಜಲ್ಲೆಯ ಎಲ್ಲಾ ಮಕ್ಕಳು  ಬೆಳಗ್ಗೆ 8 ರಿಂದರಾತ್ರಿ 8 ಗಂಟೆಯವರೆಗೆ 14499 ಸಂಖ್ಯೆಗೆ ಕರೆ ಮಾಡುವ ಮೂಲಕ ಉಚಿತವಾಗಿಆಪ್ತ ಸಮಾಲೋಚನೆಯ ಸೌಲಭ್ಯವನ್ನು ಪಡೆಯಬಹುದಾಗಿದೆ ಹಾಗೂ ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿರುವ ಉಚಿತ ಮಕ್ಕಳ ಸಹಾಯವಾಣಿ ಸಂಖ್ಯೆ; 1098 ಗೆ ಕರೆಮಾಡಬಹುದಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪ್ರಕಟಣೆ ತಿಳಿಸಿದೆ.

Subscribe to our newsletter!

Other related posts

error: Content is protected !!