ಮಂಗಳೂರು: ನೀರು ಸರಬರಾಜಿನಲ್ಲಿ ವ್ಯತ್ಯಯ
ಮಂಗಳೂರು, ಎಪ್ರಿಲ್ 21, 2021: ಎಪ್ರಿಲ್ 23 ರಂದು ಬೆಳಗ್ಗೆ 6 ಗಂಟೆಯಿಂದ 24 ರ ಬೆಳಿಗ್ಗೆ 6 ಗಂಟೆಯವರೆಗೆ ಸುರತ್ಕಲ್, ಕಾಟಿಪಳ್ಳ, ಎನ್.ಐ.ಟಿ.ಕೆ, ಎಂ.ಸಿ.ಎಫ್, ಕೂಳೂರು, ಕಾವೂರು ಭಾಗಶಃ, ಕೋಡಿಕಲ್ ಭಾಗಶಃ, ಪಿ.ವಿ.ಎಸ್, ಲೇಡಿಹಿಲ್, ಬಂದರ್ ಇತ್ಯಾದಿ ಪ್ರದೇಶಗಳಿಗೆ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಮಂಗಳೂರು ಮಹಾನಗರಪಾಲಿಕೆಯ ನೀರು ಸರಬರಾಜು ವ್ಯವಸ್ಥೆಯ ತುಂಬೆ ಹೆಚ್ಎಲ್ಪಿಎಸ್ 1- 18ಎಮ್ಜಿಡಿ ರೇಚಕ ಸ್ಥಾವರದಿಂದ ಹಿಲ್ಲ್ಟೋಪ್ ಟ್ಯಾಂಕ್ಗೆ ಪಂಪಿಂಗ್ ಮಾಡುವ ಮುಖ್ಯ ಕೊಳವೆಯ ಮಲ್ಟಿ ಶೆಟರ್ ಹಾಗೂ ಮಲ್ಟಿ ಅವರ್ಸ್ ಎನ್ಆರ್ವಿ ಗಳು ಹಾಳಾಗಿದ್ದು ಬದಲಿಗೆ ಹೊಸ ‘0’ ವೆಲೊಸಿಟಿ ವಾಲ್ಸ್ ಗಳನ್ನು ಅಳವಡಿಸುವ ಕಾಮಗಾರಿಗಾಗಿ ಸಂಪೂರ್ಣವಾಗಿ ನೀರು ನಿಲುಗಡೆಗೊಳಿಸುವುದರಿಂದ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವುದೆಂದು ಮಂಗಳೂರು ಮಹಾನಗರಪಾಲಿಕೆಯ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.