ಘನ ವಾಹನಗಳ ಸಂಚಾರದಲ್ಲಿ ಬದಲಿ ವ್ಯವಸ್ಥೆ

 ಘನ ವಾಹನಗಳ ಸಂಚಾರದಲ್ಲಿ ಬದಲಿ ವ್ಯವಸ್ಥೆ
Share this post

ಮಂಗಳೂರು, ಫೆಬ್ರವರಿ 15, 2021: ಕರ್ನಾಟಕ ರಾಜ್ಯ ಹೆದ್ದಾರಿ ಪ್ರಾಧಿಕಾರ, ಲೋಕೋಪಯೋಗಿ ಇಲಾಖೆ, ಮಂಗಳೂರು ವಿಭಾಗದಿಂದ ಸುಳ್ಯ ತಾಲೂಕಿನ ಎಲೆಮಲೆ-ಅರಂತೋಡು ರಸ್ತೆಯ 3.60 ಕಿ.ಮೀ (ಸೇವಾಜೆ) ನ ಹಳೆಯ ಸೇತುವೆಯನ್ನು ಕೆಡವಿ ಅದೇ ಸ್ಥಳದಲ್ಲಿ 10 ಮೀಟರ್ ಅಗಲಕ್ಕೆ ಹೊಸ ಸೇತುವೆ ನಿರ್ಮಿಸಬೇಕಾಗಿರುವುದರಿಂದ ಫೆಬ್ರವರಿ 15 ರಿಂದ ಜೂನ್ 30 ರವರೆಗೆ ಈ ರಸ್ತೆಯಲ್ಲಿ ಘನ ವಾಹನಗಳ ಸಂಚಾರವವನ್ನು ನಿಷೇಧಿಸಲಾಗಿದೆ.

ಸಾರ್ವಜನಿಕರು ಬದಲಿ ರಸ್ತೆಯಾಗಿ ಅರಂತೋಡು ಮಾರ್ಗದಿಂದ ಎಲೆಮಲೆಗೆ ಸಂಚರಿಸುವ ವಾಹನಗಳು ಸುಳ್ಯ-ಪೈಚಾರು-ಸೋಂಣಂಗೇರಿ-ದೊಡ್ಡತೋಟ ಮೂಲಕ ಹಾಗೂ ಎಲೆಮಲೆ ಮಾರ್ಗದಿಂದ ಅರಂತೋಡಿಗೆ ಸಂಚರಿಸುವ ವಾಹನಗಳು ದೊಡ್ಡತೋಟ-ಸೋಣಂಗೇರಿ-ಪೈಚಾರು ಮೂಲಕ ಅರಂತೋಡಿಗೆ ಸಂಚರಿಸಬಹುದು ಎಂದು ಮಂಗಳೂರು ವಿಭಾಗದ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!