ವಿಕಲಚೇತನರ ಮಾಸಾಶನ ದೂರುಗಳಿಗೆ ವಾಟ್ಸ್ಆ್ಯಪ್ ಕರೆ ಮೂಲಕ ಪರಿಹಾರ

 ವಿಕಲಚೇತನರ ಮಾಸಾಶನ ದೂರುಗಳಿಗೆ ವಾಟ್ಸ್ಆ್ಯಪ್ ಕರೆ ಮೂಲಕ ಪರಿಹಾರ
Share this post

ಮಂಗಳೂರು, ಎಪ್ರಿಲ್ 18, 2021: ಜಿಲ್ಲೆಯಲ್ಲಿ ವಿಕಲಚೇತನರ ಮಾಸಾಶನಕ್ಕೆ ಸಂಬಂಧಿಸಿದಂತೆ, ಯಾವುದೇ ತೊಂದರೆಯಿದ್ದಲ್ಲಿ ಈ ಹಿಂದೆ ಮಂಗಳೂರು ವಿಕಲಚೇತನರ ಕಚೇರಿಗೆ ಬಂದು ಮನವಿ ಸಲ್ಲಿಸಲಾಗುತ್ತಿತ್ತು. ಇನ್ನು ಮುಂದಿನ ದಿನಗಳಲ್ಲಿ ಇಂತಹಾ ತೊಂದರೆಯನ್ನು ನಿವಾರಿಸುವ ಸಲುವಾಗಿ ಮಾಸಾಶನಕ್ಕೆ ತೊಂದರೆಯಾಗುತ್ತಿರುವ ವಿಕಲಚೇತನರು ಮೊಬೈಲ್ ಸಂಖ್ಯೆ: 7022071925 ಗೆ ವಾಟ್ಸ್‍ಆ್ಯಪ್ ಗೆ ಕರೆ ಮಾಡುವ ಮೂಲಕ ತಮ್ಮ ಮನವಿಯನ್ನು ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗಳ ಕಚೇರಿ ದೂ. ಸಂಖ್ಯೆ 0824-2458173 ಹಾಗೂ ಇ-ಮೇಲ್: [email protected] ಅನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಯಮುನಾ ಡಿ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!