ಕೊರೋನಾ ವಿರುದ್ಧದ ಹೋರಾಟದಲ್ಲಿ ವೈದ್ಯರೊಂದಿಗೆ ಸಹಕರಿಸಿ: ಮಾಧವ ಬಿ ನಾಯಕ

 ಕೊರೋನಾ ವಿರುದ್ಧದ ಹೋರಾಟದಲ್ಲಿ ವೈದ್ಯರೊಂದಿಗೆ ಸಹಕರಿಸಿ:  ಮಾಧವ ಬಿ ನಾಯಕ
Share this post
ಮಾಧವ ಬಿ ನಾಯಕ

ಕೊರೊನಾ ಹೆಚ್ಚಳ ಯಾವ ಮಟ್ಟಕ್ಕೆ ತಲುಪುತ್ತಿದೆ ಎಂದರೆ ಮೈಸೂರಿನಂತಹ ಮಹಾನಗರದಲ್ಲಿ ಆರೋಗ್ಯ ಸೌಲಭ್ಯಕ್ಕೆ ಒತ್ತು ನೀಡುವ ಬದಲು ಶವದ ಅಂತ್ಯಸಂಸ್ಕಾರಕ್ಕೆ ಚಟ್ಟ ಸಿದ್ಧಪಡಿಸಿಟ್ಟುಕೊಳ್ಳುವ ಪರಿಸ್ಥಿತಿ ಉಂಟಾಗಿದೆ. ಇದು ಸದ್ಯದ ಪರಿಸ್ಥಿತಿ ಅಣಕ ಎನ್ನುವುದಕ್ಕಿಂತ ನಮ್ಮೆದುರು ಇರುವ ಅಪಾಯದ ಮುನ್ಸೂಚನೆಯನ್ನು ಪ್ರತಿಬಿಂಬಿಸುತ್ತಿದೆ.

ಕಳೆದ ಒಂದು ವರ್ಷದಿಂದಲೂ ಕೋವಿಡ್ ಮಹಾಮಾರಿಯ ಹರಡುವಿಕೆ ಮತ್ತು ಅದನ್ನು ನಿರಂತರ ಶ್ರಮದೊಂದಿಗೆ ನಿಯಂತ್ರಣಕ್ಕೆ ತರಲು ವೈದ್ಯಕೀಯ ಸಿಬ್ಬಂದಿ ಶ್ರಮಿಸುತ್ತಿರುವುದನ್ನು ಕಂಡಿದ್ದೇವೆ, ಕಾಣುತ್ತಿದ್ದೇವೆ. ಕೊರೊನಾ ಸಾಂಕ್ರಾಮಿಕ ನಿಯಂತ್ರಣಕ್ಕೆ ತರಲು ಪ್ರತಿಯೊಬ್ಬರ ಜವಾಬ್ದಾರಿ ಇದೆ. ಅದರಲ್ಲೂ ಈ ರೋಗ ತಡೆಗಟ್ಟಲು ವೈದ್ಯರು, ನರ್ಸ್ ಗಳು, ಇತರ ಆರೋಗ್ಯ ಸಂಬಂಧಿ ಸಿಬ್ಬಂದಿಗಳು ಪಡುತ್ತಿರುವ ಶ್ರಮ ಅಷ್ಟಿಟ್ಟಲ್ಲ.

Also read: DK overtakes Udupi in organizing wedding on weekend curfew

ರೋಗದ ಹರಡುವಿಕೆಗೆ ಬೆದರಿ ಧಾರ್ಮಿಕ ಕೇಂದ್ರಗಳೆಲ್ಲ ಬಾಗಿಲು ಮುಚ್ಚಿರುವ ಈ ಸಂದರ್ಭದಲ್ಲಿ ಧೈರ್ಯಗೆಡದೆ ನಮ್ಮೆಲ್ಲರ ಆರೋಗ್ಯ ರಕ್ಷಣೆಗೆ ನಿಂತ ವೈದ್ಯಲೋಕವನ್ನು ಗೌರವಿಸುವ ಜೊತೆಗೆ, ಚಿಕಿತ್ಸೆಗೆ ಸಹಕರಿಸುವ ಜವಾಬ್ದಾರಿ ಸೋಂಕಿತರು ಮತ್ತು ಅವರ ಕುಟುಂಬಸ್ಥರಿಗೆ ಇದೆ.

