ಜಾತ್ರೆ ಕುರಿತ ಆದೇಶ: ಮುಖ್ಯಮಂತ್ರಿಗಳ ಆದೇಶವೇ ಅಂತಿಮ ಎಂದ ಸಚಿವ ಸುಧಾಕರ್

 ಜಾತ್ರೆ ಕುರಿತ ಆದೇಶ: ಮುಖ್ಯಮಂತ್ರಿಗಳ ಆದೇಶವೇ ಅಂತಿಮ ಎಂದ ಸಚಿವ ಸುಧಾಕರ್
Share this post

ಮಂಗಳೂರು, ಮಾರ್ಚ್ 31, 2021: ಜಾತ್ರೆ, ಸಭೆ, ಸಮಾರಂಭ ನಿಷೇಧ ಕುರಿತು ಎದ್ದಿರುವ ಗೊಂದಲಕ್ಕೆ ಆರೋಗ್ಯ ಸಚಿವ ಸುಧಾಕರ್ ಕೆ ತೆರೆ ಎಳೆದಿದ್ದಾರೆ.

ಮುಖ್ಯಮಂತ್ರಿಯ ಉನ್ನತ ಮಟ್ಟದ ಸಭೆ ನಂತರ, ಮಾರ್ಚ್ 27 ರಂದು ರಾಜ್ಯ ಮುಖ್ಯ ಕಾರ್ಯದರ್ಶಿ ಸಾರ್ವಜನಿಕ ಸ್ಥಳಗಳಲ್ಲಿ ಜಾತ್ರೆಗಳನ್ನು ನಿಷೇಧಿಸಿ ಆದೇಶ ಹೊರಡಿಸಿದ್ದರು. ಇದನ್ನು ಅನುಸರಿಸಿ ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ ವಿ ಅವರು ಮಾರ್ಚ್ 30 ರಂದು ಸಿ ಆರ್ ಪಿ ಸಿ ಸೆಕ್ಷನ್ 144 ಮತ್ತು ವಿಪತ್ತು ನಿರ್ವಹಣಾ ಕಾಯ್ದೆಯಡಿ ಸಾರ್ವಜನಿಕ ಮತ್ತು ಧಾರ್ಮಿಕ ಸ್ಥಳಗಳಲ್ಲಿ ನಡೆಯುವ ಎಲ್ಲಾ ಜಾತ್ರೆ, ಸಭೆಗಳು ಮತ್ತು ಆಚರಣೆಗಳನ್ನು ನಿಷೇಧಿಸಿ ಆದೇಶಿಸಿದ್ದರು.

ಇದಕ್ಕೆ ಹಲವರ ವಿರೋಧ ವ್ಯಕ್ತವಾಗಿದ್ದರಿಂದ, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ನಿನ್ನೆ ಸಂಜೆ ಸ್ಪಷ್ಟೀಕರಣವನ್ನು ನೀಡಿ,ಈಗಾಗಲೇ ನಿಗದಿಯಾಗಿದ್ದ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು, ಜಾತ್ರೆ, ಕೋಲ, ನೇಮ, ಮತ್ತು ಇತರ ಕಾರ್ಯಕ್ರಮಗಳು ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಿ ಮುಂದುವರಿಸಬಹುದು ಎಂದು ಹೇಳಿದ್ದರು.

ಸಚಿವರು ಮತ್ತು ಜಿಲ್ಲಾಧಿಕಾರಿಗಳ ಈ ವಿರೋಧಾತ್ಮಕ ಹೇಳಿಕೆಗಳು ಜನರನ್ನು ಗೊಂದಲಕ್ಕೀಡು ಮಾಡಿತ್ತು. .

ಆರೋಗ್ಯ ಸಚಿವ ಸುಧಾಕರ್ ಈಗ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

“ಎರಡು ದಿನಗಳ ಹಿಂದೆ ಸಭೆಯ ನಂತರ ಸಿಎಂ ಅಂತಿಮ ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ. ಅದೇ ಆದೇಶ ಎಲ್ಲಾ ಜಿಲ್ಲೆಗಳಿಗೂ ಅನ್ವಯ,” ಎಂದು ಸುಧಾಕರ್ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ ತಿಳಿಸಿದರು.

“ಸಿಎಂ ಘೋಷಿಸಿದ, ಮುಖ್ಯ ಕಾರ್ಯದರ್ಶಿ ಬಿಡುಗಡೆ ಮಾಡಿದ (ಆದೇಶ) ಎಲ್ಲಾ 30 ಜಿಲ್ಲೆಗಳಿಗೆ ಅನ್ವಯಿಸುತ್ತದೆ. ಮುಖ್ಯಮಂತ್ರಿಯವರ ಆದೇಶವು ಸರ್ಕಾರದ ಆದೇಶವಾಗಿದೆ” ಎಂದು ಅವರು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲೆಯ ಬೆಳವಣಿಗೆಗಳ ಬಗ್ಗೆ ತನಗೆ ತಿಳಿದಿಲ್ಲ ಎಂದು ಅವರು ಹೇಳಿದರು. ಸಚಿವ ಸುಧಾಕರ್ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಎರಡು ದಿನಗಳ ಪ್ರವಾಸದಲ್ಲಿದ್ದಾರೆ.

Subscribe to our newsletter!

Other related posts

error: Content is protected !!