ಪಾರದರ್ಶಕವಾಗಿ ನಡೆದ ಅಗ್ನಿಶಾಮಕ ದಳದ ನೇಮಕಾತಿ ಪ್ರಕ್ರಿಯೆ

 ಪಾರದರ್ಶಕವಾಗಿ ನಡೆದ ಅಗ್ನಿಶಾಮಕ ದಳದ ನೇಮಕಾತಿ ಪ್ರಕ್ರಿಯೆ
Share this post

ಕಾರವಾರ, ಮೇ 03, 2021: ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ನೇರ ನೇಮಕಾತಿಗೆ ಸಂಬಂಧಿಸಿದಂತೆ 2020-21 ನೇ ಸಾಲಿನ ವಿವಿಧ ಹುದ್ದೆಗಳ ನೇರ ನೇಮಕಾತಿ ಪ್ರಕ್ರಿಯೆಯನ್ನು 2021 ರ ಫೆಬ್ರುವರಿ 15 ರಂದು ಪ್ರಾರಂಭಿಸಿ, ಏಪ್ರಿಲ್ 27 ರ ವರೆಗೆ ಯಾವುದೇ ದೂರುಗಳು ಇಲ್ಲದೇ ಅತ್ಯಂತ ಪಾರದರ್ಶಕವಾಗಿ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಉತ್ತರ ಕನ್ನಡ ಜಿಲ್ಲಾ ಆಗ್ನಿಶಾಮಕ ಅಧಿಕಾರಿ ಮಂಜುನಾಥ ಹೆಚ್. ಸಾಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸರ್ಕಾರದ ದಿನಾಂಕ 04-10-2019 ರ ಆದೇಶದಂತೆ 2016-17ನೇ ಸಾಲಿನಲ್ಲಿ ಅಗ್ನಿಶಾಮಕ-660, ಅಗ್ನಿಶಾಮಕ ಚಾಲಕ-176 ಮತ್ತು ಚಾಲಕ ತಂತ್ರಜ್ಞ-47 ಒಟ್ಟು 883 ಹುದ್ದೆಗಳು ಹಾಗೂ 2014-15 ಮತ್ತು 2015-16 ನೇ ಸಾಲಿನ ನೇಮಕಾತಿಯಲ್ಲಿ ವಿವಿಧ ಕಾರಣಗಳಿಂದ ಬಾಕಿ ಉಳಿದ 387 ಹುದ್ದೆಗಳು ಮತ್ತು ಹೈದರಾಬಾದ್-ಕರ್ನಾಟಕ ಪ್ರದೇಶದಲ್ಲಿ ಪ್ರಸ್ತುತ ಖಾಲಿಯಿರುವ ಅಗ್ನಿಶಾಮಕ ಠಾಣಾಧಿಕಾರಿ-10, ಅಗ್ನಿಶಾಮಕ-239, ಅಗ್ನಿಶಾಮಕ ಚಾಲಕ-28 ಮತ್ತು ಚಾಲಕ ತಂತ್ರಜ್ಞ-20 ಒಟ್ಟು 297 ಹುದ್ದೆಗಳು ಸೇರಿ ಒಟ್ಟು 1,567 ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಮಂಜೂರಾತಿ ನೀಡಿತ್ತು.

ಸರ್ಕಾರವು ಮಂಜೂರಾತಿ ನೀಡಿದ ಒಟ್ಟು 1,567 ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಆನ್‍ಲೈನ್ ಮೂಲಕ ಅಧಿಸೂಚನೆ ಹಾಗೂ ಪತ್ರಿಕಾ ಪ್ರಕಟಣೆ ಹೊರಡಿಸಲಾಗಿತ್ತು. ಅದೇ ರೀತಿ ವಿವಿಧ ದರ್ಜೆಯ 1,567 ಖಾಲಿ ಹುದ್ದೆಗಳಿಗೆ ಒಟ್ಟು 1,65,354 ಅರ್ಜಿಗಳು ಸ್ವೀಕೃತವಾಗಿ ಇವುಗಳಲ್ಲಿ 1:5 ಅನು:ಪಾತದಂತೆ ಒಟ್ಟು 12,019 ಅಭ್ಯರ್ಥಿಗಳಿಗೆ ಕರೆ ಪತ್ರ ಕಳುಹಿಸಲಾಗಿತ್ತು. ಈ ಪೈಕಿ 7,087 ಅಭ್ಯರ್ಥಿಗಳು ದೈಹಿಕ ಮತ್ತು ದೇಹದಾಢ್ರ್ಯತೆ ಪರೀಕ್ಷೆಗೆ ಹಾಜರಾಗಿರುತ್ತಾರೆ.

