ಹುತಾತ್ಮ ದಿನ: ಕಾರವಾರದಲ್ಲಿ ರಕ್ತದಾನ ಶಿಬಿರ

 ಹುತಾತ್ಮ ದಿನ: ಕಾರವಾರದಲ್ಲಿ ರಕ್ತದಾನ ಶಿಬಿರ
Share this post

ಕಾರವಾರ , ಮಾರ್ಚ್ 23, 2021: ಹುತಾತ್ಮ ದಿನದ ಪ್ರಯುಕ್ತ ರಕ್ತದಾನ ಶಿಬಿರ ಕಾರವಾರದಲ್ಲಿ ಇಂದು ನಡೆಯಿತು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಘಟಕ ಕಾರವಾರ, NIFAA (ನ್ಯಾಷನಲ್ ಇಂಟಿಗ್ರೇಟೆಡ್ ಫೋರಮ್ ಆಫ್ ಆರ್ಟಿಸ್ಟ್ಸ್ ಆಂಡ್ ಆಕ್ಟಿವಿಸ್ಟ್ಸ್),ಕ್ರಿಮ್ಸ್ ಕಾರವಾರ, ಪಹರೆ ವೇದಿಕೆ ಕಾರವಾರ ಹಾಗೂ ಇತರ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ವೈದ್ಯಕೀಯ ಕಾಲೇಜು ಹಾಗೂ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ರೆಡ್ ಕ್ರಾಸ್ ಸಂಸ್ಥೆ ಉತ್ತರಕನ್ನಡ ಶಾಖೆಯ ನೇತೃತ್ವದಲ್ಲಿ ಕಾರವಾರದಲ್ಲಿ ನಡೆಯಿತು.

ಪ್ರಾಸ್ತಾವಿಕವಾಗಿ ಮಾತನಾಡಿದ ರೆಡ್ ಕ್ರಾಸ್ ಚೇರ್ಮನ ವಿ.ಎಂ.ಹೆಗಡೆ ಜಗತ್ತಿನಲ್ಲಿ ಜನರಿಗಾಗಿ ರೆಡ್ ಕ್ರಾಸ್ ಸಂಸ್ಥೆ ಮಾಡುತ್ತಿರುವ ಸೇವೆಯ ಬಗ್ಗೆ ತಿಳಿಸಿದರು.

ರಕ್ತದಾನ ಶಿಬಿರವನ್ನು ಜಿಲ್ಲಾಸ್ಪತ್ರೆ ನಿರ್ದೇಶಕ ಡಾ.ಗಜಾನನ ನಾಯಕ ಹಾಗೂ ಜಿಲ್ಲಾ ಸರ್ಜನ್ ಶಿವಾನಂದ ಕುಡ್ತರಕರ ನೆರವೇರಿಸಿದರು.

ಇದನ್ನೂ ಓದಿ: ಕೋವಿಡ್ ಸುರಕ್ಷಾ ನಿಯಮ ಉಲ್ಲಂಘನೆ ದಂಡ ಪ್ರಕರಣ ಹೆಚ್ಚು ಮಾಡಿ: ಜಿಲ್ಲಾಧಿಕಾರಿ

ಉತ್ತರಕನ್ನಡ ಜಿಲ್ಲಾಧಿಕಾರಿ ಹಾಗೂ ಉತ್ತರಕನ್ನಡ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷರಾದ ಮುಲ್ಲೈ ಮುಗಿಲನ್ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತ ಇಂದು ರೆಡಕ್ರಾಸ ಸಂಸ್ಥೆ ಜಗತ್ತಿನಾದ್ಯಾಂತ ಅತ್ಯಂತ ಪ್ರಭಾವಿಯಾಗಿ ಕಾರ್ಯನಿರ್ವಹಿಸುತಿದ್ದು ಜಗತ್ತಿನಾದ್ಯಂತ ರಕ್ತದ ಅವಶ್ಯಕತೆ ಆಸ್ಪತ್ರೆಗಳಲ್ಲಿ ಹೆಚ್ಚುತ್ತಿದ್ದು ಅದನ್ನು ಪೂರೈಸುವತ್ತ ಸಂಸ್ಥೆಯ ಪಾತ್ರ ಅತ್ಯಂತ ಮಹತ್ವದ್ದು ಎಂದರು.

