ಗ್ರಾಹಕರಿಂದ ಹೆಚ್ಚುವರಿ ಹಣ ವಸೂಲಿ ಮಾಡುವ ಅಡುಗೆ ಅನಿಲ ವಿತರಕ ಏಜೆನ್ಸಿಗಳ ಮೇಲೆ ಕ್ರಮ ಕೈಗೊಳ್ಳಲು ಎಸ್‌ಡಿಪಿಐ ಆಗ್ರಹ

 ಗ್ರಾಹಕರಿಂದ ಹೆಚ್ಚುವರಿ ಹಣ ವಸೂಲಿ ಮಾಡುವ ಅಡುಗೆ ಅನಿಲ ವಿತರಕ ಏಜೆನ್ಸಿಗಳ ಮೇಲೆ ಕ್ರಮ ಕೈಗೊಳ್ಳಲು ಎಸ್‌ಡಿಪಿಐ ಆಗ್ರಹ
Share this post

ಮಂಗಳೂರು, ಏಪ್ರಿಲ್ 20, 2021: ಜಿಲ್ಲಾ ಅಹಾರ ಹಾಗೂ ನಾಗರಿಕ ಪೂರೈಕೆ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರನ್ನು ಭೇಟಿಯಾದ ಎಸ್‌ಡಿಪಿಐ ನಾಯಕರು, ಮೂಲಬೆಲೆಗಿಂತ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ಅಡುಗೆ ಅನಿಲ ಏಜೆನ್ಸಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡುಗೆ ಅನಿಲ ವಿತರಿಸುವ ಏಜೆನ್ಸಿಗಳು ಗ್ರಾಹಕರಿಂದ ಮೂಲಬೆಲೆಗಿಂತ ಹೆಚ್ಚಿನ ಹಣವನ್ನು ವಸೂಲಿ ಮಾಡುತ್ತಿದ್ದಾರೆ. ಇದರ ಬಗ್ಗೆ ವಿಚಾರಿಸಿದಾಗ ಇದು ಸಾಗಾಟದ ಹೆಚ್ಚುವರಿ ಹಣ ಎಂಬ ಸಬೂಬು ನೀಡುತ್ತಿದ್ದಾರೆ, ಆದರೆ ಸಾಗಾಟಕ್ಕೆ ಸರಕಾರ ನಿಗದಿಪಡಿಸಿದ ಮಾನದಂಡ ಇದ್ದು ಇದನ್ನು ಬಹುತೇಕ ಎಲ್ಲಾ ಕಂಪೆನಿಗಳ ಎಜೆನ್ಸಿಗಳು ಗಾಳಿಗೆ ತೂರಿ ತಮ್ಮಿಚ್ಚೆಯಂತೆ ಬೇಕಾಬಿಟ್ಟಿ ಹಣ ವಸೂಲಿ ಮಾಡುವ ಮೂಲಕ ಹಗಲು ದರೋಡೆ ನಡೆಸುತ್ತಿವೆ ಎಂದು ಎಸ್‌ಡಿಪಿಐ ನಾಯಕರು ಹೇಳಿದರು.

ಈಗಾಗಲೇ ದಿನನಿತ್ಯದ ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರುತ್ತಿದ್ದು ಅದರಲ್ಲಿ ಅಡುಗೆ ಅನಿಲದ ಬೆಲೆಯೂ ವಿಪರೀತ ದುಬಾರಿಯಾಗಿ ಸರಕಾರದ ಸಹಾಯಧನವೂ ಇದೀಗ ಲಭಿಸುತ್ತಿಲ್ಲ ಇದರಿಂದಾಗಿ ಮಧ್ಯಮ ವರ್ಗದ ಹಾಗೂ ಬಡಜನರ ಜೀವನ ನಿರ್ವಹಣೆ ಕಷ್ಟಕರವಾಗಿದೆ. ಇಂತಹ ಸಂದರ್ಭದಲ್ಲಿ ಎಜೆನ್ಸಿಗಳು ಪಡೆಯುವ ಹೆಚ್ಚುವರಿ ಮೊತ್ತವನ್ನು ತಾವುಗಳು ಕೂಡಲೇ ತಡಹಿಡಿಯಬೇಕು ಹಾಗೂ ವಿತರಕರ ಮೇಲೆ ಇಲಾಖೆ ವತಿಯಿಂದ ನಿಯಂತ್ರಣ ಹೇರುವ ಮೂಲಕ ಜನಸಾಮಾನ್ಯರಿಗೆ ನ್ಯಾಯ ಒದಗಿಸಿ ಕೊಡಬೇಕೆಂದು ನಿಯೋಗವು ಅಹಾರ ಇಲಾಖೆಯ ಉಪನಿರ್ದೇಶಕರಲ್ಲಿ ಒತ್ತಾಯಿಸಿದೆ.

ಎಸ್‌ಡಿಪಿಐ ನಿಯೋಗದಲ್ಲಿ ಜಿಲ್ಲಾ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು, ರಾಜ್ಯ ಮುಖಂಡರಾದ ಶರೀಫ್ ಪಾಂಡೇಶ್ವರ ಹಾಗೂ ಜಿಲ್ಲಾ ಸಮಿತಿ ಸದಸ್ಯರಾದ ಖಾದರ್ ಪರಂಗಿಪೇಟೆ ಉಪಸ್ಥಿತರಿದ್ದರು.

Subscribe to our newsletter!

Other related posts

error: Content is protected !!