ದೈವ ನಡೆ ಪುಸ್ತಕ ಬಿಡುಗಡೆ
ಬೆಳ್ತಂಗಡಿ ಫೆ 05, 2021: ಖ್ಯಾತ ಜ್ಯೋತಿಷಿ, ಬೆಳ್ತಂಗಡಿ ಚರ್ಚ್ ಶಾಲೆಯ ಶಿಕ್ಷಕ, ಮಂಜುನಾಥ ಭಟ್ ಅಂತರ ಅವರು ರಚಿಸಿದ ದೈವ ನಡೆ ನಂಬಿಕೆ ನಡವಳಿಕೆ ಪುಸ್ತಕ ಅಳದಂಗಡಿಯ ಅರಮನೆಯಲ್ಲಿ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲರು ಬಿಡುಗಡೆಗೊಳಿಸಿದರು.
“ಪುಸ್ತಕವು ತುಳುನಾಡಿನ ದೈವಾರಾಧನೆ ಬಗ್ಗೆ ಬೆಳಕು ಚೆಲ್ಲುತ್ತದೆ. ದೈವಾರಾಧನೆ ಹೇಗೆ ಮಾಡಬೇಕು, ರೀತಿ ರಿವಾಜುಗಳ ಬಗ್ಗೆ ಬಹಳ ಚೆನ್ನಾಗಿ ತಿಳಿಸಲಾಗಿದೆ. ಸಂಪ್ರದಾಯ ಹಾಗೂ ಕಟ್ಟುಪಾಡುಗಳನ್ನು ಮರೆಯುತ್ತಿರುವ ಈ ಹೊತ್ತಿನಲ್ಲಿ ಈ ಪುಸ್ತಕ ನಮ್ಮ ಸಂಸ್ಕೃತಿಯನ್ನು ಮನನ ಮಾಡುವಂತೆ ಮಾಡುತ್ತಿದೆ,” ಎಂದು ಡಾ. ಪದ್ಮಪ್ರಸಾದ ಅಜಿಲರು ಹೇಳಿದರು.
ಲೇಖಕ, ಆಸ್ರಣ್ಣರಾದ ಮಂಜುನಾಥ ಭಟ್ ಅಂತರ ಹಾಗೂ ಮಂಜುವಾಣಿ ಉಪಸಂಪಾದಕ ಚಂದ್ರಶೇಖರ ಅಂತರ ಉಪಸ್ಥಿತರಿದ್ದರು.
ಸಂಜೀವ ಶ್ರೀ ಅನುಗ್ರಹ ಪಾರೆಂಕಿ ಸ್ವಾಗತಿಸಿದರು, ಅಳದಂಗಡಿ ಅರಮನೆಯ ಚಾವಡಿ ನಾಯಕರಾದ ರಾಜಶೇಖರ ಶೆಟ್ಟಿ ವಂದಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಶುಭ ಕೋರಿದ್ದು, ಧರ್ಮಸ್ಥಳದ ಸಂಸ್ಕೃತಿ ಮತ್ತು ಸಂಶೋಧನ ಪ್ರತಿಷ್ಠಾನದ ಡಾ. ಎಸ್. ಆರ್. ವಿಘ್ನರಾಜ ಧರ್ಮಸ್ಥಳ ಈ ಪುಸ್ತಕದ ಮುನ್ನುಡಿ ಬರೆದಿದ್ದಾರೆ. ಯತೀಶ್ ನಿಡಿಗಲ್ ಅವರು ವಿನ್ಯಾಸ ಮಾಡಿದ್ದಾರೆ.
ಉಜಿರೆಯ ಮಂಜುಶ್ರೀ ಮುದ್ರಣಾಲಯದಲ್ಲಿ ಅಚ್ಚಾಗಿರುವ ಈ ಪುಸ್ತಕದ ಬೆಲೆ ₹ 50 ರೂ.