ಎಸ್‌ಡಿಪಿಐ ವತಿಯಿಂದ ಸಾಮಾಜಿಕ ನ್ಯಾಯ ದಿನ ಆಚರಣೆ
ಸಂವಿಧಾನ ಶಿಲ್ಪಿ ಡಾI ಬಾಬಾ ಸಾಹೇಬ್ ಅಂಬೇಡ್ಕರ್ ರವರ 130 ನೇ ಜನ್ಮ ದಿನಾಚರಣೆ
ಪುತ್ತೂರು, ಏಪ್ರಿಲ್ 14, 2021: ಸಂವಿಧಾನ ಶಿಲ್ಪಿ ಡಾI ಬಾಬಾ ಸಾಹೇಬ್ ಅಂಬೇಡ್ಕರ್ ರವರ 130 ನೇ ಜನ್ಮ ದಿನಾಚರಣೆ ಪ್ರಯುಕ್ತ ಸೋಶಿಯಲ್ ಡೆಮೋಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ವತಿಯಿಂದ ಇಂದು ಪುತ್ತೂರಿನಲ್ಲಿ ಸಾಮಾಜಿಕ ನ್ಯಾಯ ದಿನ ಆಚರಿಸಲಾಯಿತು.
‘ಅಂಬೇಡ್ಕರ್ ಅವರ ಕನಸಿನ ರಾಷ್ಟ್ರ ಕಟ್ಟೋಣ’ ಎಂಬ ದ್ಯೇಯ ವಾಕ್ಯದೊಂದಿಗೆ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಪುತ್ತೂರು ವಿದಾನಸಬಾ ಕ್ಷೇತ್ರ ಸಮಿತಿಯ ಅಧ್ಯಕ್ಷ ಕೆ ಎ ಸಿದ್ದೀಕ್ ಪುತ್ತೂರು ವಹಿಸಿದ್ದರು .
ಕಾರ್ಯಕ್ರಮ ದಲ್ಲಿ ಎಸ್‌ಡಿಟಿಯು ಪುತ್ತೂರು ತಾಲೂಕು ಅಧ್ಯಕ್ಷರಾದ ಹಮೀದ್ ಸಾಲ್ಮರ ಪ್ರಾಸ್ತಾವಿಕವಾಗಿ ಮಾತನಾಡಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ತತ್ವ ಸಿದ್ದಾಂತವನ್ನು ಮುಂದುವರೆಸಿಕೊಂಡು ಈ ದೇಶವನ್ನ ಬಲಿಷ್ಠ ವಾಗಿ ಕಟ್ಟಲು ಎಸ್‌ಡಿಪಿಐ ಯಿಂದ ಮಾತ್ರ ಸಾದ್ಯ ಎಂದು ತಿಳಿಸಿದರು.
ಇದನ್ನೂ ಓದಿ: ರಂಝಾನ್ ಸಂದರ್ಭದಲ್ಲಿ ಪೊಲೀಸ್ ಸಹಕಾರ ಕೋರಿ ಆಯುಕ್ತರಿಗೆ ಕೆ.ಅಶ್ರಫ್ ನೇತೃತ್ವದ ಮುಸ್ಲಿಮ್ ಒಕ್ಕೂಟ ಮನವಿ
ಮುಖ್ಯ ಅಥಿತಿಯಾಗಿ ಆಗಮಿಸಿದ ಜಿಲ್ಲಾ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು ಅಂಬೇಡ್ಕರ್ ಸಿದ್ದಾಂತದ ಅಗತ್ಯತೆ ದೇಶದಲ್ಲಿ ಹಿಂದೆಂದಿಗಿಂತಲೂ ಇಂದು ಹೆಚ್ಚಿದೆ , ಮನುವಾದಿಗಳನ್ನು ಹೆಡೆಮುರಿ ಕಟ್ಟುವ ಮೂಲಕ ಸಂವಿಧಾನವನ್ನ ಉಳಿಸಬೇಕಾಗಿದೆ ಎಂದು ಕರೆ ನೀಡಿದರು
ಜಿಲ್ಲಾ ಕಾರ್ಯದರ್ಶಿ ಅಶ್ರಫ್ ಮಂಚಿ, ಕುರಿಯ ಗ್ರಾಮ ಪಂಚಾಯತ್ ಸದಸ್ಯ ನಾಗೇಶ್ ಕುರಿಯ, ಕ್ಷೇತ್ರ ಸಮಿತಿಯ ಉಪಾಧ್ಯಕ್ಷ ಇಬ್ರಾಹಿಂ ಸಾಗರ್ , ಸವಣೂರು ಗ್ರಾಮ ಪಂಚಾಯತ್ ಸದಸ್ಯ ಬಾಬು ಸವಣೂರು, ಹಿರಿಯ ಮುಖಂಡ ಪಿಬಿಕೆ ಮುಹಮ್ಮದ್ ದಿವಂಗತ ಕೂಸಪ್ಪನವರ ದರ್ಮಪತ್ನಿ ಸುಶೀಲಾ ಉಪಸ್ಥಿತರಿದ್ದರು
ಕ್ಷೇತ್ರ ಸಮಿತಿಯ ಕಾರ್ಯದರ್ಶಿ ಅಶ್ರಫ್ ಬಾವು ಸ್ವಾಗತಿಸಿದರು, ನಗರ ಸಮಿತಿ ಅಧ್ಯಕ್ಷರಾದ ಬಶೀರ್ ಕೂರ್ನಡ್ಕ ನಿರೂಪಿಸಿ ದನ್ಯವಾದಗೈದರು