Also read: Rear Admiral DK Goswami is Admiral Superintendent of Karwar Naval Ship Repair Yard

“ದಾನಿಗಳು ರಕ್ತದಾನ ಮಾಡಲು ಸ್ವಯಂ ಪ್ರೇರಿತವಾಗಿ ಜಾತಿ ಮತಗಳ ಭೇದವೆಣಿಸದೇ ಮುಂದೆ ಬರಬೇಕು,” ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಕ್ರಿಮ್ಸ್ ನಿರ್ದೇಶಕರಾದ ಡಾ.ಗಜಾನನ ನಾಯಕ ಅವರು ರಕ್ತದಾನದ ಮಹತ್ವ ಹಾಗೂ ಇಂದು ಹೆಚ್ಚುತ್ತಿರುವ ಜನಸಂಖ್ಯೆಯಿಂದ ರಕ್ತದ ಬೇಡಿಕೆ ಗಣನೀಯವಾಗಿ ಹೆಚ್ಚುತಿದ್ದು ಜಗತ್ತಿನಲ್ಲಿ ಪ್ರಯೋಗಾಲಯಗಳಲ್ಲಿ ಉತ್ಪಾದಿಸಲು ಸಾಧ್ಯವಾಗದ ಏಕೈಕ ವಸ್ತು ಎಂದರೆ ರಕ್ತ. ಹೀಗಾಗಿ ರಕ್ತದಾನದ ಅವಶ್ಯಕತೆಯನ್ನು ಎಲ್ಲರೂ ತಿಳಿದುಕೊಳ್ಳಬೇಕು ಎಂದರು.

ರಕ್ತದಾನದ ಕುರಿತಾಗಿ ಸಾರ್ವಜನಿಕರಲ್ಲಿ ಇರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಕರೆ ನೀಡಿದರು.

ಇದನ್ನೂ ಓದಿ: ಟ್ರೇಡ್ ಲೈಸನ್ಸ್ ಪಡೆಯಲು ಸೂಚನೆ

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪಹರೆ ವೇದಿಕೆಯ ಸಂಚಾಲಕ ನಾಗರಾಜ ನಾಯಕ ಸಭೆಯನ್ನುದ್ದೇಶಿಸಿ ಯುವಕರು ರಕ್ತದಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವದರ ಮುಖಾಂತರ ಸಮಾಜಕ್ಕೆ ನೆರವಾಗ ಬೇಕೆಂದು ಕರೆ ನೀಡಿದರು.

ಇಂದಿನ ಕಾರ್ಯಕ್ರಮದ ಯಶಸ್ಸಿಗೆ ಪೊಲೀಸ್ ಇಲಾಖೆಯ ಜಿಲ್ಲಾ ಸಂಚಾರಿ ಪೊಲೀಸ್, ಡಿ.ಏ.ಆರ್, ಪಹರೆ ವೇದಿಕೆ, ನಾಗಾರ್ಜುನ ಕನ್ಸಟ್ರಕ್ಷನ್, ಬ್ಲಡಡೋನರ್ಸ್ ಗ್ರೂಪ್ ಕಾರವಾರ, ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಜನಶಕ್ತಿ ವೇದಿಕೆ ಇವರು ಸಂಪೂರ್ಣವಾಗಿ ಸಹಕರಿಸಿದರು. ಸಾರ್ವಜನಿಕರು ಹಾಗೂ ಯುವಕರು ರಕ್ತದಾನದಲ್ಲಿ ಉತ್ಸಾಹದಲ್ಲಿ ಭಾಗವಹಿಸಿದ್ದು ವಿಷೇಶವಾಗಿತ್ತು.

ರಕ್ತದಾನದಲ್ಲಿ ರಕ್ತದಾನ ಕೇಂದ್ರದ ವೈದ್ಯೆ ಡಾ.ಮೇಘಾ ನಾಯಕ ಹಾಗೂ ಸಿಬ್ಬಂದಿ ವರ್ಗ ತಮ್ಮ ಸಂಪೂರ್ಣ ಸಹಕಾರವನ್ನು ನೀಡಿ ಸಹಕರಿಸಿದರು.

ಸಂಸ್ಥೆಯ ಕಾರ್ಯದರ್ಶಿ ಜಗದೀಶ ಬಿರ್ಕೋಡಿಕರ ಅವರು ಆಗಮಿಸಿದ ಎಲ್ಲ ಅತಿಥಿ ಗಣ್ಯರನ್ನು ಹಾಗೂ ಈ ಕಾರ್ಯಕ್ರಮದ ಯಶಸ್ವಿಗೆ ಕಾರಣಿಭೂತರಾದ ಎಲ್ಲ ರಕ್ತದಾನಿಗಳನ್ನು ಮತ್ತು ವೈದ್ಯಕೀಯ ಕಾಲೇಜಿನ ಎಲ್ಲ ಸಿಬ್ಬಂದಿ ವರ್ಗದವರಿಗೆ ಹಾಗೂ ಭಾರತೀಯ ರೆಡ್ ಕ್ರಾಸ ಸಂಸ್ಥೆಯ ಎಲ್ಲ ಪದಾಧಿಕಾರಿಗಳಿಗೆ ಧನ್ಯವಾದ ಸಮರ್ಪಿಸಿದರು..

Subscribe to our newsletter!

Other related posts

error: Content is protected !!