ಕೋವಿಡ್-19, ಎರಡನೇ ಅಲೆಯ ಜಾಗೃತ ಜಾಥಾ: ಜಿಲ್ಲಾಧಿಕಾರಿಯಿಂದ ಚಾಲನೆ

 ಕೋವಿಡ್-19, ಎರಡನೇ ಅಲೆಯ ಜಾಗೃತ ಜಾಥಾ: ಜಿಲ್ಲಾಧಿಕಾರಿಯಿಂದ ಚಾಲನೆ
Share this post

ಕಾರವಾರ, ಮಾರ್ಚ್ 22, 2021: ಕೋವಿಡ್-19 ಎರಡನೇ ಅಲೆಯ ಅಪಾಯವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮಾರ್ಚ 22 ರಿಂದ 24 ರವರೆಗೆ ಹಮ್ಮಿಕೊಂಡಿರುವ ಜಾಗೃತಿ ಜಾಥಾಕ್ಕೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಸೋಮವಾರ ಜಿಲ್ಲಾಧಿಕಾರಿಕ ಚೇರಿ ಆವರಣದಲ್ಲಿ ಚಾಲನೆ ನೀಡಿದರು.

ಜಾಥಾ ಜಿಲ್ಲಾಧೀಕಾರಿ ಕಚೇರಿ ಆವರಣದಿಂದ ಹೊರಟು, ಸುಭಾಷ ಸರ್ಕಲ್-ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ-ಗಣಪತಿದೇವಸ್ಥಾನ- ಸವಿತಾ ಹೋಟೆಲ್ ಸರ್ಕಲ್-ಕಾಜುಬಾಗರಸ್ತೆ-ಒಲ್ಡ್ ಸಿವಿಲ್ ಆಸ್ಪತ್ರೆ ರಸ್ತೆಕ್ರಾಸ್ ತಹಶೀಲ್ದಾರ್ ಕಚೇರಿಯ ವರೆಗೆ ಸಂಚರಿಸಿ ಜನರಲ್ಲಿ ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್ ಧರಿಸುವ ಕುರಿತು ಜಾಗೃತಿ ಮೂಡಿಸಿತು.

ಜನರಲ್ಲಿ ಜಾಗೃತಿ ಮೂಡಿಸುವ ಸಂಬಂಧ ಕಾರವಾರ ಸಹಾಯಕ ಕಮೀಷನರ ವಿದ್ಯಾಶ್ರೀ ಚಂದರಗಿಯವರ ಅಧ್ಯಕ್ಷತೆಯಲ್ಲಿ ಜನಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿರುತ್ತದೆ.
.
ಈ ಜಾಥಾ ಕಾರ್ಯಕ್ರಮದಲ್ಲಿಎಲ್ಲಾ ತಾಲೂಕು ಮಟ್ಟದ ಅಧಿಕಾರಿ ಮತ್ತು ಸಿಬ್ಬಂದಿ, ಕಾರವಾರ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ತಾಲೂಕು ಆರೋಗ್ಯಧಿಕಾರಿ ಭಾಗವಹಿಸಿದ್ದರು.

ಜಿಲ್ಲಾ ನ್ಯಾಯಾಲಯ ಆವರಣ, ಕೆಎಸ್‍ಆರ್ಟಿಸಿ ಬಸ್ ನಿಲ್ದಾಣ, ಗಣಪತಿ ದೇವಸ್ಥಾನ ಸ್ಥಳಗಳಲ್ಲಿ ಕೋವಿಡ್-19 ಜಾಗೃತಿ ಕೇಂದ್ರ ತೆರೆದು ಮತಗಟ್ಟೆ ಮಟ್ಟದ ಅಧಿಕಾರಿಗಳನ್ನು ನೇಮಿಸಲಾಗಿತ್ತು.

Subscribe to our newsletter!

Other related posts

error: Content is protected !!