ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿ ಉಪಸ್ಥಿಯಲ್ಲಿ ಸಾರಸ್ವತರ ನಾಡು ಕಾಶ್ಮೀರದಲ್ಲಿ ಚಂಡಿಕಾ ಹವನ
ಮಂಗಳೂರು, ಏಪ್ರಿಲ್ 06, 2021: ಶ್ರೀ ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಮಾರ್ಗದರ್ಶನ ಹಾಗೂ ದಿವ್ಯ ಉಪಸ್ಥಿಯಲ್ಲಿ ಶ್ರೀನಗರದ ಶ್ರೀ ಅಮೃತೇಶ್ವರ ಭೈರವ ದೇವಸ್ಥಾನದ ಆವರಣದಲ್ಲಿ ರುವ ಭವ್ಯ ಯಜ್ಞ ಮಂಟಪದಲ್ಲಿ ವಿವಿಧ ಗೋತ್ರೆಯ ವೈದಿಕರಿಂದ ” ಸರಸ್ವತಿ ಸೂಕ್ತ ಯುಕ್ತ ಚಂಡಿಕಾ ಹವನ ” ನಡೆಯಿತು.
ಶ್ರೀಗಳವರು ಮಹಾ ಪೂರ್ಣಾಹುತಿ ನೆರವೇರಿಸಿದರು.
ಕಾಶ್ಮೀರಕ್ಕೆ ಶ್ರೀ ಕಾಶೀ ಮಠಾಧೀಶರ ಚಾರಿತ್ರಿಕ ಭೇಟಿ
ಜಮ್ಮು ಕಾಶ್ಮೀರದ ಐತಿಹಾಸಿಕ ಭೇಟಿಯಲ್ಲಿ ಇರುವ ಶ್ರೀಗಳು ಈಗಾಗಲೇ ಕಾಶ್ಮೀರದ ಅತ್ಯಂತ ಪುರಾತನ ದೇವಾಲ ಯಗಳಾದ ವೈಷನೋ ದೇವಿ ದೇವಸ್ಥಾನ , ಖೀರ್ ಭವಾನಿ ದೇವಸ್ಥಾನ , ಮಾರ್ಥಂಡ ಸೂರ್ಯ ದೇವಸ್ಥಾನ , ಪಂಚಮುಖಿ ಹನುಮಂತ ದೇವಸ್ಥಾನ , ಅವಂತೀಪುರ ದೇವಸ್ಥಾನ , ತ್ರಿಪುರ ಸುಂದರಿ ದೇವಸ್ಥಾನ , ಶೈಲಪುತ್ರಿ ದೇವಸ್ಥಾನ , ಜಮ್ಮು ಶ್ರೀ ರಘುನಾಥ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿರುವರು.
ಸಾರಸ್ವತ ಸಮುದಾಯಕ್ಕೆ ಸೇರಿದ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿದ ಸ್ವಾಮೀಜಿಯವರು
ಇಲ್ಲಿನ ಕಣಿವೆಯ ಪ್ರಮುಖರನ್ನು ಭೇಟಿಯಾಗಿ ಸಾರಸ್ವತ ಸಮಾಜದ ಪೂರ್ವಜರ ನೆಲೆಗಳ, ಇತಿಹಾಸದ ಕುರಿತಂತೆ ತಿಳಿದುಕೊಂಡು, ಸ್ಥಳೀಯ ಪ್ರಮುಖರ ಜೊತೆ ಸಮಾಜದ ಸಾರಸ್ವತ ಸಮಾಜದ ಪ್ರಸ್ತುತ ಸ್ಥಿತಿಗತಿ ,ಸವಾಲುಗಳು ಮತ್ತು ಅವರ ವಲಸೆಗೆ ಕಾರಣವಾದ ಅಂಶಗಳ ಕುರಿತು ಚರ್ಚಿಸಿದರು ಸಾರಸ್ವತ ಸಮಾಜದ ಸಂಘಟನೆಯಲ್ಲಿ ಶ್ರೀಗಳವರ ಈ ಚಾರಿತ್ರಿಕ ಭೇಟಿ ಪ್ರಮುಖವಾಗಿದ್ದು ಸಮಾಜಕ್ಕೆ ಹೊಸ ದಿಕ್ಸೂಚಿ ಮತ್ತು ಸಾರಸ್ವತ ಸಮಾಜದ ಜಮ್ಮುಕಾಶ್ಮೀರದ ಸಾಂಸ್ಕೃತಿಕ ಪರಂಪರೆಯನ್ನು ಮರು ನಿರ್ಮಾಣ ಮಾಡುವಲ್ಲಿ ಮಹತ್ವದ್ದಾಗಿದೆ.
