ಎಂ ಎಸ್ ಆರ್ ಎಸ್ ಕಾಲೇಜು: ರಮಾನಂದ ಶೆಟ್ಟಿಗಾರ್ ವಯೋನಿವೃತ್ತಿ
ಶಿರ್ವ, ಮಾರ್ಚ್ 31, 2021: ಶಿರ್ವದ ಮುಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನಲ್ಲಿ ಸುಮಾರು 35 ವರ್ಷಗಳ ಕಾಲ ಕಾಲೇಜಿನ ಅಧೀಕ್ಷರಾಗಿ ಸೇವೆ ಸಲ್ಲಿಸಿ ಇಂದು ವಯೋನಿವೃತ್ತಿ ಹೊಂದಿದ ರಮಾನಂದ ಶೆಟ್ಟಿಗಾರ್ ಇವರನ್ನು ಕಾಲೇಜಿನ ಆಡಳಿತ ಮಂಡಳಿ, ಬೋಧಕ ಮತ್ತು ಬೋಧಕೇತರ ವೃಂದದವರು ಇಂದು ಆತ್ಮೀಯವಾಗಿ ಸರಳ ಸುಂದರ ಕಾರ್ಯಕ್ರಮದ ಮೂಲಕ ಬೀಳ್ಕೊಡಗೆ ಗೌರವವನ್ನು ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಆಡಳಿತಾಧಿಕಾರಿ ಪ್ರೊ. ವೈ. ಭಾಸ್ಕರ್ ಶೆಟ್ಟಿ, ರಮಾನಂದ ಅವರು ತಮ್ಮ ಶಿಸ್ತು ಮತ್ತು ಕೆಲಸದಲ್ಲಿನ ಶ್ರದ್ಧೆಯ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ ಎಂದು ಹೇಳಿ ಶುಭ ಹಾರೈಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಸಂಚಾಲಕರಾದ ಶ್ರೀ ವಿ. ಸುಬ್ಬಯ್ಯ ಹೆಗ್ಡೆಯವರು ರಮಾನಂದ ಶೆಟ್ಟಿಗಾರರ ನಿವೃತ್ತ ಜೀವನ ಸುಖಕರವಾಗಿರಲೆಂದು ಶುಭ ಹಾರೈಸಿದರು.
ಇದನ್ನೂ ಓದಿ: ಜಾತ್ರೆ ಕುರಿತ ಆದೇಶ: ಮುಖ್ಯಮಂತ್ರಿಗಳ ಆದೇಶವೇ ಅಂತಿಮ ಎಂದ ಸಚಿವ ಸುಧಾಕರ್
ಪ್ರೊ.ಟಿ. ಮುರುಗೇಶಿ ಸ್ವಾಗತಿಸಿ, ಕಾಲೇಜಿನ ಪ್ರಾಂಶುಪಾಲೆ ಡಾ. ನಯನ ಎಂ ಧನ್ಯವಾದ ಸಮರ್ಪಿಸಿದರು. ಉಪಪ್ರಾಂಶುಪಾಲರಾದ ಪ್ರೊ. ಕೆ.ಜಿ. ಮಂಜುನಾಥ್ ಸಾಂದರ್ಭಿಕವಾಗಿ ಮಾತನಾಡಿ ಶುಭ ಹಾರೈಸಿದರು. ಶ್ರೀ ರಮಾನಂದ ಶೆಟ್ಟಿಗಾರರಿಗೆ ಸ್ಮರಣಿಕೆ ನೀಡಿ ಬಿಳ್ಕೊಡಲಾಯಿತು.
ಇದನ್ನೂ ಓದಿ: ದ್ವಿತೀಯ ಅಧಿವೇಶನದ ಇಲಾಖಾ ಪರೀಕ್ಷೆ: ನಿಷೇಧಾಜ್ಞೆ ಜಾರಿ