ಗ್ರಾಹಕರು ಹಕ್ಕುಗಳನ್ನು ಅರಿತು ಜಾಗೃತರಗಿರಬೇಕು : ಮುಲ್ಲೈ ಮುಗಿಲನ್

 ಗ್ರಾಹಕರು ಹಕ್ಕುಗಳನ್ನು ಅರಿತು ಜಾಗೃತರಗಿರಬೇಕು : ಮುಲ್ಲೈ ಮುಗಿಲನ್
Share this post

ಕಾರವಾರ, ಮಾರ್ಚ್ 18, 2021: ಗ್ರಾಹಕರು ತಮ್ಮ ಹಕ್ಕುಗಳನ್ನು ಅರಿತು ಜಾಗೃತಿರಾಗಿರಬೇಕೆಂದು ಜಿಲ್ಲಾಧಿಕಾರಿ ಮುಲೈ ಮುಗಿಲನ್ ಹೇಳಿದರು.

ಪ್ರತಿಯೊಬ್ಬ ವ್ಯಕ್ತಿಯೂ ತಾನು ಕೊಂಡುಕೊಳ್ಳುವ  ವಸ್ತುಗಳ ಮೇಲೆ ಇರುವ ಎಮ್.ಆರ್.ಪಿ ಕ್ಯ್ವಾಲಿಟಿ, ಸ್ಯ್ಟಾಂಡರ್ಡ್ ಬಗ್ಗೆ ಮಾಹಿತಿ ಹೊಂದಿರಬೇಕು.  ಈ ಕುರಿತು ಹೆಚ್ಚಿನ ಜಾಗೃತಿ ಮೂಡಿಸಬೇಕಾಗಿದೆ ಎಂದರು.

ಈ  ವರ್ಷದ ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆಯ ಘೋಷ ವಾಕ್ಯ ಟ್ಯಾಕಲಿಂಗ್ ಪ್ಲಾಸ್ಟಿಕ್ ಪೊಲ್ಯುಶನ್ ಅಗಿದ್ದು, ನಾವು ಮತ್ತು ನಮ್ಮ ಸುತ್ತಮುತ್ತಲಿನ ಜನತೆ, ಪ್ಲಾಸ್ಟಿಕ್ ಚೀಲ ಮತ್ತು ವಸ್ತುಗಳನ್ನು ಖರೀದಿಸುವುದು ಮತ್ತು   ಬಳಕೆ ಮಾಡುವುದನ್ನು ನಿಲ್ಲಿಸಬೇಕು. ಇದು ಪರಿಸರವನ್ನು ಕಾಪಾಡುವಲ್ಲಿ ಮಹತ್ವದ  ಪಾತ್ರ ವಹಿಸುತ್ತದೆ ಎಂದರು.

ಹಿರಿಯ ಸಿವೀಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಟಿ.ಗೋವಿಂದಯ್ಯಾ ಅವರು ಮಾತನಾಡಿ ಗ್ರಾಹಕರಾದವರು ಯಾವುದೇ ವಸ್ತುಗಳನ್ನು ಕೊಂಡಾಗ ವಸ್ತುಗಳ ರಶೀದಿಯನ್ನು ಪಡೆದುಕೊಳ್ಳಬೇಕು.  ಇದು ನಮಗೆ ಗ್ರಾಹಕರ ವೇದಿಕೆಯಲ್ಲಿ ದಾವೆ ಹೂಡಲು ಸಹಕಾರಿಯಾಗಿರುತ್ತದೆ.

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸದಸ್ಯ ಹಾಗೂ ಪ್ರಭಾರ ಅಧ್ಯಕ್ಷರಾದ ನಜೀರ ಅಹ್ಮದ್ ಯು.ಶೇಖ್ ಅವರು ಮಾತನಾಡಿ, ಜಿಲ್ಲಾ ಗ್ರಾಹಕರ ವೇಧಿಕೆ ಈಗ ಜಿಲ್ಲಾ  ಗ್ರಾಹಕರ ಆಯೋಗವಾಗಿರುತ್ತದೆ.  ಇಲ್ಲಿ ಒಂದು ಕೋಟಿ (ಮೊದಲು 20 ಲಕ್ಷ) ವರೆಗೆ ಪರಿಹಾರ ದೂರುಗಳನ್ನು ದಾಖಲಿಸಬಹುದಾಗಿರುತ್ತದೆ.

ಗ್ರಾಹಕರು ದೂರು ದಾಖಲಿಸಲು ಜಿಲ್ಲಾ ರಾಜ್ಯ, ರಾಷ್ಟ್ರ ಎಂದು 3 ಆಯೋಗಳನ್ನು ರಚಿಸಲಾಗಿರುತ್ತದೆ. ಒಂದು ಕೋಟಿಯಿಂದ 10 ಕೋಟಿಯವರೆಗಿನ ಸರಕು ಸೇವೆಗಳ ದೂರುಗಳನ್ನು ರಾಜ್ಯ ಆಯೋಗದಲ್ಲಿ ಹಾಗೂ 10 ಕೋಟಿ ಗಿಂತ ಹೆಚ್ಚಿನ ಮೌಲ್ಯದ ದೂರು ಇದ್ದಲ್ಲಿ ರಾಷ್ಟ್ರ ಆಯೋಗದಲ್ಲಿ ದೂರು ದಾಖಲಿಸಿ ಪರಿಹಾರ ಪಡೆದುಕೊಳ್ಳಬಹುದಾಗಿದೆ ಎಂದರು.  

ಜಿಲ್ಲಾಡಳಿತ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಾನೂನು ಮಾಪನ ಶಾಸ್ತ್ರ ಇಲಾಖೆ ಹಾಗೂ ದಿವೇಕರ ವಾಣಿಜ್ಯ ಮಹಾವಿದ್ಯಾಲಯ ಮತ್ತು ಕರ್ನಾಟಕ ವಿಶ್ವವಿದ್ಯಾಲಯದ ಪಿ.ಜಿ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ದಿವೇಕರ ವಾಣಿಜ್ಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಕೇಶವ ಕೆ.ಜಿ ಅವರು ಗ್ರಾಹಕರ ಹಕ್ಕು ಹಾಗೂ ಜಾಗೃತಿ ಬಗ್ಗೆ ಉಪನ್ಯಾಸ ನೀಡಿದರು.  ಜಿಲ್ಲಾ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯಾವಹಾರಗಳ ಇಲಾಖೆಯ ಉಪನಿದೇರ್ಶಕ ಮಂಜುನಾಥ ರೇವಣಕರ ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕರಾದ ಟಿ.ಎನ್ ದೇವರಾಜು ಅವರು ಸೇರಿದಂತೆ ಇತರರು ಉಪಸ್ಥಿರಿದ್ದರು.

Subscribe to our newsletter!

Other related posts

error: Content is protected !!