ಆರ್.ಎ.ಮುಂಡ್ಕುರ್ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಅಕಾಡೆಮಿ, ಬನ್ನೇರುಘಟ್ಟ ರಸ್ತೆ, ಬೆಂಗಳೂರು ಇಲ್ಲಿ ಈ ನೇರ ನೇಮಕಾತಿ ಪ್ರಕ್ರಿಯೆಯ ದೈಹಿಕ ಮತ್ತುದೇಹದಾಢ್ರ್ಯತೆ ಪರೀಕ್ಷೆ ನಡೆಸಲಾಗಿರುತ್ತದೆ.

ಪರೀಕ್ಷೆ ನಡೆಸಿದ ಸ್ಥಳಗಳಲ್ಲಿ ಪಾರದರ್ಶಕತೆ ಕಾಪಾಡುವ ದೃಷ್ಟಿಯಿಂದ 10 ಸಿ.ಸಿ. ಕ್ಯಾಮರಾಗಳನ್ನು ಅಳವಡಿಸಿ ಪ್ರತಿಯೊಬ್ಬ ಅಭ್ಯರ್ಥಿಗಳಿಗೆ ಬಯೋಮೆಟ್ರಿಕ್ ಉಪಯೋಗಿಸಿ ಪ್ರತಿಯೊಬ್ಬರ ಭಾವಚಿತ್ರದ ಜೊತೆಗೆ ಹೆಬ್ಬೆರಳಿನ ಗುರುತನ್ನು ದಾಖಲು ಮಾಡಿ, ಅಭ್ಯರ್ಥಿಗಳ ಎಲ್ಲಾ ದಾಖಲಾತಿಗಳನ್ನು ಪರಿಶೀಲಿಸಿ ಪ್ರತಿಯೊಬ್ಬರಿಗೂ ಚೆಸ್ಟ್ ನಂಬರ್ ನೀಡಿ ಎಲ್ಲಾ ಹಂತಗಳಲ್ಲಿಯೂ ವಿಡಿಯೋ ರೇಕಾರ್ಡ್ ಮಾಡಲಾಗಿದೆ.

ಅಭ್ಯರ್ಥಿಗಳ ದೈಹಿಕ ಪರೀಕ್ಷೆಅಂದರೆ ತೂಕ ಮತ್ತು ಎತ್ತರಗಳನ್ನು ಪರೀಕ್ಷಿಸಲು ಬಿ.ಎಮ್.ಐ ಮಿಷಿನ್ ಸಹ ಬಳಸಲಾಗಿರುತ್ತದೆ. ದೇಹದಾಢ್ರ್ಯತೆ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ತೆಗೆದುಕೊಂಡ ಸಮಯವನ್ನು ದಾಖಲಿಸಲು ಯುವಜನಾ ಸೇವಾ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಅಮೆಚೂರ್ ಅಥ್ಲೆಟಿಕ್ ಅಸೋಶಿಯೇಷನ್ ವತಿಯಿಂದ 09 ಜನತೀರ್ಪುಗಾರರ ಸೇವೆಯನ್ನು ಪಡೆಯಲಾಗಿತ್ತು.

ಪ್ರತಿಯೊಂದು ಹಂತದ ಪರೀಕ್ಷೆಯ ನಂತರ ಫಲಿತಾಂಶವನ್ನುಕೂಡಲೇ ಅಭ್ಯರ್ಥಿಗಳಿಗೆ ತೋರಿಸಿ ಸಹಿ ಪಡೆದು ಅದರ ಒಂದು ಫಲಿತಾಂಶದ ಹಾಳೆಯ ಪ್ರತಿಯನ್ನು ಪ್ರತಿಯೊಬ್ಬಅಭ್ಯರ್ಥಿಗೆ ನೀಡಲಾಗಿದೆ.

ಈ ನೇರ ನೇಮಕಾತಿ ಪ್ರಕ್ರಿಯೆಯಲ್ಲಿ ಕೋವಿಡ್-19 ಗೆ ಸಂಬಂಧಿಸಿದಂತೆ ಸರ್ಕಾರದ ಸುತ್ತೋಲೆಯನ್ವಯ ಎಲ್ಲಾ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಂಡು ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!