ಆಹಾರ ಉದ್ಯಮ ವ್ಯಾಪಾರಸ್ಥರಿಗೆ ಫಾಸ್ಟೇಕ್ ತರಬೇತಿ ಕಡ್ಡಾಯ

 ಆಹಾರ ಉದ್ಯಮ ವ್ಯಾಪಾರಸ್ಥರಿಗೆ ಫಾಸ್ಟೇಕ್ ತರಬೇತಿ ಕಡ್ಡಾಯ
Share this post

ಕಾರವಾರ, ಏಪ್ರಿಲ್ 5, 2021: ಆಹಾರ ಸಂಸ್ಕರಣಾ ಹಗೂ ಗುಣಮಟ್ಟ ಪ್ರಾಧಿಕಾರವು, ಆಹಾರ ಉತ್ಪಾದಕರು, ಮಾರಾಟಾಗಾರರು, ಸಂಸ್ಕರಣ ಉದ್ಯಮದವರು ಸೇರಿದಂತೆ ಎಲ್ಲಾ ರೀತಿಯ ಆಹಾರ ಉದ್ಯಮದ ವ್ಯಾಪಾರಸ್ಥರಿಗೆ ಫಾಸ್ಟೇಕ (FoSTac) ತರಬೇತಿ ಮತ್ತು ಪ್ರಮಾಣ ಪತ್ರ ಪಡೆಯುವದನ್ನು ಕಡ್ಡಾಯಗೊಳಿಸಿದೆ.

ಆಹಾರ ಸೇವೆಗಳ ಗುಣಮಟ್ಟದ ಉದ್ದೇಶಗಳನ್ನು ತಿಳಿಸಿಕೊಡಲು ಹಾಗೂ ಸ್ವಚ್ಚತಾ ಕಾಳಜಿಯ ಉತ್ತೇಜನಕ್ಕಾಗಿ ಆಹಾರ ಉದ್ಯಮದ ಪ್ರತಿಯೊಬ್ಬ ವ್ಯಾಪಾರಸ್ಥರು ಈ ತರಬೇತಿಯಲ್ಲಿ ಭಾಗವಹಿಸಿ ಕಡ್ಡಾಯವಾಗಿ ಪ್ರಮಾಣ ಪತ್ರವನ್ನು ಪಡೆಯಬೇಕಾಗಿರುತ್ತದೆ.

ಎಲ್ಲಾ ಆಹಾರ ವಹಿವಾಟು ಉದ್ದಿಮೆದಾರರು ತರಬೇತಿಯೊಂದಿಗೆ ಎಫ್ ಎಸ್.ಎಸ್.ಎ.ಐ ಪರವಾನಿಗೆ ಅಥವಾ ನೊಂದಣಿ ಮಾಡಿಕೊಳ್ಳವುದು ಕಡ್ಡಾಯವಾಗಿದೆ. ಇಲ್ಲದಿದ್ದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಸೆಕ್ಷನ 63 ಪ್ರಕಾರ 5 ಲಕ್ಷದವರೆಗೆ ದಂಡ ಮತ್ತು 6 ತಿಂಗಳವರೆಗೆ ಕಾರಾಗೃಹವಾಸ ಮತ್ತು ನ್ಯಾಯಾಲಯದಲ್ಲಿ ದಾವೆ ಹೂಡಲು ಕಾನೂನಿನಲ್ಲಿ ಅವಕಾಶ ಇರುತ್ತದೆ ಎಂದು ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರದ ಜಿಲ್ಲಾ ಅಂಕಿತ ಅಧಿಕಾರಿ ಪ್ರಕಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!