ಇದೇ ಸಂದರ್ಭದಲ್ಲಿ ಕಾಶ್ಮೀರದಲ್ಲಿ ತಮ್ಮ ಪ್ರಥಮ ಚಾರಿತ್ರಿಕ ಭೇಟಿಯ ಹಿನ್ನೆಲೆಯಲ್ಲಿ
ಶ್ರೀಗಳು ಭೂಮಿಪೂಜೆಯನ್ನು ನೆರವೇರಿಸಿದರು. ಪೂರ್ವಕಾಲದಲ್ಲಿ ಇಲ್ಲಿ ನೆಲೆಯಾಗಿದ್ದ ಸಾರಸ್ವತ ಸಮುದಾಯ ವಿವಿಧ ಕಾರಣಗಳಿಗೆ ದೇಶದ ವಿವಿಧ ಭಾಗಗಳಿಗೆ ಹೋಗಿದ್ದು ಶ್ರೀಗಳವರು ಮಾತೆ ಸರಸ್ವತಿಯ ಈ ಪವಿತ್ರ ನೆಲದಲ್ಲಿ ಮತ್ತೆ ಸಾರಸ್ವತ ಸಮಾಜದ ಮರುವಸತಿ, ಅಭಿವೃದ್ಧಿಯ ಕುರಿತು ಪ್ರಾರ್ಥಿಸಿದರು.
ಜಮ್ಮು ಕಾಶ್ಮೀರ ಗೌ ರಕ್ಷಾ ಸಮಿತಿ , ಅಮರ್ ರಾಜಪುತ್ ಸಭಾ , ಜಮ್ಮು ಕಾಶ್ಮೀರ ವಿಶ್ವ ಹಿಂದೂ ಪರಿಷತ್ ಕಾರ್ಯಕಾರಿ ಅಧ್ಯಕ್ಷ , ಜಮ್ಮು ಕಾಶ್ಮೀರ ಬ್ರಾಹ್ಮಣ ಸಭಾ , ಹಿಂದೂ ಜಾಗರಣ ಮಂಚ್ , ಜಮ್ಮು ಕಾಶ್ಮೀರ ವಾಣಿಜ್ಯ ಮಂಡಳಿ ಯ ಅಧ್ಯಕ್ಷ ಹಾಗೂ ಪದಾಧಿಕಾರಿಗಳು , ಜಮ್ಮು ನಗರ ಪಾಲಿಕೆಯ ಮೇಯರ್ , ಉಪ ಮೇಯರ್ ಹಾಗೂ ಜನ ಪ್ರತಿನಿಧಿಗಳು , ವೇದ ಮಂದಿರದ ಅಧ್ಯಕ್ಷ ಹಾಗೂ ಪದಾಧಿಕಾರಿಗಳು ,ಜಮ್ಮು ರಾಷ್ಟ್ರೀಯ ಸೇವಿಕಾ ಸಮಿತಿ , ರಾಷ್ಟ್ರೀಯ ವೈದ್ಯಕೀಯ ಸಭಾ , ಆರ್ಯ ಪ್ರತಿನಿಧಿ ಸಭಾ , ಸನಾತನ ಧರ್ಮ ಸಭಾ , ಜಮ್ಮು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪದಾಧಿಕಾರಿಗಳು , ದೆಹಲಿ , ಮುಂಬಯಿ , ಕರ್ನಾಟಕ , ಕೇರಳ ರಾಜ್ಯದ ಸಂಸ್ಥಾನದ ಅನುಯಾಯಿಗಳು ಉಪಸ್ಥಿತರಿದ್ದರು.
ಚಿತ್ರ : ಮಂಜು ನೀರೇಶ್ವಾಲ್ಯ