ಕೊರೊನಾ ಸೋಂಕಿತರಿಗೆ ಅಗತ್ಯ ಚಿಕಿತ್ಸೆಯನ್ನು ಆಯಾ ಆಸ್ಪತ್ರೆಗಳು ನೀಡುತ್ತಿವೆ. ವೈದ್ಯರು, ನರ್ಸ್‍ಗಳು, ಸ್ವಚ್ಛತಾ ಸಿಬ್ಬಂದಿ ನಿರಂತರವಾಗಿ ಅವರ ಆರೈಕೆಯಲ್ಲಿ ನಿರತರಾಗಿದ್ದಾರೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ವೈದ್ಯರಿಗೆ ಸಲೈನ್ ನೀಡಿ, ಆ ಮಾತ್ರೆ ನೀಡಿ, ಈ ಮಾತ್ರೆ ನೀಡಿ ಎನ್ನುತ್ತ ಚಿಕಿತ್ಸೆ ವಿಧಾನವನ್ನೇ ಪ್ರಶ್ನಿಸುವ ಕೆಲಸ ಮಾಡಬಾರದು. ಚಿಕಿತ್ಸೆ ಕುರಿತು ಅನಗತ್ಯ ಅಸಮಾಧಾನ ವ್ಯಕ್ತಪಡಿಸಿ ವೈದ್ಯರ ಮನೋಸ್ಥೈರ್ಯ ಕುಸಿಯುವಂತೆ ಮಾಡಬಾರದು.

ಸೋಂಕಿತರಿಗೆ ಚಿಕಿತ್ಸೆ ನೀಡುವ ಧವಂತದಲ್ಲಿ ವರ್ಷಗಳಿಂದಲೂ ತಮ್ಮ ಖಾಸಗಿ ಜೀವನ ಬಲಿಕೊಟ್ಟಿರುವ ವೈದ್ಯರಿದ್ದಾರೆ. ತಮ್ಮ ಕುಟುಂಬ, ಮಕ್ಕಳು ಎನ್ನದೆ ಸೋಂಕಿತರ ಆರೈಕೆಗೆ ಆದ್ಯತೆ ನೀಡಿ ಕೆಲಸ ಮಾಡುತ್ತಿರುವ ವೈದ್ಯರು, ಸಿಬ್ಬಂದಿ ನಮ್ಮ ನಡುವೆ ಇದ್ದಾರೆ.

Also read: Udupi: About 17 thousand people get permission to venture out during weekend curfew!

ಮತ್ತೊಮ್ಮೆ ನೆನಪಿನಲ್ಲಿಡಿ ವೈದ್ಯರು, ಆರೋಗ್ಯ ಸಿಬ್ಬಂದಿ ನಮ್ಮ ಕಣ್ಣೆದುರಿಗಿರುವ ದೇವರಾಗಿದ್ದಾರೆ. ಅವರೇ ಸದ್ಯದ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ಶಕ್ತಿ ಹೊಂದಿದ್ದಾರೆ. ಆ ಶಕ್ತಿ ಕುಂದದಂತೆ ಎಚ್ಚರವಹಿಸುವ ಜವಾಬ್ದಾರಿಯನ್ನು ಪ್ರತಿಯೊಬ್ಬರೂ ನಿಭಾಯಿಸೋಣ. ವೈದ್ಯಲೋಕದ ಬೆಂಬಲಕ್ಕೆ ನಿಲ್ಲೋಣ.

Also read: Now only 5 allowed to attend funeral

ಮಾಧವ ಬಿ ನಾಯಕ, ಜನಶಕ್ತಿ ವೇದಿಕೆ ಅಧ್ಯಕ್ಷ

ಕಾರವಾರ

Subscribe to our newsletter!

Other related posts

error: Content is protected !!