ಕೋವಿಡ್ ಸೋಂಕಿತರ ಚಿಕಿತ್ಸೆಗೆ ಮಾನವ ಸಂಪನ್ಮೂಲ ಬಳಸಿಕೊಳ್ಳಿ: ಜಿಲ್ಲಾಧಿಕಾರಿ
ಕಾರವಾರ, ಮೇ 03, 2021: ಕೋವಿಡ್ ಎರಡನೇ ಅಲೆಯಿಂದ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ಕೋವಿಡ್ ಸೋಂಕಿತರು ಆಸ್ಪತ್ರೆಗೆ ದಾಖಲಾಗುತ್ತಿದ್ದು, ರೋಗಿಗಳ ಚಿಕಿತ್ಸೆಗಾಗಿ ಜಿಲ್ಲೆಯಲ್ಲಿರುವ ಮೆಡಿಕಲ್ ಕಾಲೇಜ್ ಇಂಟರ್ನಶಿಪ್ ವೈದ್ಯರೊಂದಿಗೆ ಅಗತ್ಯವಿರುವ ನರ್ಸ್ ಹಾಗೂ ಡಿ ಗ್ರೂಪ್ ನೌಕರರ ಅಪ್ರುವಲ್ ನ್ನು ತೆಗೆದುಕೊಂಡು ಮಾನವ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ ಪಿ. ಅವರು ಅಧಿಕಾರಿಗಳಿಗೆ ಸೂಚಿಸಿದರು.
ಇನ್ನೊಂದೆರಡು ದಿನಗಳಲ್ಲಿ ಮೆಡಿಕಲ್ ಕಾಲೇಜ್ ಇಂಟರ್ನ ಶಿಪ್ ವೈದ್ಯರು ಲಭ್ಯವಿದ್ದು, ಅವರನ್ನು ಕಳುಹಿಸಕೊಡಲಾಗುವುದು ಮತ್ತು ತಮಗೆ ಅಗತ್ಯವಿರುವ ವಾಹನ ಚಾಲಕರನ್ನುಇತರೆ ಇಲಾಖೆಗಳಿಂದ ಪಡೆದು ಮಾನವ ಸಂಪನ್ಮೂಲಕ್ಕೆ ಕೊರತೆಯಾಗದಂತೆ ಕಾರ್ಯನಿರ್ವಹಿಸಿ ಎಂದು ಹೇಳಿದರು.
ಪಕ್ಕದ ಮಂಗಳೂರು, ಉಡುಪಿ, ಹುಬ್ಬಳ್ಳಿ ಧಾರವಾಡ ಪ್ರದೇಶಗಳಿಗೆ ಸೋಂಕಿತರನ್ನು ಕಳುಹಿಸದೆ ಈಗಾಗಲೇ ಆ ಪ್ರದೇಶಗಳ ಆಸ್ಪತ್ರೆಗಳು ಕೂಡ ನೀರಾಕರಿಸುತ್ತಿರುವ ಸನ್ನಿವೇಶ ಕಂಡು ಬರುತ್ತಿರುವದರಿಂದ ನಮ್ಮ ಜಿಲ್ಲೆಯ ಸೊಂಕೀತರನ್ನು ನಾವೇ ನಿಭಾಯಿಸಬೇಕೆಂದರು.
ತಾಲೂಕಿನ ವೈದ್ಯರು ಹಾಗೂ ತಹಶೀಲ್ದಾರರ ಜೊತೆ ಮಾತನಡಿದ ಜಿಲ್ಲಾಧಿಕಾರಿ, ಆಸ್ಪತ್ರೆಗಳಲ್ಲಿ ಇರುವ ಕೋವಿಡ್ ಬೆಡ್, ಆಕ್ಸಿಜನ್ ಸಿಲೆಂಡರ್, ಐಸಿಯು ಎಷ್ಟೆಷ್ಟು ಇವೆ ಎಂಬುದರ ಮಾಹಿತಿ ಪಡೆದು, ಔಷಧಿ, ಆಕ್ಸಿಜನ್ ಸಿಲಂಡರ್ ಸೇರಿದಂತೆ ಯಾವುದೇ ವೈದ್ಯಕೀಯ ಉಪಕರಣಗಳ ಕೊರತೆ ಉಂಟಾದರೆ ತಕ್ಷಣ ತಿಳಿಸಿದಲ್ಲಿ ಒದಗಿಸಲಾಗುವುದು ಎಂದು ತಿಳಿಸಿದರು.
ಎಲ್ಲಾ ಅಧಿಕಾರಿಗಳು ಕೊವಿಡ್-19 ಕುರಿತ ನಿಖರ ಮಾಹಿತಿಯನ್ನು ತಿಳಿದುಕೊಂಡು ಸಮಕ್ಕೆ ಸರಿಯಾಗಿ ಜಿಲ್ಲಾಡಳಿತಕ್ಕೆ ಒದಗಿಸುವ ಕಾರ್ಯವನ್ನು ಜವಾಬ್ದಾರಿಯುತವಾಗಿ ನಿಬಾಯಿಸಬೇಕೆಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಪ್ರಿಯಾಂಗಾ ಎಮ್. ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಹೆಚ್.ಕೆ, ಹೆಚ್ಚುವರಿ ಪೊಲಿಸ್ ವರಿಷ್ಠಾಧಿಕಾರಿ ಎಸ್ ಬದರಿನಾಥ, ಎಸಿ ವಿದ್ಯಾಶ್ರೀ ಚಂದರಗಿ, ಡಿಹೆಚ್ಒ ಡಾ. ಶರದ್ ನಾಯಕ,ಜಿಲ್ಲಾ ಆಯುಷ್ ಅಧಿಕಾರಿ ಡಾ. ಲತಾ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಎಸ್. ಪುರುಷೋತ್ತಮ ಸೇರಿದಂತೆ ಇತರರು ಉಪಸ್ಥಿತರಿದ್ದರು.