ಹೋಳಿ ಹಬ್ಬದ ನಿಮಿತ್ತ ಮದ್ಯ ನಿಷೇಧಕ್ಕೆ ಜಿಲ್ಲಾಧಿಕಾರಿ ಸೂಚನೆ

 ಹೋಳಿ ಹಬ್ಬದ ನಿಮಿತ್ತ ಮದ್ಯ ನಿಷೇಧಕ್ಕೆ ಜಿಲ್ಲಾಧಿಕಾರಿ ಸೂಚನೆ
Share this post

ಕಾರವಾರ, ಮಾರ್ಚ್ 27, 2021: ಹೋಳಿ ಹಬ್ಬದ ಹಿನ್ನಲೆಯಲ್ಲಿ ಮಾ. 28, 29 ರಂದು ಜಿಲ್ಲೆಯಾದ್ಯಂತ ಎಲ್ಲಾ ರೀತಿಯ ಮದ್ಯ ಸಾಗಾಟ ಮತ್ತು ಮಾರಾಟವನ್ನು ನಿಷೇಧಿಸಲು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ಆದೇಶ ಹೊರಡಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು,ಜಿಲ್ಲೆಯಾದ್ಯಂತ ಮಾ. 28 ರಂದು ಕಾಮದಹನ/ಹೊಳಿ ಹಬ್ಬ ಮತ್ತು ಮಾ. 29 ರಂದು ರಂಗ ಪಂಚಮಿ ನಿಮಿತ್ತ ಬಣ್ಣದೋಕುಳಿ ಆಟವನ್ನು ಆಚರಿಸುವವರಿದ್ದಾರೆ.

ಹೋಳಿ ಹಬ್ಬಆಚರಣೆ ಸಮಯದಲ್ಲಿ ಯುವಕರು ಸಾರಾಯಿ ಕಡಿದುಅಥವಾ ಅಮಲು ಪದಾರ್ಥ ಸೇವಿಸಿ ಕಾಮದಹನ ಮತ್ತು ಬಣ್ಣದೋಕುಳಿ ಆಟವಾಡುವಾಗ ಸಾರ್ವಜನಿಕರಿಗೆ ಮತ್ತು ಸಂಚರಿಸುವ ವಾಹನಗಳಿಗೆ ತೊಂದರೆ ಉಂಟುಮಾಡುವ ಸಾಧ್ಯತೆಯಿದ್ದು, ಆ ಸಮಯದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯುಂಟಾಗುವ ಸಂಭವವಿರುತ್ತದೆ.

ಹೀಗಾಗಿ ಜಿಲ್ಲೆಯಲ್ಲಿ ಕಾಮದಹನ ಮತ್ತು ಹೋಳಿ ಹಬ್ಬ, ರಂಗಪಂಚಮಿ ದಿನಗಳಂದು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಬಾರ್/ವೈನ್ ಶಾಪ್‍ಗಳನ್ನು ಹಾಗೂ ಎಲ್ಲಾ ರೀತಿಯ ಮದ್ಯ ಸಾಗಾಟ ಮತ್ತು ಮಾರಾಟವನ್ನು ನಿಷೇಧಿಸಲಾಗಿರುತ್ತದೆ.

ಶಿರಸಿ ತಾಲೂಕಿನಲ್ಲಿ ಮಾ. 26 ರಂದು ಸಂಜೆ6 ರಿಂದ ಮಾ. 28 ರ ಮಧ್ಯರಾತ್ರಿ 12 ವರೆಗೆ, ಕಾರವಾರ, ಅಂಕೋಲಾ, ಭಟ್ಕಳ, ಕುಮಟಾ, ಹೊನ್ನಾವರ, ದಾಂಡೇಲಿ, ಹಳಿಯಾಳ, ಜೋಯಿಡಾ ತಾಲೂಕುಗಳಲ್ಲಿ ಮಾ. 28 ರ ಬೆಳಿಗ್ಗೆ 6 ರಿಂದ ಮಾ. 29 ರ ಮಧ್ಯರಾತ್ರಿ 12 ರವರೆಗೆ, ಯಲ್ಲಾಪುರ ತಾಲೂಕಿನಲ್ಲಿ ಮಾ. 29 ರ ಬೆಳಿಗ್ಗೆ 6 ರಿಂದ ಮಧ್ಯರಾತ್ರಿ 12 ರವರೆಗೆ ಹಾಗೂ ಮುಂಡಗೋಡ ತಾಲೂಕಿನಲ್ಲಿ ಮಾ. 29 ರ ಬೆಳಿಗ್ಗೆ 6 ರಿಂದ ಏ. 1ರ ಮಧ್ಯರಾತ್ರಿ 12 ರವರೆಗೆಮದ್ಯ ನಿಷೇದ ಆದೇಶ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!